ವೃತ್ತಿಪರ ಜೀವನದಲ್ಲಿ ಅಭೂತಪೂರ್ವ ಯಶಸ್ಸುಗಳಿಸಿದ ಲತಾ ಮಂಗೇಶ್ಕರ್ ಅವರು, ಬದುಕಿನುದ್ದಕ್ಕೂ ಅವಿವಾಹಿತೆಯಾಗಿಯೇ ಉಳಿದಿದ್ದೇಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಲೇ ಬಂದಿದೆ.
ತಮ್ಮ ವೈಯಕ್ತಿಕ ಬದುಕಿನ ಈ ನಿರ್ಧಾರದ ಕುರಿತು ಅವರು ಎಂದೂ ಯಾವ ಸಂದರ್ಶನದಲ್ಲೂ ಬಾಯಿಬಿಟ್ಟಿಲ್ಲ. ಆದರೆ ಅವರು ರಾಜಮನೆತನದ ವ್ಯಕ್ತಿಯೊಬ್ಬರನ್ನು ಇಷ್ಟಪಟ್ಟಿದ್ದರು; ಅನಿವಾರ್ಯ ಕಾರಣಗಳಿಂದಾಗಿ ಅವರಿಬ್ಬರೂ ಒಂದಾಗಲು ಸಾಧ್ಯವಾಗಲಿಲ್ಲ ಎಂದು ಕೆಲವು ವರದಿಗಳು ಹೇಳಿವೆ.
ಪತ್ರಿಕಾ ಡಾಟ್ ಕಾಂ ವರದಿಯ ಪ್ರಕಾರ, ರಾಜ ಸ್ಥಾನದ ರಾಜಮನೆತನದ ರಾಜ್‌ಸಿಂಗ್ ದುಂಗಾ ರ್ಪುರ್ ಎಂಬವರನ್ನು ಲತಾ ಪ್ರೀತಿಸುತ್ತಿದ್ದರು. ರಾಜ್‌ಸಿಂಗ್ ಅವರು ದುಂಗಾರ್ಪುರ್‌ನ ಅಂದಿನ ದೊರೆ ಮಹರವಾಲ್ ಲಕ್ಷ್ಮಣ್ ಸಿಂಗ್‌ಜೀ ಅವರ ಪುತ್ರ. ರಾಜ್‌ಸಿಂಗ್, ಲತಾ ಇಷ್ಟಪಟ್ಟಿದ್ದರು. ಆದರೆ ರಾಜಮನೆತನದ ಹುಡುಗಿಯನ್ನೇ ಮದುವೆಯಾಗ ಬೇಕು ಎಂಬ ಒತ್ತಡ ರಾಜ್‌ಸಿಂಗ್ ಮೇಲಿತ್ತು.
ಲತಾರನ್ನು ಪ್ರೀತಿಯಿಂದ “ಮಿಟ್ಟೂ’ ಎಂದು ಕರೆಯುತ್ತಿದ್ದರಂತೆ. ಇಬ್ಬರು ಇನ್ನೇನು ದಾಂಪತ್ಯಕ್ಕೆ ಕಾಲಿಡಬೇಕು ಎಂದು ನಿರ್ಧರಿಸಿಯೇಬಿಟ್ಟಿದ್ದರು. ಆದರೆ ಲಕ್ಷ್ಮಣ್‌ಸಿಂಗ್‌ಜೀ ಅವರು ಇದಕ್ಕೆ ಒಪ್ಪಲಿಲ್ಲ. ತಂದೆ ಮೇಲೆ ಅಪಾರ ಗೌರವವಿದ್ದ ಕಾರಣ, ಕೊನೆಗೂ ರಾಜ್ ಮಣಿಯಲೇಬೇಕಾ ಯಿತು. ಆದರೆ “ಯಾರನ್ನೂ ಮದುವೆಯಾಗುವಂತೆ ನನ್ನ ಮೇಲೆ ಒತ್ತಡ ಹೇರುವಂತಿಲ್ಲ. ನಾನು ಬದುಕಿ ನುದ್ದಕ್ಕೂ ಅವಿವಾಹಿತನಾಗಿಯೇ ಉಳಿಯುತ್ತೇನೆ’ ಎಂದು ಶಪಥ ಮಾಡಿದರು. ಲತಾ ಅವರೂ ಇಂಥದ್ದೇ ನಿರ್ಧಾರ ಕೈಗೊಂಡು, ಕೊನೆಯವರೆಗೂ ಕನ್ಯೆಯಾಗಿಯೇ ಉಳಿದರು.
ಹೃದಯದಲ್ಲೇ ಉಳಿಯಲಿ: 2013ರಲ್ಲಿ ಸಂದರ್ಶನವೊಂದರಲ್ಲಿ, “ನಿಮ್ಮ ಬದುಕಿನ ಲಕ್ಕಿ ಮ್ಯಾನ್ ಯಾರು’ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಲತಾ, “ಕೆಲವು ವಿಚಾರಗಳು ನಮ್ಮ ಹೃದಯಕ್ಕೆ ಮಾತ್ರ ಗೊತ್ತಿರ ಬೇಕು. ಅದನ್ನು ಅಲ್ಲಿಯೇ ಇಟ್ಟಿರಲು ಬಯಸುತ್ತೇನೆ’ ಎಂದಿದ್ದರು.