Advertisement
ದೇಹವನ್ನು ಮನಸ್ಸನ್ನು ಕುಗ್ಗಿಸುವ ಪ್ರಾಕೃತಿಕ ನಿಯಮ ನಿಬಂಧನೆಗಳಿಂದ ನಿರ್ಮಿತವಾದ ಡಿಸೆಂಬರ್ ತಿಂಗಳಿನಲ್ಲಿ ಆಂಗ್ಲರ ಸಾಂಪ್ರದಾಯಿಕ ಹಬ್ಬ ಆಶಾವಾದವನ್ನೂ ಪ್ರತೀಕ್ಷೆಯನ್ನೂ ಮೂಡಿಸುತ್ತದೆ. ಆಂಗ್ಲರ ಬಹುನಿರೀಕ್ಷೆಯ ಕ್ರಿಸ್‌ಮಸ್ ಹಬ್ಬ ಡಿಸೆಂಬರ್‌ನ ನಿರಾಶಾದಾಯಕ ವಾತಾವರಣದÇÉೊಂದು ಉತ್ಸಾಹವನ್ನು ಮೂಡಿಸುತ್ತದೆ. ಇಲ್ಲಿನ ರಸ್ತೆಗಳಲ್ಲಿ ಕಟ್ಟಿದ ಬೆಳಕಿನ ತೋರಣ, ಅಂಗಡಿಗಳ ಅಲಂಕಾರ ಮತ್ತು ಆಂಗ್ಲರ ಸಂಭ್ರಮದ ಓಡಾಟ ಕತ್ತಲಿನೊಳಗೆ ಜೀವಂತಿಕೆಯ ಒಂದು ಹೋರಾಟವಾಗಿ ಕಾಣಿಸುತ್ತದೆ. ಕ್ರಿಸ್‌ಮಸ್ ಹಬ್ಬದ ಆಚರಣೆ ಡಿಸೆಂಬರ್ 25ಕ್ಕೆ ಆದರೂ ಅದರ ತಯಾರಿ ತಿಂಗಳುಗಳ ಹಿಂದೆಯೇ ಶುರು ಆಗಿರುತ್ತದೆ. ಸಂಸ್ಕೃತಿಯೊ, ಪರಂಪರೆಯೊ, ಅನುಕೂಲವೊ ಹೆಚ್ಚಾಗಿ ಬೇರೆ ಬೇರೆಯಾಗಿ ಸ್ವಾವಲಂಬಿಯಾಗಿ ಬದುಕುವ ಹೆತ್ತವರು, ಮಕ್ಕಳು, ಮೊಮ್ಮಕ್ಕಳು ಕ್ರಿಸ್‌ಮಸ್ ನೆಪದಲ್ಲಿ ಒಂದು ಕಡೆ ಭೇಟಿಯಾಗಿ ಉಡುಗೊರೆಗಳನ್ನು ಬದಲಾಯಿಸಿಕೊಳ್ಳುತ್ತಾರೆ. ಕೆಲವು ಕೆಜಿ ತೂಕದ ಟರ್ಕಿಯ ಮಾಂಸವನ್ನು ಅಂಗಡಿಯಿಂದ ಕೊಂಡುತಂದು ಅದಕ್ಕೆ ಎಣ್ಣೆ ಹಚ್ಚಿ , ಮಸಾಲೆಯ ರಸ ತುಂಬಿದ ಇಂಜೆಕ್ಷನ್ ಚುಚ್ಚಿ , ಒಲೆಯೊಳಗಿಟ್ಟು ಸುಟ್ಟು ಹುರಿದು ವಿಶೇಷ ಊಟವನ್ನು ಕುಟುಂಬದವರೆಲ್ಲ ಜೊತೆಯಾಗಿ ಮಾಡುತ್ತಾರೆ. ಯಾರಿಗೆ ಯಾವ ಉಡುಗೊರೆ ಕೊಡಬೇಕು, ಎಲ್ಲಿ , ಯಾವಾಗ ಕೊಳ್ಳಬೇಕು, ಕ್ರಿಸ್‌ಮಸ್ ದಿನದ ಊಟದ ತಯಾರಿ ಹೇಗೆ- ಎನ್ನುವ ಪೂರ್ವಯೋಜನೆಯಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗಿ ವೈದ್ಯರನ್ನು ಕಂಡು ಶುಶ್ರೂಷೆ ಪಡೆಯುವವರೂ ಇ¨ªಾರೆ.
Related Articles
Advertisement
ಹೀಗೆ ಆಂಗ್ಲರ ಸಡಗರ ಸಂಭ್ರಮ, ಖರೀದಿಗಳ, ಉಡುಗೊರೆಗಳ, ಟರ್ಕಿ ಊಟದ ಘಮಲಿನ, ಕ್ರಿಸ್‌ಮಸ್ ತಯಾರಿಗಳ ಬಗ್ಗಿನ ಮಾತುಗಳು ನನ್ನನ್ನು ಸುತ್ತುವರಿಯುವ ಹೊತ್ತಿನಲ್ಲಿ ನಾನೂ ಒಂದು ತಯಾರಿಯಲ್ಲಿ ತೊಡಗಿದ್ದೇನೆ. ಪ್ರತಿವರ್ಷದ ಡಿಸೆಂಬರ್ ನನ್ನ ಮಟ್ಟಿಗೆ ಭಾರತದ ಭೇಟಿಯ ಸಮಯ ಮತ್ತು ಆ ಪ್ರಯಾಣದ ಹಿಂದಿನ ತಯಾರಿಯ ಕಾಲ. ಆಂಗ್ಲರು ತಮ್ಮ ಹಬ್ಬದ ಕತೆ ಹೇಳುವಾಗ ರಜೆಗೆ ಊರಿಗೆ ಮರಳುವಷ್ಟು ದೊಡ್ಡ ಹಬ್ಬವೇ ಇನ್ನೊಂದಿಲ್ಲ ಎಂದು ನನ್ನ ಸಹೋದ್ಯೋಗಿಗಳಲ್ಲಿ ವಾದಿಸುತ್ತೇನೆ. ವರ್ಷವಿಡೀ ಆಗಾಗ ಸ್ವಲ್ಪ ಸ್ವಲ್ಪವೇ ರಜೆ ವಿನಿಯೋಗಿಸುವ ಸಂಪ್ರದಾಯದ ಆಂಗ್ಲ ಸಹೋದ್ಯೋಗಿಗಳು, ಹೀಗೆ ವರ್ಷದ ಕೊನೆಯಲ್ಲಿ ಇಡೀ ಒಂದು ತಿಂಗಳು ರಜೆಯನ್ನು ಚೀಲದಲ್ಲಿ ತುಂಬಿಸಿಕೊಂಡು ನಾನು ಊರಿಗೆ ಹೊರಟಾಗ ಕೆಲವೊಮ್ಮೆ ಆಶ್ಚರ್ಯವನ್ನೂ ಕೆಲವೊಮ್ಮೆ ಅಸೂಯೆಯನ್ನೂ ವ್ಯಕ್ತಪಡಿಸುತ್ತಾರೆ. ಊರು ಬಿಟ್ಟು ಇಂಜಿನಿಯರಿಂಗ್ ಓದಿಗೆ ಬೆಂಗಳೂರಿಗೋ ಮತ್ತೆ ಕೆಲಸದ ನಿಮಿತ್ತ ಇಂಗ್ಲೆÉಂಡ್‌ಗೊà ಗಡಿಪಾರಾದ ಮೇಲೆ ನನ್ನ ಮಟ್ಟಿಗೆ ರಜೆ ಅಂದರೆ ಮರವಂತೆ, ಮರವಂತೆ ಅಂದರೆ ರಜೆ.
ವರ್ಷವಿಡೀ ಕೆಲಸ ಮಾಡಿದ್ದಕ್ಕೆ ನನಗೆ ಸಿಗಬೇಕಾದ ಐದು ವಾರಗಳ ರಜೆಯಲ್ಲಿ ಹೆಚ್ಚಿನ ಭಾಗವನ್ನು ಒಂದೇ ಸಲ ಹಾಕಿ ಖರ್ಚು ಮಾಡುವುದು ಕಚೇರಿಯ ವ್ಯವಸ್ಥಾಪಕರ ಸಹಕಾರದಿಂದ ಈಗಲೂ ಮುಂದುವರಿದಿದೆ. “ತಮ್ಮದೆನ್ನುವ ಊರು-ನೀರು-ಗಾಳಿ-ಬಿಸಿಲು ಐದು ಸಾವಿರ ಮೈಲು ದೂರದಲ್ಲಿದ್ದರೆ ಹೀಗೆ ಮಾಡುವುದು ಸಹಜವೇ’ ಎಂದು ಸಹೋದ್ಯೋಗಿಗಳಿಗೆ ವಿವರಿಸಿದ್ದೇನೆ. “ಇಷ್ಟುದ್ದ ರಜೆಯನ್ನು ಕಳೆಯಲು ನಿಮ್ಮೂರಿನÇÉೇನಿದೆ’ ಎಂದು ಕುತೂಹಲದಿಂದವರು ವಿಚಾರಿಸುತ್ತಾರೆ. ಹೀಗೆ ಕೇಳಿದವರನ್ನು ಹತ್ತಿರದಲ್ಲಿ ಕೂಡಿಸಿ ಗೂಗಲ್ ಮ್ಯಾಪ್ ತೆರೆದು ಇಗೋ ಭಾರತದ ನೈಋತ್ಯ ಕರಾವಳಿಯ ಊರು, ಅವರ ಪ್ರವಾಸಿ ಜ್ಞಾನದಲ್ಲಿ ಜನಪ್ರಿಯ ತಾಣಗಳಾದ ಗೋವಾದಿಂದ ಕೆಳಗೆ ಕೇರಳಕ್ಕಿಂತ ಮೇಲೆ ಎಂದು ಬೊಟ್ಟು ಮಾಡಿ ತೋರಿಸಿದ್ದೇನೆ, ಇನ್ನೂ ಸುಲಭವಾಗಲಿ ಎಂದು ಇಂಗ್ಲೆಂಡ್‌ನ ಮ್ಯಾಪಿನಲ್ಲಿ ಬ್ರಿಸ್ಟಲ್ ಎನ್ನುವ ಊರು ಎಲ್ಲಿದೆಯೋ ಭಾರತ ಭೂಪಟದಲ್ಲಿ ಮರವಂತೆ ಸುಮಾರಿಗೆ ಅದೇ ಜಾಗದಲ್ಲಿದೆ ಎಂದಿದ್ದೇನೆ. ಇಂಗ್ಲಂಡ್‌ನ ಯಾವ ಕರಾವಳಿಗೆ ಯಾವ ಕಾಲಕ್ಕೆ ಹೋದರೂ ಕಾಲು ಕೊರೆಯುವ ತಣ್ಣನೆಯ ನೀರು, ಮರವಂತೆಯÇÉಾದರೆ ಸಮುದ್ರದಲ್ಲಿ ಬೆಚ್ಚಗಿನ ಬಿಸಿನೀರು, ನೀರಲ್ಲಿ ಕುಣಿದರೂ, ಆಡಿ ದಣಿದರೂ ಥಂಡಿ ಹತ್ತದು ಎಂದು ನೆನಪಿಸಿದ್ದೇನೆ. ನನ್ನ ಮನೆಯಿಂದ ಸಮುದ್ರಕ್ಕೆ ಬರೇ ಒಂದು ಕಿಲೋಮೀಟರು, ಅಲ್ಲಿನ ಸುಡು ಬಿಸಿಲು, ಆ ಬಿಸಿಲಲ್ಲಿ ನೆರಳು ಕೊಡುವ ತೆಂಗಿನ ತೋಪು, ತೆಂಗಿನ ತೋಪಿನ ಬದಿಯ ಪ್ರಶಾಂತ ನದಿ, ರಸ್ತೆ ದಾಟಿದರೆ ಮರಳ ರಾಶಿ, ಮರಳ ಮುಂದಿನ ಸಮುದ್ರ, ಅದರ ಬಿಳಿ ನೊರೆಯ ತೆರೆ, ತೆರೆಯೊಳಗೆ ಅಡಗಿರುವ ಮೀನು, ಏಡಿ-ಚಿಪ್ಪು-ಕವಡೆ ಹೀಗೆ ಅವರ ಕ್ರಿಸ್‌ಮಸ್‌ನ ಕಲ್ಪನೆಯ ಎದುರು ನನ್ನ ಮರವಂತೆ ರಜೆಯ ಚಿತ್ತಾರವನ್ನು ಬರೆದು ನಿಲ್ಲಿಸಿದ್ದೇನೆ. ಇಷ್ಟು ದಿನ ಬ್ರಿಸ್ಟಲ್‌ನಲ್ಲಿ ಕುಳಿತು ನಮ್ಮೂರಿಗೆ ಟಪ್ಪಾಲ್ ಕಳುಹಿಸುತ್ತಿದ್ದೆ. ರಜೆ ಮುಗಿಸಿ ಮರಳುವಾಗ ಊರಿನ ಹೊಸ ಸುದ್ದಿಗಳ ಟಪ್ಪಾಲ್ ತರುತ್ತೇನೆಂದು ಬ್ರಿಸ್ಟಲ್‌ನ ಗೆಳೆಯರಿಗೆ ಹೇಳಿ ತವರಿಗೆ ಹೊರಟುನಿಂತಿದ್ದೇನೆ.(ಅಂಕಣ ಮುಕ್ತಾಯ) – ಯೋಗೀಂದ್ರ ಮರವಂತೆ