Advertisement

Last salute: ಕರ್ನಲ್ ಮನ್‌ಪ್ರೀತ್ ಸಿಂಗ್ ಅಂತಿಮ ಯಾತ್ರೆ ; ಸಾವಿರಾರು ಜನರು ಭಾಗಿ

05:51 PM Sep 15, 2023 | Team Udayavani |

ಚಂಡೀಗಢ: “ಜೈ ಹಿಂದ್ ಪಾಪಾ…..” ಇದು ಹುತಾತ್ಮರಾದ ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ ಆರು ವರ್ಷದ ಪುತ್ರ ಕಬೀರ್ ಕೊನೆಯ ಬಾರಿಗೆ ತನ್ನ ತಂದೆಗೆ ಸೆಲ್ಯೂಟ್ ಮಾಡಿದಾಗ ಹೇಳಿದ  ಮಾತು. ದೃಶ್ಯವನ್ನು ಕಂಡು ಕಣ್ಣೀರ ಕೋಡಿ ಹರಿಯಿತು.

Advertisement

ಕಾಶ್ಮೀರ ಕಣಿವೆಯಲ್ಲಿ ಉಗ್ರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ ಅಂತಿಮಯಾತ್ರೆ ಶುಕ್ರವಾರ ಪಂಜಾಬ್‌ನ ಮೊಹಾಲಿ ಜಿಲ್ಲೆಯ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡುವ ಮೊದಲು ನಡೆಯಿತು. ಪುತ್ರ ಕಬೀರ್ ಸೇನಾ ಸಮವಸ್ತ್ರದ ರೀತಿ ಧಿರಿಸು ಧರಿಸಿ ಅಂತಿಮ ವಿದಾಯ ಹೇಳುವ ದೃಶ್ಯ ಎಲ್ಲರನ್ನೂ ಕಣ್ಣೀರು ಸುರಿಸುವಂತೆ ಮಾಡಿತು. ಸೇನಾಧಿಕಾರಿಯೊಬ್ಬರು ಕಬೀರ್‌ನನ್ನು ಹಿಡಿದುಕೊಂಡು ಕುಟುಂಬ ಮತ್ತು ಇತರರು ಅಂತಿಮ ನಮನ ಸಲ್ಲಿಸಿದಾಗ ಅವರ ಎರಡು ವರ್ಷದ ಮಗಳು ಬನ್ನಿಯನ್ನು ಸಂಬಂಧಿಕರು ಹಿಡಿದು ನಿಂತಿದ್ದರು.

ಬೆಳಗ್ಗಿನಿಂದಲೇ ಭರೌಂಜಿಯಾನ್ ಹಳ್ಳಿಯಲ್ಲಿರುವ ಕರ್ನಲ್ ಸಿಂಗ್ ಅವರ ಮನೆಯಲ್ಲಿ ಭಾರಿ ಸಂಖ್ಯೆಯ ಜನ ಅಂತಿಮ ದರ್ಶನ ಪಡೆದರು. ಪತ್ನಿ, ತಾಯಿ ಮತ್ತು ಇತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. “ಭಾರತ್ ಮಾತಾ ಕೆ ಸಪೂತ್ ಕಿ ಜೈ” ಮತ್ತು “ಭಾರತ್ ಮಾತಾ ಕಿ ಜೈ” ಘೋಷಣೆ ಮೊಳಗಿಸಿದರು.

ಪುಷ್ಪಾರ್ಚನೆ ಮತ್ತು ಗನ್ ಸೆಲ್ಯೂಟ್ ಸೇರಿದಂತೆ ಸಂಪೂರ್ಣ ಮಿಲಿಟರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು. ಪಂಜಾಬ್ ಗವರ್ನರ್ ಬನ್ವಾರಿಲಾಲ್ ಪುರೋಹಿತ್, ಮಾಜಿ ಸೇನಾ ಮುಖ್ಯಸ್ಥ ವಿಪಿ ಮಲಿಕ್ ಮತ್ತು ಪಂಜಾಬ್ ಸಚಿವರಾದ ಚೇತನ್ ಸಿಂಗ್ ಜೌರಮಜ್ರಾ ಮತ್ತು ಅನ್ಮೋಲ್ ಗಗನ್ ಮಾನ್ ಹಾಗೂ ಹಿರಿಯ ಸೇನೆ ಮತ್ತು ಪೊಲೀಸ್ ಅಧಿಕಾರಿಗಳು ಭರೌಂಜಿಯಾನ್‌ಗೆ ಆಗಮಿಸಿ ಪುಷ್ಪಾರ್ಚನೆ ಮಾಡಿದರು. ಬಿಜೆಪಿ ಮುಖಂಡರಾದ ಲೆಫ್ಟಿನೆಂಟ್ ಜನರಲ್ ಡಿಪಿ ವಾಟ್ಸ್ (ನಿವೃತ್ತ) ಕೂಡ ಉಪಸ್ಥಿತರಿದ್ದರು.

ಮೂರನೇ ತಲೆಮಾರಿನ ಸೇನಾ ಅಧಿಕಾರಿಗಿದ್ದ ಮನ್‌ಪ್ರೀತ್ ಸಿಂಗ್ ಅವರ ತಂದೆ ಒಂಬತ್ತು ವರ್ಷಗಳ ಹಿಂದೆ ನಿಧನ ಹೊಂದಿದ್ದರು. ಅವರೂ, ಅವರ ತಂದೆ ಕೂಡ ಮಾಜಿ ಸೈನಿಕರಾಗಿದ್ದರು.

Advertisement

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಮೇಜರ್ ಆಶಿಶ್ ಧೋಂಚಕ್ ಅವರ ಅಂತಿಮ ಸಂಸ್ಕಾರ ಶುಕ್ರವಾರ ಹರಿಯಾಣದ ಪಾಣಿಪತ್‌ನಲ್ಲಿ ಸಂಪೂರ್ಣ ಮಿಲಿಟರಿ ಗೌರವಗಳೊಂದಿಗೆ ನಡೆಸಲಾಯಿತು.

ಬುಧವಾರ ಕಣಿವೆಯ ಕೊಕೊರೆನಾಗ್ ಪ್ರದೇಶದ ಎತ್ತರದ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಲ್ ಮತ್ತು ಮೇಜರ್ ಸೇರಿ ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಉಪ ಅಧೀಕ್ಷಕರು ಸೇರಿ ಮೂವರು ಹುತಾತ್ಮರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next