Advertisement
ಈವರೆಗೆ 29,621 ಪ್ರಕರಣಗಳು ವರದಿಯಾಗಿದ್ದು, 6,540 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಶನಿವಾರ 2,125 ಜನರಿಗೆ ಸೋಂಕು ದೃಢಪಟ್ಟಿದ್ದು, ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ 29,621 ಏರಿಕೆಯಾಗಿದೆ. 49 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 631ಕ್ಕೆ ಏರಿಕೆಯಾಗಿದೆ. 250 ಸೋಂಕಿತರು ಗುಣ ಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 332 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ನಿಗದಿತ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ 22,449 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
Related Articles
Advertisement
ಯಾವ ವಾರ್ಡ್‌ಗಳಲ್ಲಿ ಅಧಿಕ ಸೋಂಕಿತರು : ಶಾಂತಲಾ ನಗರ 100, ಸುದ್ದುಗುಂಟೆಪಾಳ್ಯ 33, ಚಾಮರಾಜಪೇಟೆ, ಕುಮಾರಸ್ವಾಮಿ ಲೇಔಟ್, ಮಲ್ಲೇಶ್ವರ 24, ಶಾಂತಿನಗರ 23, ಹೊಂಬೆಗೌಡ ನಗರ, ಹೊಯ್ಸಳ ನಗರ 21, ಯಡಿಯೂರು, ಮತ್ತಿಕೆರೆ 18, ಜೆ.ಪಿ.ನಗರ, ಜಯನಗರ ಪೂರ್ವ 17, ಎಚ್ ಬಿ ಆರ್ ಲೇಔಟ್, ಬಾಣಸವಾಡಿ 16 ಸೋಂಕಿತರು 24 ಗಂಟೆಯಲ್ಲಿ ದೃಢಪಟ್ಟಿದ್ದಾರೆ. 198 ವಾರ್ಡ್‌ಗಳ ಪೈಕಿ 142 ವಾರ್ಡ್‌ಗಳಲ್ಲಿ 50 ಕ್ಕೂ ಅಧಿಕ ಸೋಮಕಿತರು ಇದ್ದಾರೆ.
ಮಾರ್ಷಲ್‌ಗಳಿಗೂ ಸೋಂಕು : ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದಕೊಳ್ಳದವರ ಮೇಲೆ ಮಾರ್ಷಲ್‌ಗಳು ತಲಾ 200 ರೂ. ದಂಡ ವಿಧಿಸುತ್ತಿದ್ದಾರೆ. ಹೆಚ್ಚು ಜನ ಸಂಪರ್ಕದಲ್ಲಿರುವ ಹಿನ್ನೆಲೆಯಲ್ಲಿ ಈಗ ಮಾರ್ಷಲ್‌ಗಳಿಗೂ ಸೋಂಕು ಹಬ್ಬುತ್ತಿದೆ. ಇತ್ತೀಚೆಗೆ ರಾಜಮಹಲ್‌ಗುಟ್ಟಹಳ್ಳಿ, ಕಾಡುಗೋಡಿ ಗಂಗೇನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಲಾ ಒಬ್ಬರು ಮಾರ್ಷಲ್ ಹಾಗೂ ಕೃಷ್ಣರಾಜೇಂದ್ರ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಮೂರು ಜನ ಮಾರ್ಷಲ್‌ಗಳಿಗೆ ಕೋವಿಡ್ ದೃಢಪಟ್ಟಿದ್ದು, ಕೋವಿಡ್ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ದೃಢಪಟ್ಟ ಮಾರ್ಷಲ್‌ಗಳ ಸಂಪರ್ಕದಲ್ಲಿದ್ದ ಮಾರ್ಷಲ್‌ಗಳು ಸಹ ಕ್ವಾಂಟೈನ್‌ಗೆ ಒಳಪಡಿಸಲಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.