Advertisement

ನರೇಗಾ ಯೋಜನೆಯಲ್ಲಿ ಕೊರಟಗೆರೆಗೆ ಕೊನೆ ಸ್ಥಾನ… ಪಿಡಿಓಗೆ ಎಚ್ಚರಿಕೆ ನೀಡಿದ ಜಿ.ಪಂ ಸಿಇಓ

08:27 PM Apr 03, 2024 | Team Udayavani |
ಕೊರಟಗೆರೆ: ನರೇಗಾ ಯೋಜನೆ ಅನುಷ್ಠಾನ ತರುವಲ್ಲಿ ತುಮಕೂರು ಜಿಲ್ಲೆಯಲ್ಲಿಯೇ ಕೊರಟಗೆರೆ ಕ್ಷೇತ್ರವು ಕೊನೆಯ ಸ್ಥಾನದಲ್ಲಿದೆ. ನರೇಗಾ ಯೋಜನೆಯ ಬಗ್ಗೆ ನಿರ್ಲಕ್ಷ ವಹಿಸುವ ಪಿಡಿಓ ಮತ್ತು ಇಂಜಿನಿಯರ್‌ಗಳನ್ನು ಮುಲಾಜಿಲ್ಲದೇ ಅಮಾನತು ಮಾಡ್ತೇನೆ ಎಂದು ತುಮಕೂರು ಜಿಪಂ ಸಿಇಓ ಪ್ರಭು.ಜಿ ಖಡಕ್ ಎಚ್ಚರಿಕೆ ನೀಡಿದರು.
ಕೊರಟಗೆರೆ ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ 24 ಗ್ರಾಪಂಗಳ ಪಿಡಿಓ ಮತ್ತು ನರೇಗಾ ಇಂಜಿನಿಯರ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
207 ಸರಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳ ಆಟದ ಮೈದಾನ, ಕೌಪೌಂಡು, ಶೌಚಾಲಯ ಮತ್ತು ಚರಂಡಿ ನಿರ್ಮಾಣದ ಅನುಷ್ಠಾನಕ್ಕೆ ಗ್ರಾಪಂ ಪಿಡಿಓ, ಅಧ್ಯಕ್ಷರು ಮತ್ತು ಇಂಜಿನಿಯರ್ ನಿರ್ಲಕ್ಷ ಮಾಡಿರೋದು ಕಂಡುಬಂದಿದೆ. ಗ್ರಾಮೀಣ ಭಾಗದ ಗುಳೆ ಹೋಗುವುದನ್ನ ತಪ್ಪಿಸೋದೇ ನರೇಗಾ ಯೋಜನೆಯ ಮುಖ್ಯ ಉದ್ದೇಶ ಆಗಿದೆ. ಗ್ರಾಮೀಣ ಜನರಿಗೆ ತಪ್ಪದೇ ನರೇಗಾ ಯೋಜನೆಯಡಿ ಕೆಲಸ ನೀಡಬೇಕಿದೆ ಎಂದು ಆದೇಶ ಮಾಡಿದರು.
ತುಮಕೂರು ಜಿಲ್ಲೆಯ 10 ಕ್ಷೇತ್ರದಲ್ಲಿ ಸುಮಾರು 40 ಸಾವಿರ ಮತ್ತು ಕೊರಟಗೆರೆ ಕ್ಷೇತ್ರಕ್ಕೆ 2500 ಸೈಟ್ ನೀಡಲು ರೂಪುರೇಷು ಸಿದ್ದವಾಗಿದೆ. ಕೊರಟಗೆರೆ ಕ್ಷೇತ್ರಕ್ಕೆ ಹೆಚ್ಚುವರಿ 4 ರಿಂದ 5 ಸಾವಿರ ಸೈಟ್ ನೀಡಲು ಭೂಮಿ ಗುರುತಿಸಲು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗ್ರಾಮಸಭೆಯಲ್ಲಿ ಜಿಲ್ಲಾಮಟ್ಟದ ವಿಶೇಷ ಅಧಿಕಾರಿಗಳ ತಂಡ ಸೈಟ್ ಇಲ್ಲದವರಿಗೆ ನಿವೇಶನ ನೀಡಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಗ್ರಾಪಂ ಪಿಡಿಓಗಳು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿಯೇ ಇದ್ದು ಹಾಜರಾತಿ ಇರಲೇಬೇಕು. ನರೇಗಾ ಯೋಜನೆ ಅಥವಾ ಸರಕಾರದ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷದ ಜೊತೆ ವಿಳಂಬ ಮಾಡುವ ಪಿಡಿಓಗಳ ವಿರುದ್ದ ಸರಕಾರಕ್ಕೆ ವರಧಿ ಕಳುಹಿಸುತ್ತೇನೆ. ಈಗಾಗಲೇ ತುಮಕೂರು ಜಿಲ್ಲೆಯಲ್ಲಿ 16 ಜನ ಪಿಡಿಓಗಳ ಅಮಾನತು ಆಗಿದೆ. ಇದು ಇನ್ನಷ್ಟು ಹೆಚ್ಚು ಆಗಬಹುದು ಇದಕ್ಕೆ ಅವಕಾಶ ಮಾಡಿಕೊಡದೇ ಚುನಾವಣೆ ಇರ್ಲಿ ಇಲ್ಲದೇ ಇರಲಿ ಜನರ ಬಳಿನಿಂತು ಕೆಲಸ ಮಾಡಿ ತೋರಿಸಿ ಎಂದು ಹೇಳಿದರು.
ಸಭೆಯಲ್ಲಿ ಮಧುಗಿರಿ ಗ್ರಾಮೀಣ ಮತ್ತು ಕುಡಿಯುವ ನೀರು ಇಇ ರವೀಶ್, ಕೊರಟಗೆರೆ ಎಇಇ ಕೀರ್ತಿನಾಯಕ್, ತಹಶೀಲ್ದಾರ್ ಮಂಜುನಾಥ.ಕೆ, ತಾಪಂ ಇಓ ಅಪೂರ್ವ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಶಿಲ್ಪಾ, ನರೇಗಾ ಎಡಿಎ ಗುರುಮೂರ್ತಿ, ತಾಪಂ ಯೋಜನಾಧಿಕಾರಿ ಮಧುಸೂಧನ್, 24 ಗ್ರಾಪಂಗಳ ಪಿಡಿಓ ಮತ್ತು ನರೇಗಾ ಇಂಜಿನಿಯರ್‌ಗಳು ಉಪಸ್ತಿತರಿದ್ದರು.
ಕಡ್ಲೇಪುರಿ ತಿನ್ನೋಕೆ ಹೋಗಿ ನೀವು..
ನರೇಗಾ ಯೋಜನೆ ಅನುಷ್ಠಾನ ಮಾಡುವಲ್ಲಿ ಕೊರಟಗೆರೆ ಕ್ಷೇತ್ರದ ೨೪ಗ್ರಾಪಂಗಳ ಪೈಕಿ ಕ್ಯಾಮೇನಹಳ್ಳಿ ಗ್ರಾಪಂ ಕೊನೆಯ ಸ್ಥಾನದಲ್ಲಿದೆ. ಗ್ರಾಪಂ ಕಚೇರಿಯಲ್ಲಿ ಕುಳಿತು ಏನು ಕತ್ತೇ ಕಾಯ್ತಿರಾ ಜ್ಞಾನ ಇಲ್ವಾ ನಿಮಗೇ. ನರೇಗಾ ಕಾಮಗಾರಿ ನಿರ್ಲಕ್ಷ ಮಾಡಿದ್ದ ಕ್ಯಾಮೇನಹಳ್ಳಿ ಪಿಡಿಓ ಕಳೆದ ೪ತಿಂಗಳ ಹಿಂದೆ ಅಮಾನತು ಆಗಿರೋದು ನಿಮಗೇ ಗೋತ್ತಿಲ್ಲವೇ. ಈಗ ನಿಮಗೂ ಇದೇ ಆಗಬೇಕಾ ಎಂದು ಕ್ಯಾಮೇನಹಳ್ಳಿ ಮತ್ತು ಅಕ್ಕಿರಾಂಪುರ ಪಿಡಿಓಗೆ ಜಿಪಂ ಸಿಇಓ ಪ್ರಭು.ಜಿ ಖಡಕ್ ಎಚ್ಚರಿಕೆ ನೀಡಿದ ಘಟನೆ ನಡೆಯಿತು.
ತಾಪಂ ವಿಶೇಷಸಭೆಯ ಮುಖ್ಯಾಂಶಗಳು..
– ನರೇಗಾ ಯೋಜನೆ ಅನುಷ್ಠಾನದಲ್ಲಿ ಕೊನೆಯಾದ ಕೊರಟಗೆರೆ
– ಸರಕಾರಿ ಶಾಲೆ ಮತ್ತು ಅಂಗನವಾಡಿ ಕಾಮಗಾರಿಗಳ ನಿರ್ಲಕ್ಷ
– 24 ಗ್ರಾಪಂಯ ಪಿಡಿಓಗಳಿಗೆ ಎಚ್ಚರಿಕೆ ನೀಡಿದ ಜಿಪಂ ಸಿಇಓ
– ಹಳ್ಳಿ ಜನತೆ ಗುಳೆ ಹೋಗದಂತೆ ತಡೆಯಲು ನರೇಗಾ ಸಹಕಾರಿ
– ತುಮಕೂರು ಜಿಲ್ಲೆಯಲ್ಲಿ ಕೊರಟಗೆರೆ ಕ್ಷೇತ್ರಕ್ಕೆ ಕೊನೆಯ ಸ್ಥಾನ
– 24 ಗ್ರಾಪಂಗಳಿಗೆ ತಲಾ 1 ಸಾವಿರದಂತೆ 24 ಸಾವಿರ ಸಸಿಗಳು ಸಿದ್ದ
– ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಮುನ್ನೇಚ್ಚರಿಕೆ ಕ್ರಮ ಅಗತ್ಯ
– 24 ಗಂಟೆಯೊಳಗೆ ನೀರಿಗೆ ಪರಿಹಾರ ನೀಡುವಂತೆ ಪಿಡಿಓಗಳಿಗೆ ಸೂಚನೆ
– ನಿವೇಶನ ರಹಿತರಿಗೆ 2500 ಸೈಟ್‌ಗಳು ನೀಡಲು ರೂಪುರೇಷು ಸಿದ್ದತೆ
– ಅಲೆಮಾರಿ ಕಾರ್ಮಿಕರಿಗೆ ಮೂಲಸೌಲಭ್ಯ ಕಲ್ಪಿಸಲು ಇಓಗೆ ಆದೇಶ
ಕುಡಿಯುವ ನೀರು ಸಮಸ್ಯೆ ಆದರೇ ೨೪ಗಂಟೆಯೊಳಗೆ ಗ್ರಾಪಂ ಅಧಿಕಾರಿವರ್ಗ ಸರಿಪಡಿಸಬೇಕಿದೆ. ಗ್ರಾಪಂಗೊಂದು ಉದ್ಯಾನವನ ನಿರ್ಮಾಣಕ್ಕಾಗಿ 24 ಸಾವಿರ ಸಸಿಗಳು ಸಾಮಾಜಿಕ ವಲಯ ಅರಣ್ಯದ ಬಳಿ ಸಿದ್ದವಾಗಿವೆ. ಸರಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರದಲ್ಲಿ ಕಡ್ಡಾಯವಾಗಿ ಸಸಿಗಳನ್ನು ಬೆಳೆಸಬೇಕಿದೆ. ಗ್ರಾಮೀಣ ಜನತೆ ಗುಳೆ ಹೋಗದಂತೆ ಮುನ್ನಚ್ಚರಿಕೆ ಅಗತ್ಯ ಇಲ್ಲವಾದ್ರೇ ಗ್ರಾಪಂ ಪಿಡಿಓಗಳ ಮೇಲೆ ಕ್ರಮ ಆಗುತ್ತೇ.
– ಪ್ರಭು.ಜಿ. ಜಿಪಂ ಸಿಇಓ. ತುಮಕೂರು
Advertisement

Udayavani is now on Telegram. Click here to join our channel and stay updated with the latest news.

Next