Advertisement
ನಾಮಪತ್ರ ಸಲ್ಲಿಕೆಗೆ ಅ. 31 ಕೊನೆಯ ದಿನವಾಗಿರುವುದರಿಂದ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವವರ ಅಭ್ಯರ್ಥಿಗಳ ಸಂಖ್ಯೆ ಅಧಿಕವಾಗಲಿದೆ. 60 ವಾರ್ಡ್‌ಗಳಿಗೆ ಕಾಂಗ್ರೆಸ್‌ನ ಅಭ್ಯರ್ಥಿಗಳ ಪಟ್ಟಿ ಬುಧವಾರ ರಾತ್ರಿ ಪ್ರಕಟಿಸಿದ ಹಿನ್ನೆಲೆಯಲ್ಲಿ 60 ಅಭ್ಯರ್ಥಿಗಳು ಗುರುವಾರವೇ ನಾಮಪತ್ರ ಸಲ್ಲಿಸಬೇಕಿದೆ. ಜತೆಗೆ ಬಿಜೆಪಿಯ ಕೆಲವರು, ಜೆಡಿಎಸ್ ಹಾಗೂ ಇತರ ಪಕ್ಷದ ಅಭ್ಯರ್ಥಿಗಳು ಗುರುವಾರ ನಾಮಪತ್ರ ಸಲ್ಲಿಸಲಿದ್ದಾರೆ.
ಮಹಾನಗರಪಾಲಿಕೆ ವಲಯ ಕಚೇರಿ ಸುರತ್ಕಲ್‌ನಲ್ಲಿ ರವಿಚಂದ್ರ ನಾಯಕ್, ವೆಂಕಟೇಶ್, ಜಿಲ್ಲಾ ಪಂಚಾಯತ್ ಉಪನೀರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಡಾ| ಯೋಗೀಶ್ ಎಸ್.ಬಿ., ಮಂಗಳೂರು ಮಹಾನಗರಪಾಲಿಕೆ ಕೇಂದ್ರ ಕಚೇರಿ ಕಟ್ಟಡದಲ್ಲಿ 1ನೇ ಮಹಡಿಯಲ್ಲಿ ಭಾನು ಪ್ರಕಾಶ್, ಯೆಯ್ನಾಡಿ ಕೈಗಾರಿಕಾ ವಸಾಹತು ಜಂಟಿ ನಿರ್ದೇಶಕರ ಕಚೇರಿ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಗೋಕುಲ್ ದಾಸ್ ನಾಯಕ್, ಆನೆಗುಂಡಿ ರಸ್ತೆ, ಬಿಜೈ ಕಾಪಿಕಾಡ್‌ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಸಚಿನ್ ಕುಮಾರ್, ಮಹಾನಗರಪಾಲಿಕೆ ಕೇಂದ್ರ ಕಚೇರಿ ಕಟ್ಟಡ, 1ನೇ ಮಹಡಿಯಲ್ಲಿ ಉಸ್ಮಾನ್ ಎ., ಮಹಾನಗರಪಾಲಿಕೆ ಕೇಂದ್ರ ಕಚೇರಿ ಕಟ್ಟಡ, 1ನೇ ಮಹಡಿಯಲ್ಲಿ ಉದಯ ಶೆಟ್ಟಿ, ಮಹಾನಗರಪಾಲಿಕೆ ಕೇಂದ್ರ ಕಚೇರಿ ಕಟ್ಟಡ, 1ನೇ ಮಹಡಿಯಲ್ಲಿ ಡಾ| ಎಂ. ದಾಸೇಗೌಡ, ಬಂದರು ಮೀನುಗಾರಿಕೆ ಉಪನಿರ್ದೇಶಕರ ಕಚೇರಿ, ಮಾಹಿತಿ ಕೇಂದ್ರ ಕಟ್ಟಡ, 1ನೇ ಮಹಡಿಯಲ್ಲಿ ತಿಪ್ಪೇಸ್ವಾಮಿ, ವೆಲೆನ್ಸಿಯಾ ಮಹಾನಗರಪಾಲಿಕೆ ಮಂಗಳೂರು ವಾರ್ಡ್ ಕಚೇರಿಯಲ್ಲಿ ಅಪ್ಪಾಜಿ ಗೌಡ, ಮಿನಿ ವಿಧಾನಸೌಧದ 2ನೇ ಮಹಡಿಯ ಸಹಾಯಕ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಎಸ್.ಕೆ. ಚಂದ್ರಶೇಖರ್ ಅವರು ನಾಮಪತ್ರ ಸ್ವೀಕರಿಸಿದ್ದಾರೆ.
Related Articles
ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಬುಧವಾರ ವಿವಿಧ ಪಕ್ಷಗಳ ಒಟ್ಟು 45 ನಾಮಪತ್ರಗಳು ಸಲ್ಲಿಕೆಯಾಗಿದೆ. ಕಾಂಗ್ರೆಸ್ ಪಕ್ಷದಿಂದ 7, ಬಿಜೆಪಿಯಿಂದ 10, ಜೆಡಿಎಸ್‌ನಿಂದ 5, ಸಿಪಿಐನಿಂದ 1, ಸಿ.ಪಿ.ಐ.(ಎಂ)6, ಎಸ್.ಡಿ.ಪಿ.ಐ. 5, ವೆಲ್ಫೆàರ್ ಪಾರ್ಟಿ ಆಫ್ ಇಂಡಿಯಾದಿಂದ 3, ಪಕ್ಷೇತರರಿಂದ 8 ನಾಮಪತ್ರ ಸಲ್ಲಿಕೆಯಾಗಿದೆ.
Advertisement
ಪೊಲೀಸ್ ಭದ್ರತೆನಾಮಪತ್ರ ಸಲ್ಲಿಕೆ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಾಮಪತ್ರ ಸಲ್ಲಿಸುವ ಸಂದರ್ಭ ಮೆರವಣಿಗೆ ಮಾಡಲು ಅವಕಾಶ ನೀಡಬಾರದು ಎಂದು ಪೊಲೀಸ್ ಇಲಾಖೆಯು ಪಾಲಿಕೆಗೆ ಮನವಿ ಮಾಡಿರುವ ಪರಿಣಾಮ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ಮೆರವಣಿಗೆಗೆ ಅವಕಾಶ ನೀಡಿರಲಿಲ್ಲ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.