Advertisement

ಇಂಡೋನೇಶ್ಯ ಭೂಕಂಪ: 1,500 ದಾಟಿದ ಬಲಿ, 2 ಲಕ್ಷ ಜನ ನಿರಾಶ್ರಿತರು

11:15 AM Oct 05, 2018 | Team Udayavani |

ಪಾಲು : ಇಂಡೋನೇಶದ್ಯಲ್ಲಿ ಈಚೆಗೆ 7.5 ಅಂಕಗಳ ತೀವ್ರತೆಯ ಭೂಕಂಪ ಆದುದನ್ನು ಅನುಸರಿಸಿ ಎದ್ದ ಸುನಾಮಿ ಹೆದ್ದೆರೆಗಳಿಗೆ ಬಲಿಯಾಗಿರುವ ಸಂಖ್ಯೆ 1,500 ದಾಟಿರುವ ನಡುವೆಯೇ ರಕ್ಷಣಾ ಕಾರ್ಯಕರ್ತರು, ಬದುಕುಳಿದಿರಬಹುದಾದವರ ಶೋಧಕ್ಕಾಗಿ ಕೊನೇ ಹಂತದ ಪ್ರಯತ್ನವನ್ನು ಕೈಗೊಂಡಿದ್ದಾರೆ. 

Advertisement

ಇಂಡೋನೇಶ್ಯದ ಸುಲವೇಶಿ ದ್ವೀಪಕದ ಪಾಲು ನಗರದ ಮೇಲೆ ಸುನಾಮಿ ಹೆದ್ದೆರೆಗಳು ಚೀನದ ಮಹಾಗೋಡೆಯ ರೀತಿಯಲ್ಲಿ ಅಪ್ಪಳಿಸಿದ ಕಾರಣ ಇಲ್ಲಿ ಅತ್ಯಧಿಕ ನಾಶ ನಷ್ಟ, ಜೀವಹಾನಿ ಸಂಭವಿಸಿದೆ. ಅಪಾರ ಸಂಖ್ಯೆಯ ಮನೆ, ಕಟ್ಟಡಗಳು, ಮರಗಳು ಧರಾಶಾಯಿಯಾಗಿದ್ದು ಅಸಂಖ್ಯ ಕಾರುಗಳು ಅಡಿಮೇಲಾಗಿ ಕೊಚ್ಚಿಹೋಗಿವೆ.

ಹಲವು ದಿನಗಳ ವಿಳಂಬದ ಬಳಿಕ ಇದೀಗ ಇಂಡೋನೇಶ್ಯಕ್ಕೆ ಅಂತಾರಾಷ್ಟ್ರೀಯ ನೆರವು ಹರಿದು ಬರಲು ಆರಂಭವಾಗಿದೆ. ವಿಶ್ವಸಂಸ್ಥೆಯ ಹೇಳಿರುವ ಪ್ರಕಾರ ಕನಿಷ್ಠ 2 ಲಕ್ಷ ಮಂದಿ ನಿರ್ಗತಿಕ ಸಂತ್ರಸ್ತರಿಗೆ ಮಾನವೀಯ ನೆರವಿನ ಅಗತ್ಯವಿದೆ. 

Advertisement

Udayavani is now on Telegram. Click here to join our channel and stay updated with the latest news.

Next