ಹನೂರು: ಪಪಂ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಗುರುವಾರ ವಿವಿಧ ಪಕ್ಷಗಳ 39 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಅಂತಿಮವಾಗಿ ಒಟ್ಟು 48 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್‌ನಿಂದ 13 ಅಭ್ಯರ್ಥಿಗಳು: ಪಪಂನ 13 ವಾರ್ಡುಗಳಿಗೆ ಕಾಂಗ್ರೆಸ್‌ನಿಂದ 13 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. 1ನೇ ವಾರ್ಡಿನಿಂದ ಶಶಿಕಲಾ, 2ನೇ ವಾರ್ಡಿನಿಂದ ಸುದೇಶ್, 3ನೇ ವಾರ್ಡಿನಿಂದ ಹರೀಶ್ ಕುಮಾರ್, 4ನೇ ವಾರ್ಡಿನಿಂದ ರಾಜಮಣಿ, 5ನೇ ವಾರ್ಡಿನಿಂದ ಸಾವಿತ್ರಮ್ಮ, 6ನೇ ವಾರ್ಡಿನಿಂದ ಹೇಮಂತ್‌ಕುಮಾರ್, 7ನೇ ವಾರ್ಡಿನಿಂದ ಪಾಪತಮ್ಮ, 8ನೇ ವಾರ್ಡಿನಿಂದ ಮಾದೇಶ್, 9ನೇ ವಾರ್ಡಿನಿಂದ ಗಿರೀಶ್, 10ನೇ ವಾರ್ಡಿನಿಂದ ಸೋಮಶೇಖರ, 11ನೇ ವಾರ್ಡಿನಿಂದ ಸಂಪತ್‌ಕುಮಾರ್, 12ನೇ ವಾರ್ಡಿನಿಂದ ಉರ್ಮತ್ ಭಾನು ಮತ್ತು 13ನೇ ವಾರ್ಡಿನಿಂದ ಮಾಜಿ ಉಪಾಧ್ಯಕ್ಷ ಬಸವರಾಜು ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿಯಿಂದ 14 ಅಭ್ಯರ್ಥಿಗಳು: ಪಪಂನ 13 ವಾರ್ಡುಗಳಿಗೆ ಬಿಜೆಪಿ ಪಕ್ಷದಿಂದ 14 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. 1ನೇ ವಾರ್ಡಿನಿಂದ ಚಿಕ್ಕತಾಯಮ್ಮ, 2ನೇ ವಾರ್ಡಿನಿಂದ ನಾಗರಾಜು ಮತ್ತು ಗುರುಸ್ವಾಮಿ, 3ನೇ ವಾರ್ಡಿನಿಂದ ಕಾಂತರಾಜು, 4ನೇ ವಾರ್ಡಿನಿಂದ ಶಿವಮ್ಮ, 5ನೇ ವಾರ್ಡಿನಿಂದ ರೂಪಾ, 6ನೇ ವಾರ್ಡಿನಿಂದ ಅಂಕಾಚಾರಿ, 7ನೇ ವಾರ್ಡಿನಿಂದ ಪ್ರೇಮಾ, 8ನೇ ವಾರ್ಡಿನಿಂದ ವಾಸುದೇವ, 9ನೇ ವಾರ್ಡಿನಿಂದ ಮಂಜೇಶ್, 10ನೇ ವಾರ್ಡಿನಿಂದ ಗೋವಿಂದರಾಜು, 11ನೇ ವಾರ್ಡಿನಿಂದ ಪುಟ್ಟರಾಜು, 12ನೇ ವಾರ್ಡಿನಿಂದ ಚಂದ್ರಮ್ಮ ಮತ್ತು 13ನೇ ವಾರ್ಡಿ ನಿಂದ ಲಿಂಗಾಮೃತಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ.
ಜೆಡಿಎಸ್‌ನಿಂದ 17 ನಾಮಪತ್ರ ಸಲ್ಲಿಕೆ: ಜೆಡಿಎಸ್‌ನಿಂದ 13 ವಾರ್ಡುಗಳಿಗೆ 20 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. 1ನೇ ವಾರ್ಡಿಗೆ ಮುಮ್ತಾಜ್ ಬಾನು, 2ನೇ ವಾರ್ಡಿಗೆ ಮಣಿ, 3ನೇ ವಾರ್ಡಿನಿಂದ ಮೂರ್ತಿನಾಯ್ಡು, 4ನೇ ವಾರ್ಡಿನಿಂದ ಗಂಗಾ(ಮಂಜುಳಾ), 5ನೇ ವಾರ್ಡಿನಿಂದ ಮಹದೇವಮ್ಮ, 6ನೇ ವಾರ್ಡಿನಿಂದ ರಾಜೇಶಾಚಾರಿ ಮತ್ತು ಮಹೇಶ್‌ನಾಯ್ಕ, 7ನೇ ವಾರ್ಡಿನಿಂದ ಮೀನಾ, ಪವಿತ್ರಾ, 8ನೇ ವಾರ್ಡಿನಿಂದ ಆನಂದ್‌ಕುಮಾರ್, 9ನೇ ವಾರ್ಡಿನಿಂದ ಲಿಂಗೇಗೌಡ ಮತ್ತು ಮಹದೇವಸ್ವಾಮಿ, 10ನೇ ವಾರ್ಡಿನಿಂದ ಮೋಹನ್ ಕುಮಾರ್, 11ನೇ ವಾರ್ಡಿನಿಂದ ಪ್ರಸನ್ನಕುಮಾರ್, 12ನೇ ವಾರ್ಡಿನಿಂದ ಮಹಾದೇವ ಮತ್ತು ಮೀನಾಕ್ಷಿ, 13ನೇ ವಾರ್ಡಿನಿಂದ ಮಹೇಶ್ ನಾಮಪತ್ರ ಸಲ್ಲಿಸಿದ್ದಾರೆ.
Advertisement
ಹನೂರು ಪಪಂಗೆ ಮೇ 29ರಂದು ಚುನಾವಣೆ ಘೋಷಣೆಯಾಗಿದ್ದು ನಾಮಪತ್ರ ಸಲ್ಲಿಕೆಗೆ ಗುರುವಾರ ಅಂತಿಮ ದಿನವಾಗಿತ್ತು. ಅಂತಿಮ ದಿನ 39 ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಬುಧವಾರ 8 ಅಭ್ಯರ್ಥಿ ಗಳು ಮತ್ತು ಮಂಗಳವಾರ ಓರ್ವ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದರು.
Related Articles
Advertisement
ಬಿಎಸ್‌ಪಿಯಿಂದ ಒಂದು, ಪಕ್ಷೇತರ ಮೂರು: ಪಪಂ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನಿಂದ ಒಟ್ಟು 43 ನಾಮಪತ್ರ ಸಲ್ಲಿಕೆಯಾಗಿದ್ದು, ಬಹುಜನ ಸಮಾಜ ವಾದಿ ಪಕ್ಷದಿಂದ 4ನೇ ವಾರ್ಡಿನ ಅಭ್ಯರ್ಥಿ ಯಾಗಿ ರುಕ್ಮಿಣಿ, ಪಕ್ಷೇತರರಾಗಿ 4ನೇ ವಾರ್ಡಿ ನಿಂದ ಚಂದ್ರಕಲಾ, 5ನೇ ವಾರ್ಡಿನಿಂದ ರಾಜಮಣಿ, 11ನೇ ವಾರ್ಡಿನಿಂದ ಸಂತೋಷ್.ಆರ್ ನಾಮಪತ್ರ ಸಲ್ಲಿಸಿದ್ದಾರೆ.
ಹಾಲಿ-ಮಾಜಿಗಳು ಕಣಕ್ಕೆ: ಹನೂರು ಪಪಂ ಚುನಾವಣೆಯಲ್ಲಿ ಈ ಬಾರಿ ಹಾಲಿ ಉಪಾಧ್ಯಕ್ಷ 13ನೇ ವಾರ್ಡಿನಿಂದ, ಟಿಎಪಿಸಿಎಂಎಸ್ ನಿರ್ದೇಶಕ ಹಾಗೂ ಮಾಜಿ ಉಪಾಧ್ಯಕ್ಷ ಮಾದೇಶ್ 8ನೇ ವಾರ್ಡಿನಿಂದ ಕಣದಲ್ಲಿದ್ದಾರೆ. ಅಲ್ಲದೆ 2ನೇ ವಾರ್ಡಿನ ಹಾಲಿ ಸದಸ್ಯೆ ಮಹದೇವಮ್ಮರ ಪುತ್ರ ಸುದೇಶ್ 2ನೇ ವಾರ್ಡಿನಿಂದಲೇ ಕಣಕ್ಕಿಳಿದಿದ್ದು, 9ನೇ ವಾರ್ಡಿನ ಸದಸ್ಯೆ ಶೋಭಾ ಪತಿ ರಾಜೇಶಾಚಾರಿ 6ನೇ ವಾರ್ಡಿನಿಂದ ಕಣದಲ್ಲಿದ್ದಾರೆ.
ಜೆಡಿಎಸ್ ಮುಖಂಡರ ಆಟಾಟೋಪ: ನಾಮಪತ್ರ ಸಲ್ಲಿಕೆಗೆ ಚುನಾವಣಾ ಕಾರ್ಯಾಲಯಕ್ಕೆ ಆಗಮಿಸಿದ್ದ ಜೆಡಿ ಎಸ್ ಮುಖಂಡರು ಕಾರ್ಯಾಲಯದಲ್ಲಿ ಜೆಡಿಎಸ್ ಕಚೇರಿಯಂತೆ ವರ್ತಿಸಿದ್ದು ಕಚೇರಿಯಲ್ಲಿಯೇ ನೀರು- ತಂಪು ಪಾನೀಯಗಳನ್ನು ಸವಿಯುತ್ತಾ ಗುಂಪು ಗುಂ ಪಾಗಿ ಚರ್ಚೆಯಲ್ಲಿ ನಿರತರಾಗಿದ್ದರು. ಈ ವೇಳೆಗೆ ಬಿಜೆಪಿ ಅಭ್ಯರ್ಥಿಗಳ ಪರ ನಾಮಪತ್ರ ಸಲ್ಲಿಕೆಗೆ ಕಾರ್ಯಾಲಯಕ್ಕೆ ಆಗಮಿಸಿದ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಇದೇನು ಪಕ್ಷದ ಕಚೇರಿಯೇ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಚುನಾವಣಾಧಿ ಕಾರಿ ಮತ್ತು ಪೊಲೀಸ್ ಸಿಬ್ಬಂದಿ ಜೆಡಿಎಸ್ ಮುಖಂ ಡರನ್ನು ಕಾರ್ಯಾಲಯದಿಂದ ಹೊರಗಡೆ ಕಳುಹಿಸಿದರು.
ಸ್ಥಳೀಯ ಸಂಸ್ಥೆ ಚುನಾವಣೆ : ಒಟ್ಟು 175 ನಾಮಪತ್ರ ಸಲ್ಲಿಕೆ
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ಪುರಸಭೆ, ಹನೂರು,ಯಳಂದೂರು ಪಟ್ಟಣ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಅವಧಿಯು ಗುರುವಾರ ಮುಕ್ತಾಯವಾಗಿದ್ದು, ಇದುವರೆಗೆ ಒಟ್ಟಾರೆ 173 ಅಭ್ಯರ್ಥಿಗಳಿಂದ 175 ನಾಮಪತ್ರ ಸಲ್ಲಿಕೆಯಾಗಿವೆ.
ಗುಂಡ್ಲುಪೇಟೆ ಪುರಸಭೆ ಚುನಾವಣೆಗೆ 78 ಅಭ್ಯರ್ಥಿಗಳಿಂದ 79 ನಾಮಪತ್ರಗಳು ಸಲ್ಲಿಕೆ ಯಾಗಿವೆ. ಯಳಂದೂರು ಪಟ್ಟಣ ಪಂಚಾಯಿತಿ ಚುನಾವಣೆಗೆ 47 ಅಭ್ಯರ್ಥಿಗಳಿಂದ 48 ನಾಮಪತ್ರಗಳು ಸಲ್ಲಿಕೆಯಾಗಿವೆ. ಹನೂರು ಪಪಂ ಚುನಾವಣೆಗೆ 48 ಅಭ್ಯರ್ಥಿಗಳಿಂದ 48 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.