Advertisement

ನೀವು ನೋಡಿರದ ಬಿಗ್‌ಬಾಸ್‌

02:51 AM Jan 22, 2019 | Team Udayavani |

ನಮ್ಮ ಹಾಸ್ಟೆಲ್‌ ಕೂಡ ಒಂಥರಾ ಬಿಗ್‌ಬಾಸ್‌ ಮನೆ ಇದ್ದಂತೆ. ಇಲ್ಲೂ ಸಾಕಷ್ಟು ಸಿ.ಸಿ. ಕ್ಯಾಮೆರಾಗಳುಂಟು. ಆದರೆ, ಬಿಗ್‌ಬಾಸ್‌ ಮನೆಯ ಕ್ಯಾಮೆರಾಗಳಂತೆ ಇವು ನಮ್ಮನ್ನು ಝೂಮ್‌ ಮಾಡಿ ನೋಡೋದಿಲ್ಲ ಅನ್ನೋದೇ ಸಮಾಧಾನ. ಈ ಕ್ಯಾಮೆರಾಗಳು ಒಂದು ಸಲ ನೆಟ್ಟಗಿದ್ರೆ, ಮತ್ತೂಂದು ಸಲ ಪೇಶೆಂಟ್‌ ಆಗಿರಿ¤ದುÌ…

Advertisement

ನನ್ನ ಹಾಸ್ಟೆಲ್‌ ಪ್ರಯಾಣ, ಕೊನೆಯ ಸ್ಟಾಪ್‌ಗೆ ಬಂದುಬಿಟ್ಟಿದೆ. ಈ ಹೊತ್ತಿನಲ್ಲಿ ಹಳೇ ಕಿತಾಪತಿಗಳೆಲ್ಲ ನೆನಪಾಗಿಬಿಟ್ಟವು… ಹಾಸ್ಟೆಲ್‌ನಲ್ಲಿ ನಮ್ಮದೊಂದು ಗ್ಯಾಂಗ್‌ ಇದೆ. ಅದಕ್ಕೆ “ನವಗ್ರಹ’ ಅಂತ ಅಡುಗೆ ಆಂಟಿಯೇ ಟೈಟಲ್‌ ಕೊಟ್ಟಿದ್ದಾರೆ. ಸೀನಿಯರ್‌- ಜ್ಯೂನಿಯರ್‌ ಅಂತ ಭೇದವಿಲ್ಲದೇ, ಎಲ್ಲೆಡೆ ನಮ್ಮ ಗ್ಯಾಂಗ್‌ ಹೊರಡುತ್ತಿತ್ತು. ನಮ್ಮ ಟೀಮ್‌ನಲ್ಲಿ ತುಂಟಾಟ, ಕಿತಾಪತಿಗಳು ಜಾಸ್ತಿಯೇ ಇವೆ. ಆದರೆ, ಎಲ್ಲವನ್ನೂ ಹೇಳುವುದಿಲ್ಲ; ಕೆಲವೊಂದನ್ನು ಹೇಳದೇ ಬಿಡುವುದೂ ಇಲ್ಲ.

ಎಲ್ಲರೂ ಊಟ ಮಾಡುವವರೆಗೆ ಸುಮ್ಮನಿದ್ದು, ಕೊನೆಗೆ ಹೋಗುವ ಒಳ್ಳೇ ಅಭ್ಯಾಸ ನಮ್ಮದು. “ನಮ್ಗೆàಕೆ ಊಟ ಇಲ್ಲ?’ ಅಂತ ಅಡುಗೆ ಆಂಟಿಯನ್ನು ಪ್ರಶ್ನಿಸಿ, ಬೆಳ್ಳುಳ್ಳಿ ಚಿತ್ರಾನ್ನ ಮಾಡಿಸಿಕೊಂಡು, ಚಪ್ಪರಿಸುವ ಪ್ರಸಂಗಗಳಲ್ಲೇ ನಮಗೇನೋ ಸುಖ. ನಮ್ಮ ಕಪಿಚೇಷ್ಟೆ ಇಷ್ಟಕ್ಕೇ ಮುಗಿಯುತ್ತಿರಲಿಲ್ಲ. ಅಕ್ಕಪಕ್ಕದ ರೂಮ್‌ನವರು ಮಲಗೋ ತನಕ ಸುಮ್ಮನಿದ್ದು, ನಂತರ ಜೋರಾಗಿ ಮಾತಾಡುತ್ತಾ, ಸೌಂಡ್‌ ಮಾಡುತ್ತಿದ್ದೆವು. ಅವರೆಲ್ಲ ನಿದ್ದೆಗಣ್ಣಿಂದ ಎದ್ದು ಬಂದು, ನೋಡುವಷ್ಟರಲ್ಲಿ “ಏನೂ ಆಗೇ ಇಲ್ವಲ್ಲ’ ಎಂಬಂತೆ, ಲೈಟ್‌ ಆಫ್ ಮಾಡಿ, ಮಲಗಿಬಿಡುತ್ತಿದ್ದೆವು.

ನಮಗೆ ಎಷ್ಟೋ ಸಲ ರಾತ್ರಿ ಊಟ ಹಿಡಿಸುತ್ತಿರಲಿಲ್ಲ. “ಆಯಾ ಆಂಟಿಗೆ ಮೈ ಹುಷಾರಿಲ್ಲ, ಮಾತ್ರೆ ತರಬೇಕು…’ ಎಂದು ಸೆಕ್ಯೂರಿಟಿ ಗಾರ್ಡ್‌ಗೆ ಚಳ್ಳೇಹಣ್ಣು ತಿನ್ನಿಸಿ, ಹೊರಗೆ ಗೋಬಿ ಮಂಚೂರಿಯೋ, ಮಸಾಲೆ ಫ್ರೈಡ್‌ರೈಸನ್ನೋ ಮೆಂದು ಬರುತ್ತಿದ್ದೆವು. ಇಲ್ಲಿ ನಮ್ಮನ್ನು ಥಂಡಾ ಹೊಡೆಸುತ್ತಿದ್ದುದ್ದು, ತಣೀರಿನ ಸ್ನಾನ ಮಾತ್ರವೇ. ಆದರೆ, ತಣ್ಣೀರಿಗೂ ಒಂದು ಗತಿ ಕಾಣಿಸದೇ ಬಿಡುತ್ತಿರಲಿಲ್ಲ. ವಾರ್ಡನ್‌ನ ಕಣ್ತಪ್ಪಿಸಿ, ಹೀಟರ್‌ ಹಾಕ್ಕೊಂಡು, ಬೆಚ್ಚಗೆ ಸ್ನಾನ ಮಾಡುತ್ತಿದ್ದೆವು. ಅಕ್ಕಪಕ್ಕದ ಮನೆ ಖಾಲಿ ಇದ್ರೆ, ಕತೆ ಮುಗಿದಂತೆ. ಅವರ ಕಾಂಪೌಂಡ್‌ ಒಳಗಿದ್ದ ಮಾವಿನಕಾಯಿ, ನೆಲ್ಲಿಕಾಯಿಯ ಮರ ಹತ್ತಿ, ಕಾಯಿಗಳನ್ನು ಕದ್ದು ತಂದು, ಉಪ್ಪಿನಕಾಯಿ ಮಾಡಿಕೊಂಡು ಮಜಾ ಅನುಭವಿಸುತ್ತಿದ್ದೆವು.

ಇದಕ್ಕಿಂತ ಹೆಚ್ಚಾಗಿ ಯಾವ ಸೀರಿಯಲ್‌ಗ‌ೂ ಕಮ್ಮಿ ಇಲ್ಲದಂತೆ ಡ್ರಾಮಾ ಸೃಷ್ಟಿಸುತ್ತಿದ್ದೆವು. ಒಂದು ದಿನ ನಮ್ಮ ಗ್ಯಾಂಗ್‌, ಅಕ್ಕಪಕ್ಕದ ರೂಮ್‌ಗಳ ಬಾಗಿಲಿಗೆ ಕುಂಕುಮ ಚೆಲ್ಲಿ, ನಿಂಬೆಹಣ್ಣನ್ನು ಕತ್ತರಿಸಿ, ದೆವ್ವ ಇದೆ ಅಂತಲೇ ನಂಬಿಸಿಬಿಟ್ಟಿದ್ದೆವು. ಅದು ವಾರ್ಡನ್‌ನ ಕಿವಿಗೆ ತಲುಪಿ, ಚೆನ್ನಾಗಿ ಉಗಿಸಿಕೊಂಡಿದ್ದೂ ಆಯ್ತು. ನಾವೇ ಮಾಡಿದ್ದು ಅಂತ ಅನುಮಾನ ಬಾರದೇ ಇರಲು, ನಮ್ಮ ರೂಮ್‌ನ ಬಾಗಿಲಿಗೂ ಕುಂಕುಮ ಹಾಕಿದ್ದರೂ, ಏನೂ ಪ್ರಯೋಜನ ಆಗಲಿಲ್ಲ.

Advertisement

ನಮ್ಮ ಹಾಸ್ಟೆಲ್‌ ಕೂಡ ಒಂಥರಾ ಬಿಗ್‌ಬಾಸ್‌ ಮನೆ ಇದ್ದಂತೆ. ಹೇಗೆ ಅಂತೀರಾ? ಇಲ್ಲೂ ಸಾಕಷ್ಟು ಸಿ.ಸಿ. ಕ್ಯಾಮೆರಾಗಳುಂಟು. ಆದರೆ, ಬಿಗ್‌ಬಾಸ್‌ ಮನೆಯ ಕ್ಯಾಮೆರಾಗಳಂತೆ ಇವು ನಮ್ಮನ್ನು ಝೂಮ್‌ ಮಾಡಿ ನೋಡೋದಿಲ್ಲ ಅನ್ನೋದೇ ಸಮಾಧಾನ. ಈ ಕ್ಯಾಮೆರಾಗಳು ಒಂದು ಸಲ ನೆಟ್ಟಗಿದ್ರೆ, ಮತ್ತೂಂದು ಸಲ ಪೇಶೆಂಟ್‌ ಆಗಿರಿ¤ದುÌ. ಅವುಗಳು ಹುಷಾರು ತಪ್ಪಿದಾಗಲೆಲ್ಲ, ನಮ್ಮ ತುಂಟಾಟಕ್ಕೆ ಟಾಪ್‌ಗೆàರ್‌ನ ಹುರುಪು. ಬಿಗ್‌ಬಾಸ್‌ ಮನೆಯಿಂದ ಒಂದು ಸಲ ಹೊರಗೆ ಕಾಲಿಟ್ಟರೆ, ಮರಳಿ ಒಳಗೆ ಹೋಗಲು ಸಾಧ್ಯವಿಲ್ಲ. ಒಂದು ವೇಳೆ ಹೋದರೂ ಗೆಸ್ಟ್‌ ಆಗಿಯಷ್ಟೇ ಹೋಗಬಹುದು. ನಮ್ಮ ಹಾಸ್ಟೆಲ್‌ ಕೂಡ ಹಾಗೆಯೇ. ಒಂದು ಸಲ ನಮ್ಮ ಓದು ಮುಗೀತು ಅಂತಾಂದ್ರೆ, ಜಪ್ಪಯ್ನಾ ಅಂದ್ರೂ ಇಲ್ಲಿ ನಮ್ಮನ್ನು ಇರಲು ಬಿಡೋದಿಲ್ಲ. ಗೆಸ್ಟ್‌ ಆಗಿ ಹೋಗಿ, ಸೆಲ್ಫಿ ತೆಗೆದುಕೊಂಡು ಬರಬಹುದಷ್ಟೇ. 

ಅದೇನೋ ಗೊತ್ತಿಲ್ಲ… ಈ ಹಾಸ್ಟೆಲ್‌ ನಮ್ಮ ಪಾಲಿಗೆ ಸಂಜೀವಿನಿ ಇದ್ದಹಾಗೆ. ಮನೆಯಲ್ಲಿ ನೂರಾರು ನೋವಿದ್ದರೂ, ಇಲ್ಲಿಗೆ ಬಂದ ತಕ್ಷಣ ಅವೆಲ್ಲ ಮರೆತು ಹೋಗುತ್ತಿದ್ದವು. ಒಂದೇ ತಟ್ಟೆಯಲ್ಲಿ ಕಚ್ಚಾಡಿಕೊಂಡು, ತಿನ್ನುವ ಸುಖದಲ್ಲೂ ಆನಂದವಿತ್ತು. ಬಾಟಲ್‌ಗೆ ನೀರು ತುಂಬಿಸಿಲ್ಲ, ರೂಮ್‌ನ ಕಸ ಗುಡಿಸಿಲ್ಲ ಎನ್ನುತ್ತಾ ವರ್ಲ್xವಾರ್‌ ನಡೆಸುತ್ತಿದ್ದೆವು. ಬಾತ್‌ರೂಮ್‌ನ ಮುಂಭಾಗವಂತೂ ಕುರುಕ್ಷೇತ್ರವೇ ಆಗಿತ್ತು. ಪರೀಕ್ಷೆ ವೇಳೆ ರೂಮ್‌ನಲ್ಲಿ ಯಾರಾದ್ರೂ ಮಾತಾಡಿದ್ರೆ, ಅವರಿಗೆ ರೂಮ್‌ನಿಂದ ಗಡಿಪಾರು ಪಕ್ಕಾ. ಆದರೆ, ಇನ್ನು ಮುಂದೆ ಇವೆಲ್ಲ ನೆನಪುಗಳಷ್ಟೇ. ಇನ್ನೇನಿದ್ರೂ, ಲಗಾಮು ಹಾಕಿದ ಕುದುರೆ ಥರ ಇರಬೇಕು. ಜಾಸ್ತಿ ತರಲೆ ಮಾಡಿದ್ರೆ, ಬೇಗ ಮದುವೆ ಮಾಡ್ತಾರೆ ಅನ್ನೋ ಭಯ ಕಾಡುತ್ತಿದೆ!

ಒಂದೇ ಒಂದ್‌ ಒಳ್ಳೇ ಕೆಲ್ಸ ಅಂದ್ರೆ…
ಇಷ್ಟೆಲ್ಲ ತರಲೆ ಮಾಡಿದ್ವಿ ಅಂತ, ನಮ್ಮನ್ನು ಕಿರಿಕ್‌ ಪಾರ್ಟಿಗಳ ಸಾಲಿಗೆ ಸೇರಿಸಿಬಿಡ್ಬೇಡಿ. ನಮ್ಮ ಗ್ಯಾಂಗು ಒಳ್ಳೆಯ ಕೆಲಸಗಳನ್ನೂ ಮಾಡಿದೆ. ನಾವಿದ್ದ ಹಾಸ್ಟೆಲ್‌ನಲ್ಲಿ ಲೈಬ್ರರಿಯೇ ಇರಲಿಲ್ಲ. ವಾರ್ಡನ್‌ ಬಳಿ ಈ ವಿಚಾರವನ್ನು ಚರ್ಚಿಸಿದೆವು. ಇದಕ್ಕಾಗಿ ನಮ್ಮ ತಂಡ, ಅಕ್ಕಪಕ್ಕದ ಊರುಗಳಿಗೆ ಭೇಟಿ ನೀಡಿ, ಸಾಕಷ್ಟು ಪುಸ್ತಕಗಳನ್ನು ಸಂಗ್ರಹಿಸಿದೆವು. ಹಾಸ್ಟೆಲ್‌ನಲ್ಲಿನ ಓದಿ ಮುಗಿಸಿದ ಪುಸ್ತಕಗಳನ್ನು, ಮಿನಿ ಗ್ರಂಥಾಲಯಕ್ಕೆ ಕೊಟ್ಟೆವು. ಅದಕ್ಕೆ “ನಿಮಿಷಾ ಗ್ರಂಥಾಲಯ’ ಅಂತ ಹೆಸರಿಟ್ಟ ಪುಣ್ಯ ನಮಗೇ ಸಲ್ಲಬೇಕು!

– ಲಾವಣ್ಯ. ಪಿ ಚನ್ನಗಿರಿ

Advertisement

Udayavani is now on Telegram. Click here to join our channel and stay updated with the latest news.

Next