Advertisement

ಅತೀ ದೊಡ್ಡರೈಲ್ವೇ ಜಾಲ: ವಿಶ್ವದ ನಾಲ್ಕನೇ ದೇಶ ಭಾರತ 

11:04 PM Jul 09, 2023 | Team Udayavani |

ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಭಾರತೀಯ ರೈಲ್ವೇ ಜನರ ಪಾಲಿಗೆ ಜೀವನಾಡಿಯಾಗಿದೆ. ದೇಶದ ವಾಣಿಜ್ಯ ರಾಜಧಾನಿಯಾದ ಮುಂಬಯಿಯಲ್ಲಂತೂ ರೈಲು ಸೇವೆ ಜನರ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿದ್ದು ಇಲ್ಲಿನ ಲೋಕಲ್‌ ರೈಲುಗಳಲ್ಲಿ ಪ್ರಯಾಣಿಸುವುದೇ ಒಂದು ಅದ್ಭುತ ಅನುಭವ. ಕಳೆದೊಂದು ದಶಕದ ಅವಧಿಯಲ್ಲಿ ಭಾರತೀಯ ರೈಲ್ವೇ ಸಾಕಷ್ಟು ಸುಧಾರಣೆಗಳನ್ನು ಕಂಡಿದೆ. ರೈಲ್ವೇ ಇಲಾಖೆ ತನ್ನ ಕಾರ್ಯಾಚರಣೆ ಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು, ಸುರಕ್ಷೆಗೆ ಹೆಚ್ಚಿನ ಒತ್ತು ನೀಡುತ್ತ ಬಂದಿದೆ. ಅಷ್ಟು ಮಾತ್ರವಲ್ಲದೆ ರೈಲು ಹಳಿಗಳ ವಿಸ್ತರಣೆ, ನಿಲ್ದಾಣಗಳ ಅಭಿವೃದ್ಧಿ, ಹೊಸದಾಗಿ ರೈಲು ಮಾರ್ಗಗಳ ನಿರ್ಮಾಣ, ನಗರಗಳ ನಡುವೆ ಹೊಸ ರೈಲುಗಳ ಓಡಾಟ, ರೈಲು ಸೇವೆಗಳಲ್ಲಿ ಸುಧಾರಣೆ ಮತ್ತಿತರ ಕ್ರಮಗಳ ಮೂಲಕ ಭಾರತೀಯರೈಲ್ವೇ ಮತ್ತಷ್ಟು ಜನಸ್ನೇಹಿ ಯಾಗಿ ಕಾರ್ಯಾಚರಿಸುತ್ತಿದೆ.

Advertisement

4ನೇ ಅತೀದೊಡ್ಡ ರೈಲ್ವೇ ಜಾಲ
ವಿಶ್ವದಲ್ಲಿ ಅಮೆರಿಕ, ರಷ್ಯಾ ಮತ್ತು ಚೀನದ ಬಳಿಕ ಅತೀ ದೊಡ್ಡ ರೈಲ್ವೇ ಜಾಲವನ್ನು ಹೊಂದಿರುವ ಕೀರ್ತಿ ಭಾರತದ್ದಾಗಿದೆ.
ದೇಶದಲ್ಲಿ ಸರಿಸುಮಾರು 68,000 ಕಿ.ಮೀ.ಗಳಷ್ಟು ಉದ್ದದ ರೈಲ್ವೇ ಮಾರ್ಗವಿದೆ. ದೇಶದಲ್ಲಿ ಪ್ರತೀದಿನ ಸುಮಾರು 20 ಸಾವಿರ ರೈಲುಗಳು ಸಂಚರಿಸುತ್ತವೆ. ಈ ರೈಲುಗಳಲ್ಲಿ 2.5 ಕೋಟಿ ಜನರು ಪ್ರಯಾಣಿಸುತ್ತಿದ್ದರೆ, 28 ಲಕ್ಷ ಟನ್‌ಗಳಿಗೂ ಅಧಿಕ ಸರಕುಗಳನ್ನು ಸಾಗಣೆ ಮಾಡಲಾಗುತ್ತದೆ.

ಅತೀದೊಡ್ಡ ಉದ್ಯೋಗದಾತ ಸಂಸ್ಥೆ
ಭಾರತೀಯ ರೈಲ್ವೇಯಲ್ಲಿ ಸುಮಾರು 14 ಲಕ್ಷ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಭಾರತೀಯ ರೈಲ್ವೇಯು ವಿಶ್ವದ 7ನೇ ಅತೀದೊಡ್ಡ ಉದ್ಯೋಗದಾತ ಸಂಸ್ಥೆಯಾಗಿದೆ. ಭಾರತೀಯ ರೈಲ್ವೇಯು 12 ಸಾವಿರಕ್ಕೂ ಅಧಿಕ ಲೋಕೊಮೋಟಿವ್‌ ಅಂದರೆ ಎಂಜಿನ್‌, 76 ಸಾವಿರಕ್ಕೂ ಹೆಚ್ಚು ಪ್ರಯಾಣಿಕ ಬೋಗಿಗಳು ಮತ್ತು ಸುಮಾರು 3 ಲಕ್ಷದಷ್ಟು ಸರಕು ಸಾಗಣೆ ಬೋಗಿಗಳನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next