Advertisement

ಲೇಹ್‌ ಶಿಖರದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ

01:04 AM Oct 03, 2021 | Team Udayavani |

ಗಾಂಧಿ ಜಯಂತಿ ಮತ್ತು ದೇಶದ 75ನೇ ಸ್ವಾತಂತ್ರ್ಯೋತ್ಸವ ದ ಸ್ಮರಣಾರ್ಥ ಶನಿವಾರ ಲಡಾಖ್‌ನ ಶಿಖರವೊಂದರ ಮೇಲೆ ಜಗತ್ತಿನಲ್ಲೇ ಅತೀ ದೊಡ್ಡದಾದ ಖಾದಿ ರಾಷ್ಟ್ರಧ್ವಜವನ್ನು ಅನಾವರಣಗೊಳಿಸಲಾಗಿದೆ.

Advertisement

ಲೇಹ್‌ ಕಣಿವೆಯ ಮುಂಭಾಗದ ಶಿಖರದಲ್ಲಿ ಲಡಾಖ್‌ ಲೆಫ್ಟಿನೆಂಟ್‌ ಗವರ್ನರ್‌ ಆರ್‌.ಕೆ. ಮಾಥೂರ್‌ ಅವರು ಧ್ವಜ ಅನಾವರಣಗೊಳಿಸಿದರು.

ಭೂಸೇನಾ ಮುಖ್ಯಸ್ಥ ಜ| ಎಂ.ಎಂ. ನರವಾಣೆ, ನಾರ್ದರ್ನ್ ಕಮಾಂಡ್‌ನ‌ ಮುಖ್ಯಸ್ಥ ಲೆ|ಜ| ವೈ.ಕೆ. ಜೋಷಿ ಮತ್ತಿತರ ಸೇನಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ:ನಮಾಮಿ ಗಂಗೆ ಯೋಜನೆಗೆ ಚಾಚಾ ಚೌಧರಿ ಲಾಂಛನ

ರಾಷ್ಟ್ರಧ್ವಜವು ದೇಶದ ಏಕತೆ, ಮಾನವೀಯತೆಯ ಸಂಕೇತ ಎಂದು ಗಾಂಧೀಜಿ ಹೇಳಿದ್ದರು. ಲೇಹ್‌ನ ನಮ್ಮ ಯೋಧರಲ್ಲಿ ಇದು ಸ್ಫೂರ್ತಿ ತುಂಬಲಿದೆ.
– ಆರ್‌.ಕೆ. ಮಾಥೂರ್‌, ಲಡಾಖ್‌ ಲೆಫ್ಟಿನೆಂಟ್‌ ಗವರ್ನರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next