Advertisement
ರಾಜಧಾನಿನಲ್ಲಿ ಕಳೆದ ಒಂದೂವರೆ ತಿಂಗಳಿಂದ 60ಕ್ಕೂ ಹೆಚ್ಚು ಬೃಹತ್ ಗಾತ್ರದ ಮರಗಳು ಹಾಗೂ 800ಕ್ಕೂ ಹೆಚ್ಚು ಮರದ ಕೊಂಬೆಗಳು ಉರುಳಿದ್ದು, ಹಲವೆಡೆ ವಾಹನಗಳು ಜಖಂಗೊಂಡಿವೆ. ಇದರೊಂದಿಗೆ ರಸ್ತೆಗಳಲ್ಲಿ ಮರಗಳು ಉರುಳಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದ್ದು, ಆ ಹಿನ್ನೆಲೆಯಲ್ಲಿ ಮಳೆಗಾಲ ಆರಂಭವಾಗುವ ಮೊದಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳಿಗೆ ಮುಂದಾಗುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
Related Articles
ಮರಗಳ ಬುಡದಲ್ಲಿ ಕಾಂಕ್ರಿಟ್ ಹಾಕಿರುವುದರಿಂದ ಮರಗಳ ಬೇರುಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ಸಮರ್ಪಕವಾಗಿ ನೀರು ಲಭ್ಯವಾಗದ ಹಿನ್ನೆಲೆಯಲ್ಲಿ ಬೇರುಗಳು ದುರ್ಬಲವಾಗುತ್ತಿದ್ದು, ಭೂಮಿಯ ಆಳಕ್ಕೆ ಬೇರು ಬಿಡದೆ, ಮೇಲ್ಪದಲ್ಲಿಯೇ ಹರಡಿಕೊಳ್ಳುತ್ತಿವೆ. ಇದರಿಂದಾಗಿ ಜೋರಾದ ಗಾಳಿ ಅಥವಾ ಮಳೆಯಾದಾಗ ಮರಗಳು ಧರೆಗುರುಳುತ್ತವೆ ಎಂಬುದು ತಜ್ಞರ ಅಭಿಪ್ರಾಯ.
Advertisement
ಸಮೀಕ್ಷೇ ನಡೆಯಲೇ ಇಲ್ಲ ಮಳೆಗಾಲದಲ್ಲಿ ಮರಗಳು ಧರೆಗುರುಳಿ ಅನಾಹುತ ಸಂಭವಿಸುವುದ ತಡೆಯಲು ಬಿಬಿಎಂಪಿ ವ್ಯಾಪ್ತಿಯ ಮರಗಳ ಸಮೀಕ್ಷೆ ನಡೆಸಿ, ದುರ್ಬಲಗೊಂಡಿರುವ ಹಾಗೂ ಶಿಥಿಲಾವಸ್ಥೆಯಲ್ಲಿರುವ ಮರಗಳನ್ನು ಗುರುತಿಸಿ ತೆರವುಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ, ಪಾಲಿಕೆಯ ಅಧಿಕಾರಿಗಳು ಈವರೆಗೆ ಸಮೀಕ್ಷೆ ನಡೆಸದ ಹಿನ್ನೆಲೆಯಲ್ಲಿ ಮರಗಳು ಧರೆಗುರುಳುತ್ತಲೇ ಇವೆ. ಮರವೊಂದಕ್ಕೆ ಸಾವಿರ ಗಾಯ ನಗರದಲ್ಲಿನ ಪ್ರತಿಯೊಂದು ಮರಕ್ಕೆ ಸಾವಿರಾರು ಗಾಯಗಳನ್ನು ಮಾಡ ಲಾಗಿದೆ.
ಪಾದ ಚಾರಿ ಮಾರ್ಗಗಳಲ್ಲಿ ಮರಗಳಿಗೆ ನೀರು ಹೋಗದಂತೆ ಕಾಂಕ್ರಿಟ್ ಹಾಕಲಾಗಿದೆ. ಜತೆಗೆ ಒಳಚರಂಡಿ, ಒಎಫ್ಸಿ, ಟೆಂಡರ್‌ಶ್ಯೂರ್ ರಸ್ತೆಗಳು, ಗ್ಯಾಸ್‌ಲೈನ್ ಹೀಗೆ ಹತ್ತಾರು ಉದ್ದೇಶಗಳಿಗೆ ಮರದ ಬೇರು ಗಳನ್ನು ಕತ್ತರಿಸಲಾಗಿದ್ದು, ವಿದ್ಯುತ್ ತಂತಿ, ಕೇಬಲ್, ಹೋರ್ಡಿಂಗ್ ಅಳವಡಿಕೆ ಸೇರಿ ದಂತೆ ಇತರೆ ಉದ್ದೇಶಗಳಿಗೆ ಅವ್ಯವಸ್ಥಿತವಾಗಿ ಮರದ
ಕೊಂಬೆಗಳನ್ನು ಕತ್ತರಿಸಲಾಗಿರು ವುದರಿಂದ ಒಂದು ಕಡೆಗೆ ಭಾರದ ಹೆಚ್ಚಿ ಜೋ ರಾಗಿ ಗಾಳಿ ಬೀಸಿದಾಗ ಮರಗಳು ಉರುಳುತ್ತಿವೆ. ಮರಗಳ ಬುಡಕ್ಕೆ ಕಾಂಕ್ರಿಟ್ ಹಾಕಿ ಮುಚ್ಚುವುದರಿಂದ ನೀರು ಬೇರುಗಳಿಗೆ ತಲುಪದ ಹಿನ್ನೆಲೆಯಲ್ಲಿ ಅವು ಸಡಿಲವಾಗುತ್ತವೆ. ಇದರೊಂದಿಗೆ ಅವೈಜ್ಞಾನಿಕವಾಗಿ ಕೊಂಬೆಗಳನ್ನು ಕತ್ತರಿಸುವುದರಿಂದ ಅಸಮತೋಲನ ಉಂಟಾಗಿ ಗಾಳಿ ಬಂದಾಗ ಬೀಳುತ್ತವೆ. ಪಾಲಿಕೆಯ ಅಧಿಕಾರಿಗಳು ಅಂತಹ ಮರಗಳನ್ನು ಗುರುತಿಸಿ ಅಗತ್ಯ ಕ್ರಮಕ್ಕೆ ಮುಂದಾಗಬೇಕು.
ಹರಿಣಿ ನಾಗೇಂದ್ರ, ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯ ಪ್ರಾಧ್ಯಾಪಕಿ ಪಾಲಿಕೆಯ ಅಧಿಕಾರಿಗಳು ಮುಂಗಾರು ಪೂರ್ವ ಹಾಗೂ ಮುಂಗಾರು ನಂತರದಲ್ಲಿ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅದರಂತೆ ದುರ್ಬಲಗೊಂಡಿರುವ, ಒಣಗಿರುವ ಕೊಂಬೆಗಳನ್ನು ತೆರವುಗೊಳಿಸಬೇಕು. ಜತೆಗೆ ಬೇರುಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗಲು ಅವಕಾಶ ಕಲ್ಪಿಸಬೇಕು. ಮರಗಳಿಗೆ ಆಗಿರುವ ಗಾಯಗಳಿಗೆ ಅಗತ್ಯ ಚಿಕಿತ್ಸೆ ಒದಗಿಸಲು ಮುಂದಾಗಬೇಕು.
ಡಾ.ಯಲ್ಲಪ್ಪರೆಡ್ಡಿ, ಪರಿಸರವಾದಿ ಬಿಬಿಎಂಪಿ ವತಿಯಿಂದ ಈ ಸಾಲಿನಲ್ಲಿ ಮರಗಳ ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದ್ದು, ದುರ್ಬಲವಾಗಿರುವ
ಮರಗಳು ಹಾಗೂ ಒಣಗಿದ ಕೊಂಬೆಗಳ ತೆರವು ಕಾರ್ಯಾಚರಣೆಯನ್ನು ಪಾಲಿಕೆಯ ಅರಣ್ಯ ಘಟಕ ಸಿಬ್ಬಂದಿ ನಡೆಸುತ್ತಿದ್ದಾರೆ. ಇದರೊಂದಿಗೆ ಈ ಸಾಲಿನಲ್ಲಿ ಆಳವಾಗಿ ಬೇರು ಬಿಡುವ ಸ್ವದೇಶಿ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ.
ಚೋಳರಾಜಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಿಬಿಎಂಪಿ ವೆಂ.ಸುನೀಲ್ ಕುಮಾರ್