Advertisement

ಲಿಂಗನಮಕ್ಕಿ  ಜಲಾನಯನದಲ್ಲಿ ಭಾರೀ ಮಳೆ

04:32 PM Aug 17, 2018 | |

ಹೊನ್ನಾವರ: ರಿಪ್ಪನಪೇಟೆ, ಸಾಗರ, ಹೊಸನಗರಗಳಲ್ಲಿ ಬುಧವಾರ ಭಾರೀ ಮಳೆಯಾದ ಕಾರಣ ಗುರುವಾರ ಬೆಳಗ್ಗೆ ಲಿಂಗನಮಕ್ಕಿಯ 7 ಗೇಟ್‌ಗಳನ್ನು ತೆರೆದು ಮತ್ತೆ ನೀರು ಬಿಡಲಾಗಿದೆ. ಮಳೆ ಕಡಿಮೆಯಾದ್ದರಿಂದ ಬುಧವಾರ ಮುಂಜಾನೆ ಲಿಂಗನಮಕ್ಕಿ ಅಣೆಕಟ್ಟಿನ ಮತ್ತು ಟೇಲರೀಸ್‌ ಅಣೆಕಟ್ಟಿನ ಎಲ್ಲ ಗೇಟ್‌ ಗಳನ್ನು ಮುಚ್ಚಲಾಗಿತ್ತು. ಟೇಲರೀಸ್‌ ಅಣೆಕಟ್ಟಿನಿಂದ ಗರಿಷ್ಠ ವಿದ್ಯುತ್‌ ಉತ್ಪಾದನೆ ಮಾಡಲಾಗಿತ್ತು. ಗುರುವಾರ ಬೆಳಗ್ಗೆ ಮಳೆ ಮುಂದುವರಿದ ಕಾರಣ ಲಿಂಗನಮಕ್ಕಿ ಅಣೆಕಟ್ಟಿನಿಂದ 10 ಸಾವಿರ ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದ್ದು ವಿದ್ಯುತ್‌ ಉತ್ಪಾದನೆ ಮಾಡಿ 23 ಸಾವಿರ ಕ್ಯೂಸೆಕ್‌ ನೀರು ಹೊರಬರುತ್ತಿದೆ.

Advertisement

ಈ ನೀರು ಜಲಪಾತದಲ್ಲಿ ಧುಮುಕಿ ಟೇಲರೀಸ್‌ ಅಣೆಕಟ್ಟಿಗೆ ಮಳೆ ನೀರಿನೊಂದಿಗೆ ಸೇರಿಕೊಂಡು 42 ಸಾವಿರ ಕ್ಯೂಸೆಕ್‌ ನೀರಾಗಿ ತುಂಬಿಕೊಂಡ ಕಾರಣ ಗುರುವಾರ ಮಧ್ಯಾಹ್ನ ಟೇಲರೀಸ್‌ ಅಣೆಕಟ್ಟಿನ ಗೇಟು ತೆರೆದು 20 ಸಾವಿರ ಕ್ಯೂಸೆಕ್‌ ಮತ್ತು ವಿದ್ಯುತ್‌ ಉತ್ಪಾದಿಸಿ 22 ಸಾವಿರ ಕ್ಯೂಸೆಕ್‌ ಸೇರಿ ಒಟ್ಟೂ 42 ಸಾವಿರ ಕ್ಯೂಸೆಕ್‌ ಗೇರುಸೊಪ್ಪೆಗೆ ಬಂದು ಜನವಸತಿ ಪ್ರದೇಶದಲ್ಲಿ ಹರಿಯತೊಡಗಿದೆ. ಶರಾವತಿಯಲ್ಲಿ ನೀರಿನ ಮಟ್ಟ ಮತ್ತೆ ಏರಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next