Advertisement
ಭಾರತದಲ್ಲಿ; ಕೊಲೊರೆಕ್ಟಲ್ ಕ್ಯಾನ್ಸರ್
Related Articles
ಪಾಲಿಪ್ಸ್: ದೊಡ್ಡ ಕರುಳು ಅಥವಾ ಗುದನಾಳದ ಒಳಭಿತ್ತಿಯಿಂದ ಬೆಳೆದು ಹೊರಚಾಚಿಕೊಳ್ಳುವ ಚಾಚಿಕೆಗಳು ಪಾಲಿಪ್‌ಗ್ಳು. ಇವು 50 ವರ್ಷ ವಯಸ್ಸಿಗಿಂತ ಮೇಲ್ಪಟ್ಟವರಲ್ಲಿ ಉಂಟಾಗುವುದು ಹೆಚ್ಚು. ಬಹುತೇಕ ಪಾಲಿಪ್‌ಗ್ಳು ಕ್ಯಾನ್ಸರೇತರವಾಗಿರುತ್ತವೆ. ಬಹುತೇಕ ಕೊಲೊರೆಕ್ಟಲ್ ಕ್ಯಾನ್ಸರ್ ಗಳು ಕೆಲವು ನಿರ್ದಿಷ್ಟ ಪಾಲಿಪ್ಸ್‌ಗಳಲ್ಲಿ ಬೆಳವಣಿಗೆ ಕಾಣುತ್ತವೆ ಎಂಬುದಾಗಿ ತಜ್ಞರು ಹೇಳುತ್ತಾರೆ. ಈ ಬೆಳವಣಿಗೆಗಳನ್ನು ಗುರುತಿಸಿ ತೆಗೆದುಹಾಕುವುದು ಕೊಲೊರೆಕ್ಟಲ್ ಕ್ಯಾನ್ಸರ್ ತಡೆಯಲು ಸಹಾಯ ಮಾಡಬಹುದಾಗಿದೆ.
Advertisement
ಕೌಟುಂಬಿಕ ಇತಿಹಾಸ: ಹೆತ್ತವರು, ಸಹೋದರರು, ಮಕ್ಕಳು – ಹೀಗೆ ಕೊಲೊರೆಕ್ಟಲ್ ಕ್ಯಾನ್ಸರ್‌ಗೆ ತುತ್ತಾದ ನಿಕಟ ಸಂಬಂಧಿಗಳನ್ನು ಹೊಂದಿರುವವರಿಗೆ ಈ ಕ್ಯಾನ್ಸರ್ ಬಾಧಿಸುವ ಸಾಧ್ಯತೆಗಳು ಅಧಿಕ.
ವೈಯಕ್ತಿಕ ಇತಿಹಾಸ: ಗರ್ಭಕೋಶ, ಮೂತ್ರಾಂಗ ಅಥವಾ ಸ್ತನ ಕ್ಯಾನ್ಸರ್‌ಗೆ ತುತ್ತಾಗಿರುವ ಕೆಲವು ಮಹಿಳೆಯರಿಗೆ ಕೊಲೊರೆಕ್ಟಲ್ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇದೆ ಎಂಬುದಾಗಿ ಸಂಶೋಧನೆಗಳು ಹೇಳಿವೆ.
ಪಥ್ಯಾಹಾರ: ಹೆಚ್ಚು ಕೊಬ್ಬು, ಕೆಂಪು ಮಾಂಸ, ಕ್ಯಾಲೊರಿ ಹಾಗೂ ಕಡಿಮೆ ನಾರಿನಂಶ, ಹಣ್ಣುಗಳು ಮತ್ತು ತರಕಾರಿಗಳಿರುವ ಆಹಾರಪದ್ಧತಿಗೂ ಕೊಲೊರೆಕ್ಟಲ್ ಕ್ಯಾನ್ಸರ್ ಉಂಟಾಗುವುದಕ್ಕೂ ಸಂಬಂಧ ಇದೆ ಎಂದು ಅಧ್ಯಯನಗಳು ಹೇಳುತ್ತವೆ.
ಕೊಲೊರೆಕ್ಟಲ್ ಕ್ಯಾನ್ಸರ್‌ನ್ನು ಬೇಗನೆ ಪತ್ತೆ ಹಚ್ಚಬಹುದೇ?
ಹೌದು! ಅನಾರೋಗ್ಯದ ಚಿಹ್ನೆಗಳು ಮತ್ತು ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕೆ ಮುನ್ನವೇ ಅದನ್ನು ಪತ್ತೆಹಚ್ಚುವುದಕ್ಕಾಗಿ ತಪಾಸಣೆಯನ್ನು ನಡೆಸುತ್ತಾರೆ. ಪಾಲಿಪ್ಸ್‌ಗಳು ಕ್ಯಾನ್ಸರ್ ಆಗಿ ಬದಲಾಗಬಲ್ಲವೇ ಎಂಬುದನ್ನು ತಪಾಸಣೆಯಿಂದ ಕಂಡುಕೊಳ್ಳಬಹುದು.
ಕೊಲೊರೆಕ್ಟಲ್ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯ ಸಾಧ್ಯತೆಗಳುಳ್ಳ ಮಹಿಳೆಯರು ಮತ್ತು ಪುರುಷರು 45 ವರ್ಷ ವಯಸ್ಸಿನ ಬಳಿಕ ಈ ಕೆಳಗಿನಂತೆ ತಪಾಸಣೆಯ ವೇಳಾಪಟ್ಟಿ ಹಾಕಿಕೊಳ್ಳಬೇಕು:
- ಪ್ರತೀ 10 ವರ್ಷಗಳಿಗೆ ಒಮ್ಮೆ ಕೊಲೊನೊಸ್ಕೊಪಿ
- ಪ್ರತೀ 5 ವರ್ಷಗಳಿಗೆ ಒಮ್ಮೆ ಫ್ಲೆಕ್ಸಿಬಲ್ ಸಿಗ್ಮಾಯ್ಡೊಸ್ಕೊಪಿ
- ಪ್ರತೀ 5 ವರ್ಷಗಳಿಗೆ ಒಮ್ಮೆ ಸಿಟಿ ಕೊಲೊನೊಸ್ಕೊಪಿ (ವರ್ಚುವಲ್ ಕೊಲೊನೊಸ್ಕೊಪಿ)
- ಗುದನಾಳದಿಂದ ರಕ್ತಸ್ರಾವ
- ಮಲವಿಸರ್ಜನೆಯ ಬಳಿಕ ಮಲದಲ್ಲಿ ಅಥವಾ ಶೌಚಾಲಯದಲ್ಲಿ ರಕ್ತದ ಅಂಶ ಕಂಡುಬರುವುದು
- ಬೇಧಿ ಅಥವಾ ಮಲಬದ್ಧತೆಯಂತಹ ಮಲವಿಸರ್ಜನೆಯಲ್ಲಿ ಬದಲಾವಣೆಗಳು
- ಮಲವಿಸರ್ಜನೆ ಆದ ಮೇಲೂ ಇನ್ನೂ ಸರಿಯಾಗಿ ಆಗಿಲ್ಲ ಎಂಬ ಅನುಭವ
- ಇತರ ಯಾವುದೇ ನಿರ್ದಿಷ್ಟ ಕಾರಣಗಳು ಇಲ್ಲದೆ ರಕ್ತಹೀನತೆ