Advertisement

ನೆಕ್ಕರೆ -ಕರಿಯಾಳ ಪರಿಸರ: ಕಸದ ರಾಶಿಯಿಂದ ತೊಂದರೆ

10:58 PM May 22, 2019 | Team Udayavani |

ಪುತ್ತೂರು: ಕಸ ವಿಲೇವಾರಿಗೆ ಸಂಬಂಧಿಸಿದಂತೆ ತೆರಿಗೆ ಸಂಗ್ರಹಿಸಿದರೂ ನಗರಸಭೆ ಆಡಳಿತ ಕಸ ವಿಲೇವಾರಿ ಮಾಡದೇ ಇರುವುದರಿಂದ ನೆಕ್ಕರೆ – ಕರಿಯಾಳ ಪರಿಸರದಲ್ಲಿ ಸಾರ್ವಜನಿಕ ಜಾಗಗಳಲ್ಲಿ ಕಸದ ರಾಶಿ ಬೀಳುತ್ತಿವೆ ಎಂದು ಚಿಕ್ಕಮುಟ್ನೂರು ಕಲಿಯುಗ ಸೇವಾ ಸಮಿತಿ ಆರೋಪಿಸಿದೆ.

Advertisement

ಇತ್ತೀಚೆಗೆ ನೆಕ್ಕರೆ -ಕರಿಯಾಳ ಪ್ರದೇಶದಲ್ಲಿ ಸಾರ್ವಜನಿಕರ ಆಶಯದಂತೆ ಸಹಿ ಸಂಗ್ರಹ ಅಭಿಯಾನವನ್ನೂ ನಡೆಸಲಾಗಿದೆ. ಸಾರ್ವಜನಿಕರು ನಗರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿ ತ್ಯಾಜ್ಯ ವಿಲೇವಾರಿಗಾಗಿ ಒತ್ತಡ ತಂದರೂ ಯಾವುದೇ ಸ್ಪಂದನ ದೊರೆತಿಲ್ಲ. ನಗರಸಭೆಯ ಈ ನಿರ್ಲಕ್ಷ್ಯದ ಕಾರ್ಯವೈಖರಿಯಿಂದ ಜನರು ತೋಡಿಗೆ ತ್ಯಾಜ್ಯ ಹಾಕುವುದು ಅನಿವಾರ್ಯವಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಸಮಿತಿ ತಿಳಿಸಿದೆ.

ಸಮಸ್ಯೆಯ ಕುರಿತು ಸಹಾಯಕ ಆಯುಕ್ತರಿಗೆ, ನಗರಸಭೆ ಪೌರಾ ಯುಕ್ತರಿಗೆ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಗಿದೆ. ತ್ಯಾಜ್ಯ ತೋಡಿಗೆ ಬೀಳುತ್ತಿರುವುದರಿಂದ ನದಿ ನೀರು ಮಲಿನಗೊಳ್ಳಲಿದೆ. ಈ ಕಾರಣದಿಂದ ಸಾಂಕ್ರಾಮಿಕ ರೋಗದ ಭೀತಿಯೂ ಇದೆ. ಜನರಿಂದ ಕಸ ಸಂಗ್ರಹಕ್ಕಾಗಿ ತೆರಿಗೆ ಸಂಗ್ರಹಿಸಿ ವಿಲೇವಾರಿ ಮಾಡದೇ ಇರುವುದು ಕರ್ತವ್ಯ ಲೋಪವಾಗಿದ್ದು, ಕೂಡಲೇ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳ ಬೇಕು ಎಂದು ವಿನಂತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next