Advertisement

ಕ್ರಿಸ್‌ ಗೇಲ್‌ಗೆ ಭಾರೀ ಪರಿಹಾರ

12:22 PM Dec 04, 2018 | |

ಸಿಡ್ನಿ: ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ತಾರೆ ಕ್ರಿಸ್‌ ಗೇಲ್‌ ಆಸ್ಟ್ರೇಲಿಯ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ಗೆದ್ದಿರು ವುದಲ್ಲದೇ ಭರ್ಜರಿ 3 ಲಕ್ಷ ಆಸ್ಟ್ರೇಲಿಯನ್‌ ಡಾಲರ್‌ ಪರಿಹಾರವನ್ನೂ ಪಡೆದಿದ್ದಾರೆ!

Advertisement

ಆಸ್ಟ್ರೇಲಿಯದ ಫೇರ್‌ಫಾಕ್ಸ್‌ ಸಂಸ್ಥೆ ತನ್ನ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸಿ ಗೌರವಕ್ಕೆ ಧಕ್ಕೆ ತಂದಿದೆ ಎಂದು ಗೇಲ್‌ ಅರ್ಜಿ ಸಲ್ಲಿಸಿದ್ದರು. ಅದನ್ನು ನ್ಯೂ ಸೌತ್‌ವೇಲ್ಸ್‌ ಸರ್ವೋಚ್ಚ ನ್ಯಾಯಾಲಯ ಪರಿಗಣಿಸಿರುವುದು ಮಾತ್ರವಲ್ಲ, ಗೇಲ್‌ ಗೌರವಕ್ಕೆ ಹಾನಿಯಾಗಿರುವುದರಿಂದ ಅದನ್ನು ಸರಿಪಡಿಸುವಂತಹ ತೀರ್ಪನ್ನು ಘೋಷಿಸಿದೆ.

ಆಸ್ಟ್ರೇಲಿಯದಲ್ಲಿ ನಡೆದ 2015ರ ಏಕದಿನ ವಿಶ್ವಕಪ್‌ ವೇಳೆ ವಿಂಡೀಸ್‌ ತಂಡದ ಅಂಗಮರ್ಧಕಿಯೊಂದಿಗೆ ಕ್ರಿಸ್‌ ಗೇಲ್‌ ಅಶ್ಲೀಲವಾಗಿ ವರ್ತಿಸಿದ್ದರು ಎಂದು ಫೇರ್‌ಫಾಕ್ಸ್‌ ಒಡೆತನದ ಪತ್ರಿಕೆಗಳು ವರದಿ ಮಾಡಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next