Advertisement

Laptop ಕಳವು ಮಾಡಿ 2 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸಿಮ್ ಖರೀದಿಸಿ ಸಿಕ್ಕಿಬಿದ್ದ

04:14 PM Jun 14, 2024 | sudhir |

ಕೊಟ್ಟಿಗೆಹಾರ: ಕೊಟ್ಟಿಗೆಹಾರ ಇಲ್ಲಿನ ತರುವೆ ಗ್ರಾಮ ಪಂಚಾಯಿತಿ ಹಾಗೂ ಅಂಗನವಾಡಿಯಲ್ಲಿ 2022ರಲ್ಲಿ ಬೀಗ ಮುರಿದು ಲ್ಯಾಪ್ ಟಾಪ್ ಕಳ್ಳತನ ಮಾಡಿದ್ದ ಆರೋಪಿಯನ್ನು ಬಣಕಲ್ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಶರತ್ ಬಂಧಿತ ಆರೋಪಿಯಾಗಿದ್ದು ಮೂಲತಃ ಮಂಗಳೂರು ಮೂಲದ ನಲ್ಕೆ ಗ್ರಾಮದವನು ಎನ್ನಲಾಗಿದೆ.

ಎರಡು ವರ್ಷದ ಹಿಂದೆ ತರುವೆ ಗ್ರಾ.ಪಂ.ಬೀಗ ಮುರಿದು ಲ್ಯಾಪ್ ಟಾಪ್ ಕಳ್ಳತನ ಮಾಡಿ ಆರೋಪಿ ಪರಾರಿಯಾಗಿ ಪೊಲೀಸರಿಗೆ ಚಳ್ಳೇಹಣ್ಣು ತಿಳಿಸಿದ್ದ. ನಂತರ ಕಳಸದ ಹೆಮ್ಮಕ್ಕಿಯಲ್ಲಿ ತೋಟವೊಂದರಲ್ಲಿ ಕೆಲಸ ಮಾಡಿಕೊಂಡು ಇದ್ದ. ಯಾವುದೇ ಮೊಬೈಲ್ ಬಳಸುತ್ತಿರಲಿಲ್ಲ. ಈಚೆಗೆ ಒಂದು ಸಿಮ್ ಖರೀದಿ ಮಾಡಿದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.ಎನ್ನಲಾಗಿದೆ.

ಕಾರ್ಯಾಚರಣೆಯಲ್ಲಿ ಬಣಕಲ್ ಸಬ್ ಇನ್ ಸ್ಪೆಕ್ಟರ್ ಕೌಶಿಕ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಚ್.ಸಿ.ರಮೇಶ್ ಕುಮಾರ್,ಸಚಿನ್,ಮೆಹಬೂಬ್, ಮಾಲತೇಶ್, ಚಾಲಕ ಅಶೋಕ್ ಭಾಗವಹಿಸಿದ್ದರು.ಪೊಲೀಸರ ಸಾಧನೆಯನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: Telangana: ನೀರಿನಲ್ಲಿ ಮೃತದೇಹ ತೇಲುತ್ತಿದೆ ಎಂದು ದಡಕ್ಕೆ ಎಳೆದು ತಬ್ಬಿಬ್ಬಾದ ಪೊಲೀಸರು…

Advertisement
Advertisement

Udayavani is now on Telegram. Click here to join our channel and stay updated with the latest news.

Next