Advertisement

ARRESTED: ಪಿಜಿಯಲ್ಲಿ ಲ್ಯಾಪ್‌ಟಾಪ್‌ ಕಳವು; ಬಿ.ಟೆಕ್‌ ಪದವೀಧರೆ ಬಂಧನ

11:17 AM Mar 27, 2024 | Team Udayavani |

ಬೆಂಗಳೂರು: ವಿಮಾನದಲ್ಲಿ ನಗರಕ್ಕೆ ಬಂದು ಪಿಜಿಗಳಲ್ಲಿ ಲ್ಯಾಪ್‌ಟಾಪ್‌ ಕಳ್ಳತನ ಮಾಡುತ್ತಿದ್ದ ಬಿ.ಟೆಕ್‌ ಪದವೀಧರೆಯನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ರಾಜಸ್ತಾನ ಮೂಲದ ಜಸು ಅಗರವಾಲ್‌ (29) ಬಂಧಿತೆ. ಆರೋಪಿಯಿಂದ 10 ಲಕ್ಷ ರೂ. ಮೌಲ್ಯದ 24 ಲ್ಯಾಪ್‌ಟಾಪ್‌ಗ್ಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬಿ.ಟೆಕ್‌ ಪದವೀಧರೆಯಾಗಿರುವ ಅಗರ ವಾಲ್‌, ದೆಹಲಿಯ ನೊಯ್ಡಾದಲ್ಲಿನ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಕಡಿಮೆ ಸಂಬಳ ಹಿನ್ನೆಲೆ ಕೆಲಸ ತೊರೆದಿದ್ದ ಈಕೆ ಬೆಂಗಳೂರಿಗೆ ಬಂದು ವಿವಿಧ ಕಂಪನಿಗಳಲ್ಲಿ ಕೆಲಸಕ್ಕೆ ಶೋಧಿಸುತ್ತಿದ್ದಳು. ಎಲ್ಲಿಯೂ ಕೆಲಸ ಸಿಕ್ಕಿರಲಿಲ್ಲ.

ಸಾಫ್ಟ್‌ವೇರ್‌ ಕಂಪನಿಗಳಿರುವ ಬೆಳ್ಳಂದೂರು, ಸಿಲ್ಕ್ ಬೋರ್ಡ್‌, ಹೆಬ್ಟಾಳ, ವೈಟ್‌ಫೀಲ್ಡ್‌ ಹಾಗೂ ಮಹದೇವಪುರ ಸುತ್ತ-ಮುತ್ತಲಿನ ಪಿಜಿ ಹಾಗೂ ಹೊಟೇಲ್‌ಗ‌ಳಲ್ಲಿ ವಾಸ್ತವ್ಯ ಹೂಡುತ್ತಿದ್ದ ಆರೋಪಿ, ಸಾಫ್ಟ್ವೇರ್‌ ಕಂಪನಿ ನೌಕರರ ಲ್ಯಾಪ್‌ಟಾಪ್‌ ಕದ್ದು, ಮಾರತ್ತಹಳ್ಳಿ, ಯಲಹಂಕ ಹಾಗೂ ಆರ್‌.ಟಿ.ನಗರದ ಲ್ಯಾಪ್‌ಟಾಪ್‌ ಅಂಗಡಿಗಳಲ್ಲಿ 10 ಸಾವಿರ ರೂ. ವರೆಗೂ ಮಾರಾಟ ಮಾಡುತ್ತಿದ್ದಳು.

ವಿಮಾನದಲ್ಲಿ ನಗರಕ್ಕೆ ಬರುತ್ತಿದ್ದಳು: ಕಳೆದ 3 ವರ್ಷಗಳಿಂದ ಕಳ್ಳತನ ವೃತ್ತಿಯಲ್ಲಿ ತೊಡಗಿರುವ ಅಗರವಾಲ್, ಆರಂಭದಲ್ಲಿ ಬೆಂಗಳೂರಿಗೆ ರೈಲಿನಲ್ಲಿ ಬರುತ್ತಿದ್ದಳು. ಲ್ಯಾಪ್‌ಟಾಪ್‌ ಕಳ್ಳತನ ಪ್ರಮಾಣ ಹೆಚ್ಚಾದಂತೆ ವಿಮಾನದಲ್ಲಿ ಬಂದು ತಾತ್ಕಾಲಿಕವಾಗಿ ಪಿಜಿಯಲ್ಲಿ ಉಳಿದುಕೊಂಡು ಲ್ಯಾಪ್‌ಟಾಪ್‌ ಕದಿಯುತ್ತಿದ್ದಳು. ಇತ್ತೀಚೆಗೆ ಎಚ್‌ಎಎಲ್‌  ಪೊಲೀಸ್‌ ಠಾಣಾ ವ್ಯಾಪ್ತಿಯ ಪಿಜಿಯಲ್ಲಿ ಲ್ಯಾಪ್‌ಟಾಪ್‌, ಚಾರ್ಜರ್‌ ಮೌಸ್‌ ಸಮೇತ ಕಳ್ಳತನ ಮಾಡಿದ್ದಳು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಹುಣಸಮಾರನಹಳ್ಳಿ ಬಳಿ ಈಕೆಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next