Advertisement
ಒಬ್ಬ ನಿರ್ದೇಶಕನಾದವನು ಇವಿಷ್ಟನ್ನು ಜಾಣ್ಮೆಯಿಂದ ಜೋಡಿಸಿಕೊಡುವುದಷ್ಟೇ ಮುಖ್ಯವಾಗುತ್ತದೆ. ಈವಿಚಾರದಲ್ಲಿ “ಲಂಕೆ’ ಚಿತ್ರದ ನಿರ್ದೇಶಕರಪೂರ್ವತಯಾರಿ ತೆರೆಮೇಲೆ ಎದ್ದು ಕಾಣುತ್ತದೆ. ಹೌದು, ಈ ವಾರ ತೆರೆಕಂಡಿರುವಲೂಸ್ ಮಾದ “ಯೋಗಿ’ ಅಭಿನಯದ”ಲಂಕೆ’ ಚಿತ್ರ ಮಾಸ್ ಆಡಿಯನ್ಸ್‌ಗೆ ಖಂಡಿತಾ ಇಷ್ಟವಾಗುತ್ತದೆ.
Related Articles
Advertisement
ಚಿತ್ರದಲ್ಲಿ ನಾಯಕ ರಾಮ್‌ನದ್ದು ರಾಮಣ ತೇಜಸ್ಸು ಹಾಗೂ ರಾವಣನ ವರ್ಚಸ್ಸು.ಅನ್ಯಾಯವನ್ನು ಸಹಿಸುವ ವ್ಯಕ್ತಿತ್ವ ಅವನದ್ದಲ್ಲ.ಹೀಗಿರುವಾಗ ಮಂದಾರ ದೇವಿ ಎಂಬ ಖತರ್‌ನಾಕ್ ಲೇಡಿಯ ಎಂಟ್ರಿ. ಆಕೆ ನಡೆಸುತ್ತಿರುವವೇಶ್ಯಾವಾಟಿಕೆ ದಂಧೆಗೆ ಬಲಿಯಾಗುತ್ತಿರುವಅಮಾಯಕ ಹೆಣ್ಣು ಮಕ್ಕಳು… ಹೀಗೆ ಟ್ವಿಸ್ಟ್‌ಮೇಲೆ ಟ್ವಿಸ್ಟ್‌ನೊಂದಿಗೆ ಸಾಗುವಕಥೆಸಿನಿಮಾವನ್ನು ನೋಡಿಸಿಕೊಂಡು ಹೋಗುತ್ತದೆ.ಹೈವೋಲ್ಟೆàಜ್ ಫೈಟ್‌ಗಳ ಜೊತೆ ಚಿತ್ರದ ಹಾಡುಗಳು ಇಷ್ಟವಾಗುತ್ತವೆ. ಪ್ರತಿ ಹಾಡನ್ನು ಆಯಾಸನ್ನಿವೇಶಕ್ಕೆ ತಕ್ಕಂತೆ ಕಟ್ಟಿಕೊಡಲಾಗಿದೆ.
ಪಕ್ಕಾಕಮರ್ಷಿಯಲ್ ಮಾಸ್ ಸಿನಿಮಾವೊಂದನ್ನುಕಣ್ತುಂಬಿಕೊಳ್ಳಬೇಕೆಂದು ಬಯಸುವವರಿಗೆ”ಲಂಕೆ’ ಇಷ್ಟವಾಗುತ್ತದೆ. ಚಿತ್ರದಲ್ಲಿ ರಾಮ್ ಆಗಿಕಾಣಿಸಿಕೊಂಡ ಯೋಗಿ ತಮ್ಮ ಪಾತ್ರಕ್ಕೆ ನ್ಯಾಯಒದಗಿಸಿದ್ದಾರೆ. ಹಾಡು, ಫೈಟ್‌ನಲ್ಲಿ ಯೋಗಿ ಸ್ವಲ್ಪಹೆಚ್ಚೇ ಇಷ್ಟವಾಗುತ್ತಾರೆ. ಫ್ಲ್ಯಾಶ್‌ಬ್ಯಾಕ್‌ನಲ್ಲಿ ಬರುವಪಾತ್ರವೊಂದರಲ್ಲಿ ಸಂಚಾರಿ ವಿಜಯ್ ನಟಿಸಿದ್ದಾರೆ.ಉಳಿದಂತೆ “ಮಂದಾರ ದೇವಿ’ಯಾಗಿ ಕಾವ್ಯ,”ಪಾವನಿ’ಯಾಗಿ ಕೃಷಿ ಗಮನ ಸೆಳೆದರೆ,ಶೋಭರಾಜ್, ಡ್ಯಾನಿ ಕುಟ್ಟಪ್ಪ, ಸುಚೇಂದ್ರಪ್ರಸಾದ್, ವಾಣಿಶ್ರೀ, ಎಸ್ತಾರ್ ನರೋನ ಸೇರಿದಂತೆಇತರರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ರವಿ ರೈ