Advertisement

‘ಲಂಕೆ’ಯಿಂದ ಹಾಡುಬಂತು: ಚಿತ್ರತಂಡದ ಮೊಗದಲ್ಲಿ ನಗು ಮೂಡಿತು

08:05 AM Jul 23, 2021 | Team Udayavani |

ಬೆಂಗಳೂರು: “ಟಗರು’ ಚಿತ್ರದ ಟೈಟಲ್‌ ಟ್ರ್ಯಾಕ್‌ ಮೂಲಕ ಸ್ಯಾಂಡಲ್‌ವುಡ್‌ ಸಿನಿಪ್ರಿಯರ ಗಮನ ಸೆಳೆದಿದ್ದ ಗಾಯಕ ಆಂಥೋನಿ ದಾಸ್‌ ಈಗ “ಲಂಕೆ’ ಚಿತ್ರದ ಹಾಡಿಗೆ ಧ್ವನಿಯಾಗಿದ್ದಾರೆ. ಲೂಸ್‌ ಮಾದ ಯೋಗಿ ನಾಯಕನಾಗಿ ನಟಿಸಿರುವ “ಲಂಕೆ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಇತ್ತೀಚೆಗೆ ಚಿತ್ರತಂಡ “ಲಂಕೆ’ಯ ಮೊದಲ ಲಿರಿಕಲ್‌ ಸಾಂಗ್‌ನ “ಆನಂದ್‌ ಆಡಿಯೋ’ ಮೂಲಕ ಬಿಡುಗಡೆ ಮಾಡಿದೆ.

Advertisement

ಹಾಡಿಗೆ ಎಲ್ಲಾಕಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಮೂಲಕ ಚಿತ್ರತಂಡ ಮೊಗದಲ್ಲಿ ನಗು ಮೂಡಿದೆ. ಚಿತ್ರ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. “ಲಂಕೆ’ ಚಿತ್ರದಲ್ಲಿ “ನೋಡು ನೋಡು ಯೋಗಿ ಬಾಸು ಮಾಸು ಎಂಟ್ರಿಕೊಟ್ಟೇಬಿಟ್ಟ. ಧೂಳಿನಿಂದ ಎದ್ದು ಬಂದು ಅಂಬಾರಿ ಏರೇ ಬಿಟ್ಟ…’ ಎಂಬ ಹಾಡಿಗೆ ಆಂಥೋನಿ ದಾಸ್‌ ಧ್ವನಿಯಾಗಿದ್ದಾರೆ. ಕಾರ್ತಿಕ್‌ ಶರ್ಮ ಸಂಗೀತ ಸಂಯೋಜನೆಯ ಈ ಹಾಡಿಗೆ ನಿರ್ದೇಶಕ ರಾಮಪ್ರಸಾದ್‌ ಎಂ.ಡಿ ಸಾಹಿತ್ಯ ಬರೆದಿದ್ದಾರೆ.

ಇನ್ನು “ಲಂಕೆ’ ಚಿತ್ರದಲ್ಲಿ ಲೂಸ್‌ ಮಾದ ಯೋಗಿ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ಇತ್ತೀಚೆಗೆ ನಿಧನರಾದ ಸಂಚಾರಿ ವಿಜಯ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಶರತ್‌ ಲೋಹಿತಾಶ್ವ, ಶೋಭ್‌ ರಾಜ್‌, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್‌, ವಾಣಿಶ್ರೀ, ಗಾಯತ್ರಿ ಜಯರಾಂ, ಎಸ್ತಾರ್‌ ನರೋನ, ಪ್ರಶಾಂತ್‌ ಸಿದ್ದಿ, ಆದ್ಯ ನಾಯಕ್‌ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next