Advertisement

ಗುವಾಹಾಟಿಗೆ ಆಗಮಿಸಿದ ಲಂಕಾ ತಂಡ

12:22 AM Jan 03, 2020 | Team Udayavani |

ಗುವಾಹಾಟಿ: ಭಾರತದ ವಿರುದ್ಧ 3 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲು ಶ್ರೀಲಂಕಾ ಕ್ರಿಕೆಟ್‌ ತಂಡ ಗುರುವಾರ ಗುವಾಹಾಟಿಗೆ ಆಗಮಿಸಿದೆ. ರವಿವಾರ ಇಲ್ಲಿ ಮೊದಲ ಮುಖಾ ಮುಖೀ ನಡೆಯಲಿದೆ.

Advertisement

ಇತ್ತೀಚೆಗಷ್ಟೇ ಪೌರತ್ವ ಕಾಯ್ದೆ ವಿರೋಧ ಪ್ರತಿಭಟನೆಯಿಂದ ಹಿಂಸಾಗ್ರಸ್ತವಾಗಿದ್ದ ಅಸ್ಸಾಮ್‌ ರಾಜಧಾನಿ ಅಂತಾ ರಾಷ್ಟ್ರೀಯ ಕ್ರಿಕೆಟಿಗೆ ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯ ನಡುವೆಯೇ ಪಂದ್ಯದ ಸಿದ್ಧತೆ ನಡೆಯುತ್ತಿದೆ.

ಭಾರೀ ಭದ್ರತೆ ನಡುವೆ ಶ್ರೀಲಂಕಾ ತಂಡದ ಆಟಗಾರರು ನೇರವಾಗಿ ಹೊಟೇಲಿಗೆ ತಲುಪಿದರು. ಭಾರತ ತಂಡದ ಆಟಗಾರರು ಶುಕ್ರವಾರ ಆಗ ಮಿಸಲಿದ್ದಾರೆ. ಮೊದಲು ಲಂಕಾ, ಸಂಜೆ ಆತಿಥೇಯ ತಂಡದ ಆಟಗಾರರು ಅಭ್ಯಾಸ ನಡೆಸಲಿದ್ದಾರೆ ಎಂದು ಅಸ್ಸಾಮ್‌ ಕ್ರಿಕೆಟ್‌ ಅಸೋಸಿಯೇಶನ್‌ (ಎಸಿಎ) ತಿಳಿಸಿದೆ.

ಪರಿಸ್ಥಿತಿ ನಿಯಂತ್ರಣಕ್ಕೆ
ಪೌರತ್ವ ಕಾಯ್ದೆ ಗಲಭೆ ವೇಳೆ ಗುವಾ ಹಾಟಿಯಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಇದರಿಂದ ಇಲ್ಲಿ ನಡೆಯಬೇಕಿದ್ದ ರಣಜಿ ಮತ್ತು ಅಂಡರ್‌-19 ಪಂದ್ಯಗಳು ರದ್ದುಗೊಂಡಿದ್ದವು. ಆದರೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಪಂದ್ಯ ಕ್ಕೇನೂ ಅಡ್ಡಿಯಾಗದು ಎಂದು ಎಸಿಎ ಕಾರ್ಯದರ್ಶಿ ದೇವಜಿತ್‌ ಸೈಕಿಯ ಹೇಳಿದ್ದಾರೆ.

“ಗುವಾಹಾಟಿ ಈಗ ಮಾಮೂಲು ಸ್ಥಿತಿಗೆ ಮರಳಿದೆ. ಪಂದ್ಯಕ್ಕೆ ಬಿಗಿ ಬಂದೋಬಸ್ತು ಮಾಡಲಾಗಿದೆ. ರಾಜ್ಯ ಸರಕಾರ ಭದ್ರತಾ ವ್ಯವಸ್ಥೆ ಬಗ್ಗೆ ಹೆಚ್ಚಿನ ನಿಗಾ ವಹಿಸಿದೆ. ಜ. 10ರಿಂದ ಇಲ್ಲಿ ಖೇಲೊ ಇಂಡಿಯಾ ಗೇಮ್ಸ್‌ ಕೂಡ ಆರಂಭವಾಗಲಿದೆ. ಇದರಲ್ಲಿ 7 ಸಾವಿರ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ’ ಎಂದು ಸೈಕಿಯ ಹೇಳಿದರು.

Advertisement

ಗುವಾಹಾಟಿಯ “ಬಾರಾಸಪ್ರಾ ಸ್ಟೇಡಿಯಂ’ 39,500 ವೀಕ್ಷಕರ ಸಾಮರ್ಥ್ಯ ಹೊಂದಿದೆ. 27 ಸಾವಿರ ಟಿಕೆಟ್‌ಗಳು ಮಾರಾಟಗೊಂಡಿವೆ. ಜನರೆಲ್ಲ ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಸಡಗರದಲ್ಲಿ ಮುಳುಗಿದ್ದು, ಕೊನೆಯ ಕ್ಷಣದಲ್ಲಿ ಟಿಕೆಟ್‌ ಮಾರಾಟ ಬಿರುಸುಗೊಳ್ಳಬಹುದು ಎಂಬ ನಿರೀಕ್ಷೆ ಎಸಿಎಯದ್ದು.

Advertisement

Udayavani is now on Telegram. Click here to join our channel and stay updated with the latest news.

Next