Advertisement

ಲಂಕೆಯ ವಾಯವ್ಯ ಪ್ರಾಂತ್ಯದಲ್ಲಿ ಕೋಮು ಹಿಂಸೆ; 4 ಪಟ್ಟಣಗಳಲ್ಲಿ ಮತ್ತೆ ಕರ್ಫ್ಯೂ

09:59 AM May 14, 2019 | Sathish malya |

ಕೊಲಂಬೋ : ಲಂಕೆಯ ವಾಯವ್ಯ ಪ್ರಾಂತ್ಯದ ನಾಲ್ಕು ಪಟ್ಟಣಗಳಾದ ಕುಳಿಯಪಿಟಿಯ, ಬಿಂಗಿರಿಯ, ಹೆತ್ತಿಪೋಲಾ ಮತ್ತು ದುಮ್ಮಲಸುರಿಯಾ ಗಳಲ್ಲಿ ಕೋಮು ಹಿಂಸೆ ಸ್ಫೋಟಗೊಂಡ ಕಾರಣ ಅಲ್ಲಿ ಮತ್ತೆ ಕರ್ಫ್ಯೂ ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ದೇಶದಲ್ಲಿನ ಅಲ್ಪಸಂಖ್ಯಾಕ ಮುಸ್ಲಿಮರು ಮತ್ತು ಬಹುಸಂಖ್ಯಾಕ ಸಿಂಹಳೀ ಪ್ರಜೆಗಳ ನಡುವೆ ಕೋಮು ಗಲಭೆ ಸ್ಫೋಟಿಸಿದ ಕಾರಣ ಇಂದು ಬೆಳಗ್ಗೆ ಲಂಕಾ ಸರಕಾರ ಸಾಮಾಜಿಕ ಮಾಧ್ಯಮಗಳ ಮೇಲೆ ಮತ್ತು ನಿಷೇಧ ಹೇರಿತ್ತು.

ದೇಶದ ಪಶ್ಚಿಮ ಕರಾವಳಿಯ ಚಿಲಾವ್‌ ಪಟ್ಟಣದಲ್ಲಿ ಮಸೀದಿ ಮತ್ತು ಮುಸ್ಲಿಮರ ಕೆಲವು ಅಂಗಡಿಗಳ ಮೇಲೆ ಗುಂಪು ದಾಳಿ ನಡೆದ ಕಾರಣ ಪೊಲೀಸರು ಇಲ್ಲಿ ಕರ್ಫ್ಯೂ ಹೇರಿದ್ದರು.

ಕಳೆದ ಎ.21ರಂದು 9 ಮಂದಿ ಇಸ್ಲಾಮಿಕ್‌ ಆತ್ಮಾಹುತಿ ದಾಳಿಕೋರರು ಕೊಲಂಬೋದಲ್ಲಿನ ಮೂರು ಚರ್ಚುಗಳು ಮತ್ತು ಮೂರು ವಿಲಾಸಿ ಹೊಟೇಲುಗಳ ಮೇಲೆ ದಾಳಿ ನಡೆಸಿ 253 ಜನರನ್ನು ಬಲಿಪಡೆದು ಇತರ 500 ಮಂದಿಯನ್ನು ಗಾಯಗೊಳಿಸಿದುದನ್ನು ಅನುಸರಿಸಿ ಲಂಕೆಯ ವಿವಿಧೆಡೆಗಳಲ್ಲಿ ಕೋಮು ಗಲಭೆಗಳು ಭುಗಿಲೇಳುತ್ತಿವೆ ಎಂದು ವರದಿಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next