ಕೊಲಂಬೋ : ಕಳೆದ ಎಪ್ರಿಲ್ 21ರಂದು ಇಲ್ಲಿ ನಡೆದಿದ್ದ ಈಸ್ಟರ್ ಭಾನುವಾರದ ಆತ್ಮಾಹುತಿ ಬಾಂಬಿಂಗ್ ನಲ್ಲಿ ಶಾಮೀಲಾಗಿದ್ದ ಎಲ್ಲ ಇಸ್ಲಾಮಿಕ್ ಉಗ್ರರನ್ನು ಕೊಲ್ಲಲಾಗಿದೆ ಇಲ್ಲವೇ ಬಂಧಿಸಲಾಗಿದೆ; ಅಂತೆಯೇ ಶ್ರೀಲಂಕಾ ಈಗ ಸುರಕ್ಷಿತವಾಗಿದೆ ಮತ್ತು ಅದು ಮಾಮೂಲಿ ಸ್ಥಿತಿಗೆ ಮರಳಬಹುದಾಗಿದೆ ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.
ಲಂಕೆಯ ಮೂರೂ ಪಡೆಗಳ ಕಮಾಂಡರ್‌ಗಳು ಮತ್ತು ಪೊಲೀಸ್ ಮುಖ್ಯಸ್ಥರು ನಿನ್ನೆ ಸೋಮವಾರ ರಾತ್ರಿ ಇಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಈಸ್ಟರ್ ಬಾಂಬಿಂಗ್ ನಲ್ಲಿ ಶಾಮೀಲಾಗಿದ್ದ ಎಲ್ಲ ಇಸ್ಲಾಮಿಕ್ ಉಗ್ರರನ್ನು ಕೊಲ್ಲಲಾಗಿದೆ ಇಲ್ಲವೇ ಬಂಧಿಸಲಾಗಿದ್ದು ಇನ್ನು ಪುನಃ ಆ ರೀತಿಯ ಘೋರ ದಾಳಿಗಳು ನಡೆಯದಂತೆ ಸರ್ವ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪ್ರಭಾರ ಐಜಿಪಿ ಚಂದನ ವಿಕ್ರಮಸಿಂಘ ಅವರು ಗೋಷ್ಠಿಯಲ್ಲಿ ಮಾತನಾಡುತ್ತಾ ಕೊಲಂಬೋದ ಮೂರು ಚರ್ಚುಗಳಲ್ಲಿ ಮತ್ತು ಮೂರು ಲಕ್ಷುರಿ ಹೊಟೇಲ್‌ಗಳ ಮೇಲೆ ದಾಳಿ ನಡೆಸಿದ್ದ ಎಲ್ಲ ಉಗ್ರರನ್ನು ಕೊಲ್ಲಲಾಗಿದೆ ಎಂದು ಹೇಳಿದರು.