Advertisement
ಕರ್ನಾಟಕ, ಕೇರಳ, ಗೋವಾ ರಾಜ್ಯಗಳ ಸಮುದ್ರ ತೀರ ಪ್ರದೇಶದಲ್ಲಿ ಕರಾವಳಿ ಕಾವಲು ಪೊಲೀಸ್ ಪಡೆಯ (ಸಿಎಸ್‌ಪಿ) ಅಧಿಕಾರಿ ಮತ್ತು ಸಿಬಂದಿ ಕಟ್ಟೆಚ್ಚರ ವಹಿಸಿ ಕಣ್ಗಾವಲು ಇರಿಸಿದ್ದಾರೆ.
ಕರಾವಳಿ ಕಾವಲು ಪಡೆಯ ಪೊಲೀಸರ ಕಾರ್ಯ ವ್ಯಾಪ್ತಿ ಸಮುದ್ರ ದಲ್ಲಿ 12 ನಾಟಿಕಲ್ ಮೈಲು ತನಕ ಇದ್ದು, ಈ ವ್ಯಾಪ್ತಿಯಲ್ಲಿ ಸಂಚರಿಸುವ ಶಂಕಿತ ಮೀನುಗಾರಿಕಾ ಬೋಟುಗಳ ತಪಾಸಣೆಯನ್ನೂ ಕೈಗೊಂಡಿದ್ದಾರೆ. ಜತೆಗೆ ಕರಾವಳಿ ತಟ ರಕ್ಷಣಾ ಪಡೆ, ನೌಕಾ ಪಡೆ, ವಾಯುಪಡೆ ಹಾಗೂ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳ ಜತೆ ಮಾಹಿತಿಗಳನ್ನು ವಿನಿಮಯ ಮಾಡಿ ಕೊಂಡು ಕರಾವಳಿ ಕಾವಲು ಪೊಲೀಸ್ ಪಡೆಯ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
Related Articles
Advertisement
ಕೆಎಸ್ಸಾರ್ಟಿಸಿಯಲ್ಲಿ ಮುನ್ನೆಚ್ಚರಿಕೆಭಯೋತ್ಪಾದಕ ದಾಳಿ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆಎಸ್ಸಾರ್ಟಿಸಿಯ ಎಲ್ಲ ನಿಲ್ದಾಣಗಳಲ್ಲಿ ಹೆಚ್ಚಿನ ತಪಾಸಣೆ ಮತ್ತು ಮುನ್ನೆಚ್ಚರಿಕೆ ವಹಿಸಲಾಗಿದೆ.