Advertisement

ಜ್ಞಾನಾರ್ಜನೆಗೆ ಭಾಷಾಮೇಳ ಪೂರಕ

11:40 AM Mar 17, 2019 | |

ಹೂವಿನಹಿಪ್ಪರಗಿ: ತ್ರಿಭಾಷಾ ವಿಷಯದ ಕಲಿಕೋಪಕರಣಗಳು ಪ್ರದರ್ಶನವಾಗುವುದರಿಂದ ಮಕ್ಕಳಲ್ಲಿ ಭಾಷಾ ವಿಷಯದ ಮೇಲೆ ಗೌರವ , ಅಭಿಮಾನ ಮೂಡುತ್ತದೆ ಹಾಗೂ ಮಕ್ಕಳ ಕಲಿಕೆಗೆ ಅದು ಪೂರಕವಾಗುತ್ತದೆ ಎಂದು ಬಸವನಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಗುಳೇದಗುಡ್ಡ ಹೇಳಿದರು.

Advertisement

ಸ್ಥಳೀಯ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್‌ಂ ಫೌಂಡೇಶನ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹೂವಿನಹಿಪ್ಪರಗಿ ವಲಯದ 2018-19ನೇ ಸಾಲಿನ ಭಾಷಾಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಮಕ್ಕಳು ವಿಷಯದ ಒಲವು ಮೂಡಿಸಿಕೂಂಡು ಮಕ್ಕಳಲ್ಲಿ ಭಾಷಾ ಪ್ರೌಢಿಮೆ ಬೆಳೆಯಲು ಇಂಬು ನೀಡುತ್ತದೆ. ವಿದ್ಯಾರ್ಥಿಗಳಲ್ಲಿನ ಬೌದ್ಧಿಕ ಸಾಮರ್ಥ್ಯ ಅಭಿವ್ಯಕ್ತಿಗೊಳಿಸಲು ಅಕ್ಷರ ಕಲಿಕೆಯ ಭಾಷಾಮೇಳ ಪೂರಕವಾಗಿದ್ದು ಇದರಿಂದ ಪ್ರತಿಯೊಂದು ಮಗುವು ಉತ್ತಮ ಶೈಕ್ಷಣಿಕ ಸಾಧನೆ ಮಾಡಲು ಅನುಕೂಲವಾಗುತ್ತದೆ. 

ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆ ಹೊರಹೊಮ್ಮುವುದು ಸೇರಿದಂತೆ ಅವರಲ್ಲಿ ಕಲಿಕೆಯ ಹೊಸ ಬೆಳಕು ಮೂಡಲು ಇಂಥ ಕ್ರಿಯಾತ್ಮಕ ಚಟುವಟಿಕೆಗಳು ಅವಶ್ಯ ಎಂದರು.
 
ಈ ಕಾರ್ಯಕ್ರಮವು ಆಗಸ್ಟ್‌ ಅಥವಾ ಸೆಪ್ಟೆಂಬರ್‌ ತಿಂಗಳಲ್ಲಿ ಮಾಡಿದರೆ ಇನ್ನೂ ಚೆನ್ನಾಗಿ ಇರುತ್ತಿತ್ತು. ಆದರೆ ಈಗ ಪರೀಕ್ಷಾ ಸಮಯ ಆಗಿರುವುದರಿಂದ ಎಲ್ಲರೂ ಪಾಲ್ಗೊಳ್ಳುವುದು ಕಷ್ಟವಾಗುತ್ತದೆ ಎಂದು ಹೇಳಿದರು. 

ಹೂವಿನಹಿಪ್ಪರಗಿ ಸಮೂಹ ಸಂಪನ್ಮೂಲ ವ್ಯಕ್ತಿ ಎಂ.ಆರ್‌. ರಾಜನಾಳ ಮಾತನಾಡಿ, ಮಕ್ಕಳ ಭಾಷಾ ಮೇಳ ಕಾರ್ಯಕ್ರಮ ಮಕ್ಕಳ ಕಲಿಕೆಗೆ ಪ್ರೇರಕವಾಗಲಿ. ಪ್ರತಿಯೊಂದು ಮಗು ತನ್ನದೇಯಾದಂತಹ ಆಗಾಧ ಪ್ರತಿಭೆ ಹೊಂದಿರುತ್ತದೆ. ಆ ಪ್ರತಿಭೆ ಹೊರಗೆ ತರಲು ಇಂತಹ ಮೇಳಗಳು ಸೂಕ್ತ ವೇದಿಯಾಗುತ್ತವೆ ಎಂದರು.
 
ಬಸವನಬಾಗೇವಾಡಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಂ. ಹಳ್ಳೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೈಹಿಕ ಶಿಕ್ಷಣಾಧಿಕಾರಿ ಎಂ.ಬಿ. ಹೆಬ್ಟಾಳ, ಸಂಘಟನಾ ಕಾರ್ಯದರ್ಶಿ ಬಿ.ವಿ. ಚಕ್ರಮನಿ, ಎಂ.ಜಿ. ಅಗ್ನಿ, ಸುರೇಶ ಸಜ್ಜನ, ಎ.ಎಚ್‌. ನಾಡಗೌಡ, ಜಿ.ಜಿ. ಅಸ್ಕಿ, ಪಿ.ವೈ. ರತ್ನಾಕರ, ಆರ್‌.ಜಿ. ಬಿಂಜಲಬಾವಿ ಸೇರಿದಂತೆ ವಿವಿಧ ಶಾಲೆ ಮುಖ್ಯ ಗುರುಗಳು, ಶಿಕ್ಷಕರು, ಶಾಲಾ ಮಕ್ಕಳು ಇದ್ದರು. ಮುಖ್ಯಗುರುಮಾತೆ ಎಂ.ಬಿ. ಚಟ್ಟರಕಿ ಸ್ವಾಗತಿಸಿದರು. ಪಿ.ಎಸ್‌. ಗುಂಡಾನವರ ನಿರೂಪಿಸಿದರು. ಬಿ.ಎಲ್‌. ಪವಾರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next