Advertisement

ಪತ್ರಕರ್ತರಿಗೆ ಶಿಕ್ಷೆ ವಿಚಾರ: ಸ್ಪೀಕರ್‌ಗೆ ಶಾಸಕ ಕಿಮ್ಮನೆ ಪತ್ರ

01:23 PM Jul 04, 2017 | |

ತೀರ್ಥಹಳ್ಳಿ: ಇಬ್ಬರು ಪತ್ರಕರ್ತರಿಗೆ ಶಿಕ್ಷೆ ವಿಚಾರವಾಗಿ ಆತುರದ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಮುಂದಿನ 
ಶಾಸನಸಭೆಯಲ್ಲಿ ಚರ್ಚೆ ನಡೆಸಿ ಕ್ರಮಕೈಗೊಳ್ಳುವಂತೆ ಸರ್ಕಾರದ ಕಾರ್ಯದರ್ಶಿ ಹಾಗೂ ಸ್ಪೀಕರ್‌ಗೆ ಪತ್ರ ಬರೆದು
ತಿಳಿಸಿದ್ದೇನೆ ಎಂದು ಮಾಜಿ ಸಚಿವ, ಶಾಸಕ ಕಿಮ್ಮನೆ ರತ್ನಾಕರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Advertisement

ಕೋಳಿವಾಡ ಅವರು ಸ್ಪೀಕರ್‌ ಆದ ನಂತರ ಹಕ್ಕುಬಾಧ್ಯತಾ ಸಮಿತಿ ಅಧ್ಯಕ್ಷನಾಗಿ ನಾನು ಕಾರ್ಯ ನಿರ್ವಹಿಸುತ್ತಿದ್ದೇನೆ. ರವಿ ಬೆಳಗೆರೆ ಅವರಿಗೆ ವಿಧಿಸಿದ ಶಿಕ್ಷೆ ವಿಚಾರದಲ್ಲಿ ನನ್ನ ಪಾತ್ರವಿಲ್ಲ. ಹಿಂದೆ ಕೋಳಿವಾಡ ಅವರು ಸಮಿತಿ
ಅಧ್ಯಕ್ಷರಾಗಿದ್ದಾಗ ಈ ಕ್ರಮ ಕೈಗೊಂಡಿದ್ದರು. ನಂತರ ಮತ್ತೋರ್ವ ಪತ್ರಕರ್ತ ಅನಿಲ್‌ರಾಜ್‌ ವಿಚಾರದಲ್ಲೂ ಒಮ್ಮತದ ನಿರ್ಧಾರ ಕೈಗೊಂಡಿದ್ದೇವೆ ಎಂದರು. ಮುಂದಿನ ಚುನಾವಣೆಯಲ್ಲಿ ರೈತರ ಸಾಲಮನ್ನಾದಿಂದ ಪಕ್ಷಕ್ಕೆ ಹಾಗೂ ರೈತರಿಗೆ
ಲಾಭ ಸಿಗಲಿದೆ. ರೈತರು ಕಾಂಗ್ರೆಸ್‌ ಪರವಾಗಿ ನಿಲ್ಲಬೇಕು. ಕಸ್ತೂರಿ ರಂಗನ್‌ ವರದಿ ವಿಚಾರದಲ್ಲಿ ವಿರೋಧ ಪಕ್ಷಗಳು ಅಪಪ್ರಚಾರ ಮಡುತ್ತಿವೆ. ರಾಜ್ಯ ಸರ್ಕಾರ ಆರಂಭದಿಂದಲೂ ವರದಿಗೆ ಬೆಂಬಲ ನೀಡಿಲ್ಲ ಎಂದು ತಿಳಿಸಿದರು.

ಶಿವಮೊಗ್ಗದ ಕೆಲವು ಪೇಮೆಂಟ್‌ ಹೋರಾಟಗಾರರು ನನ್ನ ಶಾಸಕತ್ವದ ಚಟುವಟಿಕೆಗಳ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಇಂತವರಿಂದ ಪಾಠ ಕಲಿಯುವ ಅಗತ್ಯ ನನಗಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಆರಗ ಜ್ಞಾನೇಂದ್ರ
ಅವರಿಗೆ ಟಿಕೆಟ್‌ ಸಿಗುವುದು ತಾಪತ್ರಯವಾಗಿದೆ. ಬೇಗುವಳ್ಳಿ ಸತೀಶ್‌ ಸ್ಪರ್ಧಿಸುವುದು ಬಹುತೇಕ ಖಚಿತ ಎಂದರು. ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಗೆ 2961 ಲಕ್ಷ ರೂ. ಮಂಜೂರಾಗಿದೆ.
2013-14ನೇ ಸಾಲಿನಿಂದ ಈ ತನಕ ಪಶುವೈದ್ಯಕೀಯ ಆಸ್ಪತ್ರೆಗಳಿಗೆ 273.79 ಲಕ್ಷ ರೂ. ಬಿಡುಗಡೆಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next