Advertisement

“ಪ್ರತಿಭಾ ವಿಕಸನಕ್ಕೆ ಭಾಷಾ ಮಾಧ್ಯಮಗಳು ಮಾನದಂಡವಲ್ಲ’

12:40 AM Oct 01, 2019 | Sriram |

ಶಿರ್ವ: ಆಂಗ್ಲ ಮಾಧ್ಯಮದಲ್ಲಿ ಕಲಿತ ಮಕ್ಕಳೇ ಪ್ರತಿಭಾವಂತರು ಎಂಬ ಭ್ರಮೆ ಹೆತ್ತವರಲ್ಲಿದ್ದು, ಮಗುವಿನ ಪ್ರತಿಭಾ ವಿಕಸನಕ್ಕೆ ಭಾಷಾ ಮಾಧ್ಯಮಗಳು ಮಾನದಂಡವಲ್ಲ.

Advertisement

ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳು ಹೆಚ್ಚು ಸಂಸ್ಕಾರವಂತರಾಗಿ ಬೆಳೆಯುತ್ತಿದ್ದು, ಮಾಧ್ಯಮದ ಬಗ್ಗೆ ಕೀಳರಿಮೆ ಬೇಡ. ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಬಾಲೆ ತನುಶ್ರೀ ಪಿತ್ರೋಡಿ ತನ್ನ ಯೋಗ ನೃತ್ಯ ಸಾಧನೆಗಳಿಂದ ಗಿನ್ನೆಸ್‌ ವರ್ಲ್ಡ್ ರೆಕಾರ್ಡ್‌ ಮಾಡುವ ಮೂಲಕ ವಿಶ್ವದ ಗಮನವನ್ನು ಸೆಳೆದಿರುವುದು ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದು ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹೇಳಿದರು.

ಅವರು ರವಿವಾರ ಬಂಟಕಲ್ಲು ಶ್ರೀದುರ್ಗಾ ಪರಮೆಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಸಾಂಸ್ಕೃತಿ ಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಬಾಲಪ್ರತಿಭೆ ಯೋಗ, ನೃತ್ಯ ಸಾಧಕಿ, ನಾಲ್ಕು ವಿಶ್ವದಾಖಲೆಗಳನ್ನು ಮುಡಿಗೇರಿಸಿಕೊಂಡ ತನುಶ್ರೀ ಪಿತ್ರೋಡಿಗೆ ಶರನ್ನವ ರಾತ್ರಿ ಗೌರವ ಪ್ರದಾನ ಮಾಡಿ ಮಾತನಾಡಿದರು. ಈ ಸಂದರ್ಭ ಅವಳ ಸಾಧನೆಗೆ ಪ್ರೋತ್ಸಾಹ ನೀಡುತ್ತಿರುವ ತನುಶ್ರೀಯ ಹೆತ್ತವರಾದ ಸಂಧ್ಯಾ, ಉದಯಕುಮಾರ್‌ ದಂಪತಿಯನ್ನು ಅಭಿನಂದಿಸಿದರು.

ದೇವಸ್ಥಾನದ ಹಿರಿಯ ವೈದಿಕರಾದ ವೇ| ಮೂ| ಕೆ. ವೇದವ್ಯಾಸರಾಯ ಭಟ್‌ ದೀಪ ಬೆಳಗಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಗುರ್ನೆಬೆಟ್ಟು ಗಣಪತಿ ನಾಯಕ್‌, ಅಧ್ಯಕ್ಷ ಗಂಪದಬೈಲು ಜಯರಾಮ ಪ್ರಭು, ಉಪಾಧ್ಯಕ್ಷ ಉಮೇಶ ಪ್ರಭು ಪಾಲಮೆ, ರಾಜಾಪುರ ಸಾರಸ್ವತ ಯುವವೃಂದದ ಅಧ್ಯಕ್ಷ ವೀರೇಂದ್ರ ಪಾಟ್ಕರ್‌, ಶ್ರೀದುರ್ಗಾ ಮಹಿಳಾ ವೃಂದದ ಅಧ್ಯಕ್ಷೆ ಅರುಂದತಿ ಜಿ. ಪ್ರಭು, ಉಷಾ ಪಿ. ಮರಾಠೆ, ಶಿರ್ವ ರೋಟರಿ ಪೂರ್ವಾಧ್ಯಕ್ಷ ರಘುಪತಿ ಐತಾಳ್‌ ಉಪಸ್ಥಿತರಿದ್ದರು.

Advertisement

ಕಾರ್ಯಕ್ರಮದ ಪ್ರಾಯೋಜಕ ಬಿ.ಪುಂಡಲೀಕ ಮರಾಠೆ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಯುವ ವೃಂದದ ಗೌರವ ಅಧ್ಯಕ್ಷ ಕೆ.ಆರ್‌. ಪಾಟ್ಕರ್‌ ನಿರೂಪಿಸಿ, ಶ್ರೀರಾಮ್‌ ಪಿ. ಮರಾಠೆ, ವಿಶ್ವನಾಥ್‌ ಬಾಂದೋಡ್ಕರ್‌, ಮನೋಹರ್‌ ಮರಾಠೆ ಸಹಕರಿಸಿದರು.

ಬಳಿಕ ಶ್ರೀಶಾರದಾ ದೇವಿಅಂಧರ ವಿಕಾಸ ಕೇಂದ್ರ, ಪರಮಹಂಸ ನಗರ ಶಿವಮೊಗ್ಗ ಇಲ್ಲಿನ ಅಂಧ ವಿದ್ಯಾರ್ಥಿಗಳಿಂದ ಯಕ್ಷಗಾನ “ಗಿರಿಜಾ ಕಲ್ಯಾಣ’ ಪ್ರದರ್ಶನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next