Advertisement
ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ಆಳ್ವಾಸ್ ಕಾಲೇಜಿನ ರತ್ನಾಕರವರ್ಣಿ ವೇದಿಕೆಯಲ್ಲಿ ಗುರುವಾರ ನಡೆದ ಆಳ್ವಾಸ್ ವಿದ್ಯಾರ್ಥಿ ಸಿರಿ – 2017 ವಿದ್ಯಾರ್ಥಿ ಸಾಹಿತ್ಯ- ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕನ್ನಡದಲ್ಲಿಯೇ ಮಗುವಿಗೆ ಪ್ರಾಥ ಮಿಕ ಶಿಕ್ಷಣ ದೊರಕಬೇಕು. ಮಾತೃ ಭಾಷೆಯಲ್ಲಿಯೇ ಶಿಕ್ಷಣ ನೀಡಿದರೆ ಅದು ತನಗೆ ಬೇಕಾ ದ್ದನ್ನು ಹೆಕ್ಕಿಕೊಳ್ಳುತ್ತದೆ. ಭಾಷೆ ಕಲಿಸುವುದಕ್ಕೂ ಭಾಷೆ ಮೂಲಕ ಕಲಿಸುವುದಕ್ಕೂ ನಡುವಿನ ಸೂಕ್ಷ್ಮ ಗೆರೆಯ ಸ್ಪಷ್ಟತೆಯನ್ನು ನಾವು ಕಂಡುಕೊಳ್ಳಬೇಕು ಎಂದರು.
ಉಡುಪಿ ನಿಟ್ಟೂರು ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಮುರಳಿ ಕಡೆಕಾರ್ ಮಾತನಾಡಿ, ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣ ಎಂಬುವುದನ್ನೇ ನಿವಾರಿಸಬೇಕು. ಶೇ. 100 ಫಲಿತಾಂಶದ ಹುಚ್ಚು ಬಿಟ್ಟು, ಪ್ರೌಢ ಶಾಲಾ ಹಂತದ ಶಿಕ್ಷಣದಲ್ಲಿ ವೃತ್ತಿ ಮಾರ್ಗದರ್ಶನ ನೀಡುವ ಕೆಲಸವಾಗಬೇಕು ಎಂದರು. ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿ ಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮಾತ ನಾಡಿ, ಮಕ್ಕಳು ಸಮಾಜದಲ್ಲಿ ವಿಷ ಬಿತ್ತುವ ಕೆಲಸ ಮಾಡದೆ, ಪ್ರೀತಿ ಯಿಂದ ಸಮಾಜವನ್ನು ಕಟ್ಟಬೇಕಿದೆ. ವಿದ್ಯಾರ್ಥಿ ಗಳು ಜೀವನದಲ್ಲಿ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
Related Articles
Advertisement
ಉದ್ಘಾಟನೆವಿದ್ಯಾಗಿರಿಯ ರತ್ನಾಕರ ವರ್ಣಿ ವೇದಿಕೆ ಯಲ್ಲಿ ಗುರುವಾರ ನಡೆದ “ಆಳ್ವಾಸ್ ವಿದ್ಯಾರ್ಥಿ ಸಿರಿ-2017′ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವನ್ನು ಹಿರಿಯ ಕಲಾವಿದ ಮಂಡ್ಯ ರಮೇಶ್‌ಉದ್ಘಾಟಿಸಿದರು. “ನಮಗಿಂದು ಬೇಕಾಗಿರುವುದು ನಮ್ಮೊಳ ಗಿರುವ ಮನುಷ್ಯನನ್ನು ಹುಡುಕಿ, ಶೋಧಿಸಿ ತೋರುವ ಶಿಕ್ಷಣ; ಸಾಂಸ್ಕೃತಿಕ ಒಳನೋಟ ಹೊಂದಿಸಿಕೊಂಡ ಶಿಕ್ಷಣ’ ಎಂದರು. “ಮೊಗದಲ್ಲಿ ನಗು, ಕಣ್ಣಂಚಿನಲ್ಲಿ ಪ್ರೀತಿ, ಹಿರಿಯರನ್ನು ಗೌರವಿಸುವ ಗುಣ ಇವೆಲ್ಲ ವನ್ನೂ ರೂಢಿಸಿಕೊಡುವ ಸಾಂಸ್ಕೃತಿಕ ಒಳ ನೋಟ ಗಳ ಶಿಕ್ಷಣ ಆಳ್ವಾಸ್‌ನಲ್ಲಿದೆ. ಅದು ಲೋಕಕ್ಕೆ ಮಾದರಿಯಾಗಿದೆ’ ಎಂದು ಘೋಷಿಸಿ ದಾಗ ಸಂಭಾಂಗಣ ಕರತಾಡನ ದಿಂದ ತುಂಬಿತು. ವಿವಿಧ ಶಾಲೆಗಳಿಂದ ಬಂದಿದ್ದ ವಿದ್ಯಾರ್ಥಿ ಗಳು ವೈಯಕ್ತಿಕ, ಸಾಮೂಹಿಕ ಪ್ರತಿಭಾ ಪ್ರದರ್ಶನವಿತ್ತರು. ಕಾಸರಗೋಡು ಚಿನ್ಮಯ ವಿದ್ಯಾಲಯದ ಸನ್ನಿಧಿ ಟಿ. ರೈ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಡಾ| ಎಂ. ಮೋಹನ ಆಳ್ವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪದಲ್ಲಿ ಉಡುಪಿ ವಳಕಾಡು ಪ್ರೌಢಶಾಲೆಯ ನಚಿಕೇತ ನಾಯಕ್ ಸಮಾ ರೋಪ ಭಾಷಣ ಮಾಡಿದರು. ಪುಟ್ಟಣ್ಣ ಕಣಗಾಲ್ ವೇದಿಕೆಯಲ್ಲಿ ಬೆಟ್ಟದ ಹೂವು, ಚಿನ್ನಾರಿಮುತ್ತ, ಎರಡು ನಕ್ಷತ್ರಗಳು, ಸಿಂಹದ ಮರಿ ಸೈನ್ಯ ಚಲನಚಿತ್ರ ಪ್ರದರ್ಶನ, ಏಣಗಿ ಬಾಳಪ್ಪ ವೇದಿಕೆಯಲ್ಲಿ ಧಾಂ ಧೂಂ ಸುಂಟರಗಾಳಿ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ತುಳುವರಿಂದ ಭಾಷಾಭಿಮಾನ ಕಲಿಯಬೇಕಿದೆ: ಅರ್ಜುನ್
ಕನ್ನಡಿಗರು ತುಳುವರಿಂದ ಭಾಷಾಭಿಮಾನ ಕಲಿಯಬೇಕಿದೆ. ತುಳುನಾಡಿನಲ್ಲಿ ಅನೇಕರ ಮಾತೃ ಭಾಷೆ ವಿಭಿನ್ನ. ಬೇರೆ ಧರ್ಮದ ಅನೇಕ ಮಂದಿ ಇಲ್ಲಿ ಇದ್ದಾರೆ. ಆದರೂ ಅವ ರೆಲ್ಲರನ್ನು ಒಂದುಗೂಡಿಸುವುದು ತುಳು. ಇಲ್ಲಿ ಯಾರ ಮೇಲೂ ತುಳು ಕಡ್ಡಾಯ ಎಂಬ ಹೇರಿಕೆ ಇಲ್ಲ. ತುಳು ನೈಸರ್ಗಿಕವಾಗಿ ಜನಮನದಲ್ಲಿ ಬಂದಿದೆ. ಕನ್ನಡವು ತುಳುವಿ ನಿಂದ ಅನೇಕ ಅಂಶಗಳನ್ನು ಕಲಿತು ಬೆಳೆಯಬಹುದು ಎಂದು ಅರ್ಜುನ್ ಹೇಳಿದರು. ಹರೀಶ್ ಭಟ್ ಪುತ್ರಿ ಶಿಕ್ಷಣಕ್ಕೆ ನೆರವು
ಆಳ್ವಾಸ್‌ನೊಂದಿಗೆ ನಿಕಟ ಸಂಪರ್ಕವಿದ್ದು, ಇತ್ತೀಚೆಗೆ ನಿಧನ ಹೊಂದಿದ ವಿಜ್ಞಾನಿ ಹರೀಶ್ ಭಟ್ ಅವರ ಪುತ್ರಿ ಹಂಸಾ ಭಟ್ ಅವರಿಗೆ ಸಂಸ್ಥೆಯ ವತಿಯಿಂದ 2 ಲಕ್ಷ ರೂ. ನೀಡಿ, ಆಕೆಯ ಮುಂದಿನ ವಿದ್ಯಾಭ್ಯಾಸವನ್ನು ಆಳ್ವಾಸ್ ಯೋಜಿಸುವುದಾಗಿ
ಡಾ| ಮೋಹನ ಆಳ್ವ ಪ್ರಕಟಿಸಿದರು. ಹರೀಶ್ ಭಟ್ ಅವರ ಮಾವ ಮಧುಸೂದನ ಭಟ್ ಉಪಸ್ಥಿತರಿದ್ದರು.