Advertisement

ಆಕ್ಸಿಜನ್‌ ಉತ್ಪಾದನಾ ಘಟಕಕ್ಕೆ ಭೂಮಿಪೂಜೆ

10:14 AM May 22, 2021 | Team Udayavani |

ಹೊನ್ನಾಳಿ: ಕೋವಿಡ್ ಸೋಂಕಿತರಿಗೆ ಅನುಕೂಲವಾಗಲು ಆಸ್ಪತ್ರೆಯಆವರಣದಲ್ಲೇ ಆಕ್ಸಿಜನ್‌ ಉತ್ಪಾದನಾ ಘಟಕ ಆರಂಭಿಸಲಾಗುತ್ತಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.

Advertisement

ತಾಲೂಕು ಆಸ್ಪತ್ರೆ ಆವರಣದಲ್ಲಿ ರೂ.1 ಕೋಟಿ ವೆಚ್ಚದ ಆಕ್ಸಿಜನ್‌ಉತ್ಪಾದನಾ ಘಟಕಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು,ಕಳೆದ ಕೆಲ ದಿನಗಳಿಂದ ತಾಲೂಕುಆಸ್ಪತ್ರೆಯಲ್ಲಿ ನಿತ್ಯ ಆಕ್ಸಿಜನ್‌ ಸಿಲಿಂಡರ್‌ಸಮಸ್ಯೆಯಾಗುತ್ತಿದ್ದು, ಕೋವಿಡ್ ಸೋಂಕಿತರು ಸಾಕಷ್ಟು ತೊಂದರೆ ಅನುಭವಿಸ ಬೇಕಾಗಿತ್ತಲ್ಲದೆ ನಿತ್ಯ ನಾನೇ ಖುದ್ದು ಹರಿಹರ, ಭದ್ರಾವತಿಗೆ ತೆರಳಿ ಆಕ್ಸಿಜನ್‌ ಸಿಲಿಂಡರ್‌ ತಂದು ಕೋವಿಡ್ ಸೋಂಕಿತರ ಆತಂಕ ದೂರ ಮಾಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದರು.

ಆರಂಭದಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಕೇವಲ 17 ಸಿಲಿಂಡರ್‌ ಮಾತ್ರ ಇದ್ದು,ಇದೀಗ ಅವುಗಳನ್ನು 70ಕ್ಕೆ ಏರಿಕೆಮಾಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಆಕ್ಸಿಜನ್‌ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅನುಕೂಲವಾಗಿದೆ ಎಂದರು.

ಕೆಆರ್‌ಐಡಿಎಲ್‌ ಅಧ್ಯಕ್ಷ ರುದ್ರೇಶ್‌ ಮಾತನಾಡಿ, ಹೊನ್ನಾಳಿಯಲ್ಲಿ ಕೆಆರ್‌ಐಡಿಎಲ್‌ ನಿಂದ ಸಿಎಸ್‌ಆರ್‌ ಫಂಡ್‌ಬಳಸಿಕೊಂಡು ಆಕ್ಸಿಜನ್‌ ಉತ್ಪಾದನಾಘಟಕವನ್ನು ಸ್ಥಾಪಿಸಲಾಗುತ್ತಿದೆ. ಇನ್ನು 20ದಿನಗಳಲ್ಲಿ ಆಕ್ಸಿಜನ್‌ ಉತ್ಪಾದನಾ ಘಟಕ ಕಾರ್ಯಾರಂಭ ಮಾಡಲಿದೆ ಎಂದರು.

ಈ ಆಕ್ಸಿಜನ್‌ ಘಟಕದಿಂದ ಶಾಶ್ವತವಾಗಿ ನೂರು ಹಾಸಿಗೆಗಳಿಗೆ ಆಕ್ಸಿಜನ್‌ ನೀಡ ಬಹುದಾಗಿದೆ. ಇಲ್ಲಿಂದ ಬೇರೆಕಡೆಗೂ ಆಕ್ಸಿಜನ್‌ ತೆಗೆದುಕೊಂಡುಹೋಗಬಹುದು ಎಂದ ಅವರು,ರಾಜ್ಯದಲ್ಲಿ ಮೂರನೇ ಅಲೆ ಬೇರೆ ಇದ್ದು, ಜನರನ್ನು ರಕ್ಷಣೆ ಮಾಡಬೇಕಾಗಿದ್ದು,ನಮ್ಮ ಕರ್ತವ್ಯವಾಗಿದೆ. ವೈರಸ್‌ನ್ನು ಸಂಪೂರ್ಣವಾಗಿ ನಿರ್ನಾಮಮಾಡಬೇಕಿದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದರು.

Advertisement

ಗಂಗಾಧರ್‌ ಸ್ವಾಮಿ, ಡಾ.ಪ್ರಶಾಂತ್‌, ರಾಜಣ್ಣ, ವಿಶ್ವನಾಥ್‌, ಕೆಂಚಪ್ಪ,ಡಾ.ಸುದೀಪ್‌, ಡಾ.ಸಂತೋಷ್‌, ಡಾ.ಲೀಲಾವತಿ, ಪಿಎಸ್‌ಐ ಬಸವನಗೌಡಬಿರಾದರ್‌, ಪುರಸಭಾಧ್ಯಕ್ಷ ಕೆ.ವಿ.ಶ್ರೀಧರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next