Advertisement

ನೇಪಾಳ ಭೂ ಕುಸಿತಕ್ಕೆ 3 ಗ್ರಾಮಗಳ 11 ಮನೆಗಳು ನೆಲಸಮ: 9 ಮಂದಿ ಸಾವು, ಹಲವು ಮಂದಿ ನಾಪತ್ತೆ

05:37 PM Sep 13, 2020 | sudhir |

ಕಠ್ಮಂಡು : ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ನೇಪಾಳದ ಕೆಲವು ಪ್ರದೇಶಗಳಲ್ಲಿ ಭೂ ಕುಸಿತ ಸಂಭವಿಸಿ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಇಪ್ಪತ್ತಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

Advertisement

ರವಿವಾರ ಮುಂಜಾನೆ 2: 30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ, ಕಠ್ಮಂಡು ನಗರದಿಂದ ಪೂರ್ವಕ್ಕೆ 120 ಕಿ.ಮೀ ದೂರದಲ್ಲಿರುವ ಸಿಂಧುಪಾಲ್ಚೌಕ್ ಜಿಲ್ಲೆಯಲ್ಲಿ ಬೆಟ್ಟದ ಒಂದು ಪಾರ್ಶ್ವ ಕುಸಿದು ಬಿದ್ದಿದ್ದು ಪರಿಣಾಮ ನಾಗಪುಜೆ, ಬ್ರಿಖಾರ್ಕ, ನೆವಾರ ಗ್ರಾಮದದಲ್ಲಿ ವಾಸಿಸುವವರ ಮನೆಯ ಮೇಲೆ ಭೂ ಕುಸಿತಗೊಂಡಿದೆ. ಎಲ್ಲರು ನಿದ್ದೆಯ ಮಂಪರಿನಲ್ಲಿದ್ದ ಪರಿಣಾಮ ಘಟನೆಯ ಅರಿವು ಇಲ್ಲದಾಗಿದೆ, ಭೂ ಕುಸಿತದ ಪರಿಣಾಮ ಒಂಬತ್ತು ಮಂದಿ ಸಾವನ್ನಪ್ಪಿದ್ದು ಇಪ್ಪತ್ತಕ್ಕೂ ಹೆಚ್ಚು ಮಂದಿ ಮಣ್ಣಿನಡಿ ಸಿಲುಕಿದ್ದಾರೆ ಎಂದು ಇಲ್ಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಏಳು ಮಂದಿಯನ್ನು ಮೃತ ದೇಹವನ್ನು ಹೊರತೆಗೆಯಲಾಗಿದ್ದು ಅವರ ಗುರುತನ್ನು ಪತ್ತೆ ಹಚ್ಚಲಾಗಿದೆ ಎಂದು ಸಿಂಧೂಪಾಲ್ ಚೌಕ್ ನ ಪೊಲೀಸ್ ಅಧಿಕಾರಿಯಾದ ರಾಜನ್ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ:ಮದುವೆಯಾದ 15ದಿನಕ್ಕೆ ಪತಿ ಆತ್ಮಹತ್ಯೆ: ಜ್ಯೂಸ್ ತರುವ ನೆಪದಲ್ಲಿ ಮಾಲ್ ನಿಂದ ಜಿಗಿದಳು ಪತ್ನಿ

ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು ಕಡಿದಾದ ಪ್ರದೇಶವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಯು ಕಷ್ಟ ಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಭೂಕುಸಿತದಿಂದ ಉಂಟಾದ ನಷ್ಟದ ನಿಖರ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ, ಪ್ರಾಥಮಿಕ ಅಂದಾಜಿನ ಪ್ರಕಾರ, ಇಲ್ಲಿನ ಮೂರು ಗ್ರಾಮಗಳಲ್ಲಿನ 11 ಮನೆಗಳು ಕೊಚ್ಚಿ ಭೂ ಕುಸಿತದಿಂದ ಸಂಪೂರ್ಣ ನೆಲಸಮಗೊಂಡಿದೆ ಎನ್ನಲಾಗಿದೆ.
ರಕ್ಷಣಾ ಕಾರ್ಯಾಚರಣೆ ನಡೆಸಲು ನೇಪಾಳ ಸೇನೆ, ನೇಪಾಳ ಪೊಲೀಸ್ ಮತ್ತು ಸಶಸ್ತ್ರ ಪೊಲೀಸ್ ಪಡೆಯ ಜಂಟಿ ತಂಡವನ್ನು ನಿಯೋಜಿಸಲಾಗಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬಿಸಿನೀರು ಕೊಡುವ ನೆಪ: ಕ್ವಾರಂಟೈನ್‌ ಕೇಂದ್ರದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಅಟೆಂಡೆಂಟ್‌

Advertisement

Udayavani is now on Telegram. Click here to join our channel and stay updated with the latest news.

Next