Advertisement

ವಯನಾಡು ಭೂಕುಸಿತಕ್ಕೆ 40 ಸಾವು ಶಂಕೆ

09:52 AM Aug 10, 2019 | Team Udayavani |

ತಿರುವನಂತಪುರ/ನವದೆಹಲಿ: ದೇವರ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದೆ. ವಯನಾಡ್‌ ಜಿಲ್ಲೆಯ ಮೆಪ್ಪಾಡಿ ಪುತುಮಾಲಾ ಎಂಬಲ್ಲಿ ಗುರುವಾರ ಸಂಜೆ ಉಂಟಾದ ಭೂಕುಸಿತದಲ್ಲಿ 40 ಜನರು ಸಿಲುಕಿದ್ದು, ಅವರಲ್ಲಿ ಮೂವರನ್ನು ರಕ್ಷಿಸಲಾಗಿದೆ. ದೇಗುಲ, ಮಸೀದಿ, ಚರ್ಚ್‌, ಪ್ಲಾಂಟೇಷನ್‌ ಕಂಪನಿಯ ನೌಕರರು ವಾಸಿಸುತ್ತಿದ್ದ ಮನೆಗಳ ಮೇಲೆ ಗುಡ್ಡ ಕುಸಿದ ಕಾರಣ ಈ ದುರಂತ ಸಂಭವಿಸಿದೆ.

Advertisement

ಕರ್ನಾಟಕದ ಮಡಿಕೇರಿಯಲ್ಲಿ ಭೂಮಿ ಕುಸಿದ ಮಾದರಿಯಲ್ಲಿಯೇ ಭೂಮಿ ಕುಸಿದಿರುವುದರ ಬಗ್ಗೆ ಮಲಯಾಳಂ ಸುದ್ದಿ ವಾಹಿನಿಗಳು ಕುಸಿತದ ದೃಶ್ಯಾವಳಿಗಳನ್ನು ಪ್ರಸಾರ ಮಾಡಿವೆ.

ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದೆ. ಕೇರಳದ ಇತರ ಭಾಗದಲ್ಲಿಯೂ ಉಂಟಾಗಿರುವ ಪ್ರವಾಹ ಸ್ಥಿತಿಯಿಂದಾಗಿ 9,500ಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ತಿರುವನಂತಪುರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಕೇರಳದಲ್ಲಿ ಮಳೆಯಿಂದಾಗಿ ಒಟ್ಟು 8 ಮಂದಿ ಸಾವನ್ನಪ್ಪಿದ್ದಾರೆ. ವಯನಾಡ್‌ನ‌ ನಿಲಂಬೂರ್‌ ಪಟ್ಟಣ ನೀರಿನಲ್ಲಿ ಮಳುಗಡೆಯಾಗಿದೆ.

ಮಲಪ್ಪುರಂ, ಕಲ್ಲಿಕೋಟೆ, ವಯನಾಡ್‌ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಈ ನಾಲ್ಕು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (ಎನ್‌ಡಿಆರ್‌ಎಫ್), ಸೇನೆಯ ನೆರವನ್ನು ಕೇರಳ ಸರ್ಕಾರ ಕೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next