ಸಕಲೇಶಪುರ: ತಾಲೂಕಿನ ಬಳಿ ಭೂ ಕುಸಿತದಿಂದ ಸುಮಾರು 200 ಅಡಿಗಳಷ್ಟು ದೂರದ ರಸ್ತೆಯೇ ಕಡಿತಗೊಂಡು ಮಂಗಮಾಯವಾಗಿದೆ.
ಭಾರಿ ಭೂಕುಸಿತ ಉಂಟಾಗಿರುವ ಕಾರಣ ರಸ್ತೆ ಸರ್ವನಾಶವಾಗಿದ್ದು, ಇದರಿಂದ ಸಂಪರ್ಕಿತರಾಗಿದ್ದ ಸುಮಾರು 10 ಗ್ರಾಮಗಳ ಜನತೆ ಸಂಪರ್ಕ ಕಳೆದುಕೊಂಡಿದ್ದಾರೆ.
ಈ ರಸ್ತೆಯ ಸಮೀಪದಲ್ಲಿ ಎತ್ತಿನಹೊಳೆ ಪೈಪ್‌ಲೈನ್ ಹಾದುಹೋಗಿದ್ದು, ಅವೈಜ್ಞಾನಿಕವಾಗಿರುವ ಇದರ ಕಾಮಗಾರಿಯೇ ಈ ಅನಾಹುತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮುಂದುವರೆದ ಮಳೆಯ ಅಬ್ಬರದ ಪರಿಣಾಮ ಉಂಟಾಗುತ್ತಿರುವ ಭೂಕುಸಿತಗಳ ಸಾಲಿಗೆ ಸಕಲೇಶಪುರದ ಬಳಿಯ ಈ ಬೃಹತ್ ಪ್ರಮಾಣದ ಭೂ ಕುಸಿತ ಸೇರಿದೆ. ಸಕಲೇಶಪುರ ತಾಲೂಕಿನ ಕುಂಬರಡಿ ಸಮೀಪ ಘಟನೆ ನಡೆದಿದೆ. ಕುಂಬರಡಿ ಹಾಗೂ ಹಾರ್ಲೇ ಎಸ್ಟೇಟ್ ಮಧ್ಯೆ ಭೂ ಕುಸಿತವಾಗಿದೆ. 200 ಮೀಟರ್‌ಗೂ ಹೆಚ್ಚು ದೂರ ರಸ್ತೆಯ ಸಮೇತ ಭೂಮಿ ಕೊಚ್ಚಿ ಹೋಗಿದ್ದು, ಹತ್ತಾರು ಗ್ರಾಮಗಳ ಸಂಪರ್ಕ ಕಟ್ ಆಗಿದೆ. ಈ ರಸ್ತೆಯ ಪಕ್ಕದಲ್ಲಿ ಎತ್ತಿನಹೊಳೆ ಕಾಮಗಾರಿಗಾಗಿ ಕೆಲಸ ಮಾಡಲಾಗಿತ್ತು. ಎತ್ತಿನಹೊಳೆ ಅವೈಜ್ಞಾನಿಕ ಕಾಮಗಾರಿಯಿಂದಲೇ ಭೂಕುಸಿತವಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಹೊಳೆಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಜಲದಿಗ್ಬಂದನ.. ದರ್ಶನಕ್ಕಾಗಿ ಕಾದು ಕುಳಿತ ನಾಗರ ಹಾವು