Advertisement

ಹಿಮಾಚಲದಲ್ಲಿ ಭೂಕುಸಿತ: ಶಿಮ್ಲಾದಿಂದ ಚಂಡೀಗಢಕ್ಕೆ ಸಂಪರ್ಕಿಸುವ ಹೆದ್ದಾರಿ ಬಂದ್

09:24 AM Aug 03, 2023 | Team Udayavani |

ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ಶಿಮ್ಲಾದಿಂದ ಚಂಡೀಗಢಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದ್ದು, ಹಲವು ವಾಹನಗಳು ಸಿಲುಕಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಸೋಲನ್‌ನ ಧರಮ್‌ಪುರ ಮತ್ತು ಪರ್ವಾನೂ ನಡುವಿನ ಕೋಟಿ ಬಳಿಯ ಚಾಕಿ ಮೋರ್‌ನಲ್ಲಿ ಭೂಕುಸಿತ ಸಂಭವಿಸಿ ಸುಮಾರು 50 ಮೀಟರ್ ದೂರದವರೆಗೆ ರಸ್ತೆಯೇ ಕುಸಿದು ಹೋಗಿದೆ.

ರಕ್ಷಣಾ ತಂಡ ಕಾರ್ಯಾಚರಣೆ ನಡೆಸಿ ಸುಮಾರು ಒಂಬತ್ತು ಗಂಟೆಗಳ ನಂತರ ಲಘು ವಾಹನಗಳಿಗೆ ಏಕ-ಪಥದ ರಸ್ತೆಯನ್ನು ಪುನಃಸ್ಥಾಪಿಸಲಾಯಿತು ಆದರೆ ಮಳೆಯಿಂದಾಗಿ ಭೂಮಿ ಜಾರಲು ಪ್ರಾರಂಭಿಸಿದ ಪರಿಣಾಮ ಮತ್ತೆ ರಸ್ತೆಯನ್ನು ಮುಚ್ಚಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ತಡೆಯಿಂದಾಗಿ ಶಿಮ್ಲಾ ಮತ್ತು ಸೋಲನ್‌ಗೆ ಅಗತ್ಯ ವಸ್ತುಗಳ ಪೂರೈಕೆಯೂ ಸ್ಥಗಿತಗೊಂಡಂತಾಗಿದೆ. ಭೂ ಕುಸಿತದಿಂದಾಗಿ ಸೇಬು, ಪೇರಳೆ ಹಣ್ಣುಗಳನ್ನು ತುಂಬಿದ ಸುಮಾರು 100 ಟ್ರಕ್‌ಗಳು, ಬಸ್‌ಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ವಾಹನಗಳು ರಸ್ತೆಯ ಎರಡೂ ಬದಿಗಳಲ್ಲಿ ಸಿಲುಕಿಕೊಂಡಿವೆ.

ಇದನ್ನೂ ಓದಿ: ನುಹ್, ಗುರುಗ್ರಾಮ್‌ನಲ್ಲಿ ಇಂಟರ್ನೆಟ್ ನಿಷೇಧ, ಹೆಚ್ಚಿನ ಭದ್ರತೆ ಒದಗಿಸಲು ಕೇಂದ್ರಕ್ಕೆ ಮನವಿ

Advertisement

Advertisement

Udayavani is now on Telegram. Click here to join our channel and stay updated with the latest news.

Next