Advertisement

ಮತ್ತೆ ಜೀವಕಳೆ ಪಡೆದ ಚಾರ್ಮಾಡಿ ಜಲಪಾತಗಳು: ಅಲ್ಲಲ್ಲಿ ಗುಡ್ಡ‌‌ ಕುಸಿತ

01:37 PM Sep 21, 2020 | keerthan |

ಚಿಕ್ಕಮಗಳೂರು: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಚಾರ್ಮಾಡಿ ಘಾಟ್ ನಲ್ಲಿರುವ ಸಣ್ಣ ಪುಟ್ಟ ಜಲಪಾತಗಳಿಗೆ ಮತ್ತೆ ಜೀವಕಳೆ ಬಂದಿದ್ದು, ತುಂಬಿ ಧುಮ್ಮಿಕ್ಕುತ್ತಿವೆ.

Advertisement

ಚಾರ್ಮಾಡಿ ಘಾಟಿಯ ಹಚ್ಚಹಸುರಿನ ಮನಮೋಹಕ ದೃಶ್ಯ ಪ್ರಯಾಣಿಕರಿಗೆ ಆನಂದ ನೀಡುತ್ತಿದೆ. ಮಲೆನಾಡಲ್ಲಿ ಬಿಟ್ಟು-ಬಿಟ್ಟು ಮಳೆ ಸುರಿಯುತ್ತಿದರೂ ಎಂದಿನಂತೆ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಆದರೆ ಮತ್ತೊಂದೆಡೆ ಚಾರ್ಮಾಡಿ ಘಾಟ್ ನಲ್ಲಿ ಅಲ್ಲಲ್ಲಿ ಗುಡ್ಡ‌‌ ಕುಸಿತವೂ ಆಗುತ್ತಿದೆ. ಗುಡ್ಡದ ಮಣ್ಣು ಸಣ್ಣ ಪ್ರಮಾಣದಲ್ಲಿ ಕುಸಿಯುತ್ತಿದ್ದು, ರಸ್ತೆಗೆ ಬೀಳುತ್ತಿದೆ. ಜಿಲ್ಲಾಡಳಿತ, ಸ್ಥಳೀಯರಿಂದ ತೆರವು ಕಾರ್ಯ ನಡೆಯುತ್ತಿದೆ. ರಸ್ತೆಗೆ ಬಿದ್ದಿರುವ ಮರಗಿಡಗಳನ್ನು ಬದಿಗೆ ಸರಿಸಿ ಸ್ಥಳೀಯರು ವಾಹನ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ.

ಇದನ್ನೂ ಓದಿ: ಏಕಾಏಕಿ ತುಂಬಿ ಹರಿದ ನದಿ: ತುಂಗಭದ್ರಾ ನದಿಯಲ್ಲಿ ಕೊಚ್ಚಿಹೊದ ಇಬ್ಬರು ಯುವಕರು

Advertisement
Advertisement

Udayavani is now on Telegram. Click here to join our channel and stay updated with the latest news.

Next