Advertisement
ಮೋಡ ಮುಸುಕಿದಂಥ ವಾತಾ ವರಣ, ಒಮ್ಮೆ ಜೋರು ಮತ್ತೂಮ್ಮೆ ತುಂತುರು ಮಳೆ, ಭೋರ್ಗರೆಯುವ ಹೊಳೆ, ಈಗಲೂ ಕುಸಿಯುತ್ತಿರುವ ಬೆಟ್ಟ. ಎರಡು ಮೂರು ದಿನಗಳಿಂದ ಇಂಥ ಬೆಳವಣಿಗೆಗಳಿಗೆ ಪುಷ್ಪಗಿರಿ ಪರ್ವತ ಶ್ರೇಣಿಯ 5 ಗ್ರಾಮಗಳು ಸಾಕ್ಷಿಯಾಗಿವೆ. ಕಡಮಕಲ್ಲು (ಕಲ್ಮಕಾರು) ನಿಂದ ಐನ ಕಿದು ಕಲ್ಲಾಜೆಯವರೆಗೆ ತೆರಳಿದಾಗ ಈ ಪ್ರತಿಕೂಲ ಪರಿಸ್ಥಿತಿಯಲ್ಲಿ ಪರಿಸರದ ಮರುಸ್ಥಾಪನೆ, ರಸ್ತೆ ಮರು ನಿರ್ಮಾಣ ಅಕ್ಷರಶಃ ಸವಾಲೆನಿಸಿದೆ.
Related Articles
Advertisement
ಭಾರೀ ಗಾತ್ರದ ಮರಗಳು ಕಡಮಕಲ್ಲು ಹೊಳೆಯುದ್ದಕ್ಕೂ ವ್ಯಾಪಿಸಿ ಅದರ ಕೆಳಗಿನ ಭಾಗದ ಕಲ್ಮಕಾರು, ಕೊಲ್ಲಮೊಗ್ರು, ಹರಿಹರ, ಐನೆಕಿದು ಭಾಗದ ಡ್ಯಾಂ, ಸೇತುವೆಗಳಿಗೆ ಹಾನಿಯ ನ್ನುಂಟು ಮಾಡಿದೆ. ನದಿ ದಂಡೆ ಮೇಲಿನ ಮನೆಗಳು ಜಲಾವೃತವಾಗಿವೆ.ಇಷ್ಟೊಂದು ಭೀಕರವಾದ ಕೃತಕ ನೆರೆ ಬಂದಿದ್ದನ್ನು ಕಂಡಿಲ್ಲ, ಕೇಳಿಲ್ಲ ಎನ್ನುತ್ತಾರೆ ಸ್ಥಳೀಯರಾದ ಯಶವಂತ ಬಿಳಿಮಲೆ.
ಹಲವು ಮನೆಗೆ ನೀರು ನುಗ್ಗಿ ಬಟ್ಟೆ, ದಿನಸಿ ಸಾಮಗ್ರಿ ನೀರು ಪಾಲಾಗಿದೆ. ಮನೆಯೊಳಗಿನ ಕೆಸರು ಮಿಶ್ರಿತ ನೀರು, ಮಣ್ಣು ತೆರವಿಗೆ ನಿವಾಸಿಗಳು ಹರಸಾಹಸಪಡುತಿದ್ದಾರೆ. ಹರಿಹರ ಮುಖ್ಯ ಪೇಟೆಯ ಫ್ಯಾನ್ಸಿ ಅಂಗಡಿ, ದೇಗುಲದ ಕಾಣಿಕೆ ಹುಂಡಿ ಕುರುಹು ಇಲ್ಲದಂತೆ ಕೊಚ್ಚಿ ಹೋಗಿದೆ. ಎಣ್ಣೆಮಿಲ್‌ನಲ್ಲಿದ್ದ 2 ಸಾವಿರ ಲೀ. ಕೊಬ್ಬರಿ ಎಣ್ಣೆ ಹಾಗೂ ಇತರ ವಸ್ತುಗಳು ನಾಶವಾಗಿವೆ.
ಕಂದಮ್ಮನ ಜತೆ ರಾತ್ರಿ ಜಾಗರಣೆ ಆ. 1ರಂದು ನಡು ರಾತ್ರಿ ನಡೆದ ಜಲಪ್ರವಾಹಕ್ಕೆ ಹಲವು ಮನೆಗಳು ಜಲಾವೃತ ಗೊಂಡಿದ್ದವು. ಕೆಲವರಿಗೆ ಮನೆಯೊಳಗೆ ನೀರು ಬಂದದ್ದೇ ಗೊತ್ತಾಗಲಿಲ್ಲ. ನಡು ರಾತ್ರಿ ಪಳ್ಳತ್ತಡ್ಕ ಎಂಬಲ್ಲಿ ಯೋಗೀಶ್ ಕುಕ್ಕುಂದ್ರಡ್ಕ ಎಂಬವರ ಮನೆ ಜಲ ದಿಗ್ಬಂಧನಕ್ಕೆ ಒಳಗಾಗಿ ರಕ್ಷಣೆ ಸಾಧ್ಯವಾಗದೆ ದಂಪತಿ ರಾತ್ರಿಯಿಡೀ ತಮ್ಮ ಎಳೆಯ ಕಂದಮ್ಮನ ಜತೆಗೆ ಮನೆಯ ಟೆರೇಸ್ ಮೇಲೆ ನಿಂತು ಕಳೆದಿದ್ದಾರೆ. ಹರಿಹರ ಮುಖ್ಯ ಪೇಟೆಯ ನಿವಾಸಿಯೊಬ್ಬರ 2 ಲಕ್ಷ ರೂ. ಹಣ ನೆರೆ ಪಾಲಾಗಿದೆ. – ಬಾಲಕೃಷ್ಣ ಭೀಮಗುಳಿ
– ದಯಾನಂದ ಕಲ್ನಾರ್