Advertisement

ಲ್ಯಾಂಡ್ ಲೈನ್ ಬಳಕೆದಾರರ ಗಮನಕ್ಕೆ: ಇನ್ನು ಮುಂದೆ ಮೊಬೈಲ್ ಗೆ ಕರೆಮಾಡುವ ಮುನ್ನ ‘0’ ಕಡ್ಡಾಯ

10:51 PM Jan 15, 2021 | Team Udayavani |

ನವದೆಹಲಿ: ಇಂದಿನಿಂದ ಆರಂಭಗೊಂಡು ಮುಂಬರುವ ದಿನಗಳಲ್ಲಿ ಎಲ್ಲಾ ಲ್ಯಾಂಡ್ ಲೈನ್ ಪೋನ್ ಬಳಕೆದಾರರು ಯಾವುದೇ ಮೊಬೈಲ್ ಸಂಖ್ಯೆಗೆ ಕರೆಮಾಡುವ ಮೊದಲು ‘0’ ಸಂಖ್ಯೆಯನ್ನು ಬಳಸಬೇಕು ಎಂದು ಟೆಲಿಕಾಂ ಇಲಾಖೆ ನಿರ್ದೇಶನ ನೀಡಿದೆ.

Advertisement

ದೇಶದ ಪ್ರಸಿದ್ಧ ಟೆಲೆಕಾಮ್ ಸಂಸ್ಥೆಗಳಾಗಿರುವ ಜಿಯೋ. ವೊಡಾಪೋನ್ ಐಡಿಯಾ (VI) ಗಳನ್ನು ಒಳಗೊಂಡಂತೆ ಸರ್ಕಾರಿ ಸ್ವಾಮ್ಯದ BSNL ಲ್ಯಾಂಡ್ ಪೋನ್ ಗಳ ಬಳಕೆದಾರರಿಗೆ ಈ ನಿಯಮ  ಅನ್ವಯವಾಗಲಿದೆ ಎನ್ನಲಾಗಿದೆ.

ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಸಂಖ್ಯೆಗಳ ಲಭ್ಯತೆಯನ್ನು ಸುಲಭಗೊಳಿಸುವ  ನಿಟ್ಟಿನಲ್ಲಿ  ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ನಿಯಮದಿಂದಾಗಿ 2544 ಮಿಲಿಯನ್ ಹೊಸ ಸಂಖ್ಯೆಗಳನ್ನು ಸೇರಿಸಬಹುದಾಗಿದೆ ಎಂದು ಇಲಾಖೆ ತಿಳಿಸಿದೆ.

ಇದನ್ನೂ ಓದಿ:ಸಲಾರ್‌ ಚಿತ್ರಕ್ಕೆ ಮುಹೂರ್ತ; ಹೈದರಾಬಾದ್‌ನಲ್ಲಿ ಕನ್ನಡ-ತೆಲುಗು ಚಿತ್ರರಂಗಗಳ ಮಹಾ ಸಮ್ಮಿಲನ

2021 ರ ಜನವರಿ 15 ರಿಂದ ಯಾವುದೇ ಮೊಬೈಲ್ ಸಂಖ್ಯೆಗೆ ಕರೆಮಾಡುವ ಮೊದಲು ‘0’ ಸಂಖ್ಯೆಯನ್ನು ಬಳಸುವುದನ್ನು ದಯವಿಟ್ಟು ನೆನಪಿನಲ್ಲಿಟ್ಟುಕೊಳ್ಳಿ ಎಂದು ತನ್ನ ಗ್ರಾಹಕರಿಗೆ ಮಾಹಿತಿ ನೀಡಿರುವ ಜಿಯೋ ಸಂಸ್ಥೆ, ಟೆಲಿಕಾಂ ಇಲಾಖೆ (DoT)ನಿರ್ದೇಶನದ ಮೇರೆಗೆ ಈ ನಿಯಮವನ್ನು ಜಾರಿಗೊಳಿಸಲಾಗಿದೆ ಎಂದಿದೆ.

Advertisement

ಕಳೆದ ನವೆಂಬರ್ ನಲ್ಲಿ ಟೆಲಿಕಾಂ ಇಲಾಖೆ TRAI’s ಪ್ರಸ್ತಾಪವನ್ನು ಒಪ್ಪಿಕೊಂಡಿದ್ದು,ಇದರ  ಅನ್ವಯ ಮುಂಬರುವ ದಿನಗಳಲ್ಲಿ ಎಲ್ಲಾ ಟೆಲಿಪೋನ್ ಬಳಕೆದಾರರು ಮೊಬೈಲ್ ಸಂಖ್ಯೆಗಳಿಗೆ ಕರೆಮಾಡುವ ಮುನ್ನ ‘0’­­­ ಸಂಖ್ಯೆಯನ್ನು ಬಳಸಬೇಕು ಎಂದು ತನ್ನ ವೆಬ್ ಸೈಟ್ ನಲ್ಲಿ ಬರೆದುಕೊಂಡಿತ್ತು. ಆದರೆ ಇಂದಿನವರೆಗೂ ಎಲ್ಲಾ ಟೆಲಿಪೋನ್ ಸಂಸ್ಥೆಗಳು ತಮ್ಮ ಲ್ಯಾಂಡ್ ಲೈನ್ ಗ್ರಾಹಕರು ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿರಲಿಲ್ಲ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next