Advertisement

ಮುಂದಿನ ಪೀಳಿಗೆಗೆ ನೀರು ಉಳಿಸಿ

03:46 PM Feb 16, 2021 | Team Udayavani |

ಮುಧೋಳ: ಮುಂದಿನ ಪೀಳಿಗೆಗಾಗಿ ಆಸ್ತಿ ಅಂತಸ್ತು ಗಳಿಸದೆ ನೀರು ಉಳಿತಾಯ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅದೇ ನಾವು ಅವರಿಗೆ ನೀಡುವ ದೊಡ್ಡ ಉಡುಗೊರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

Advertisement

ಮಂಟೂರ ಗ್ರಾಮದಲ್ಲಿ 1541 ಮನೆಗಳಿಗೆ ಕಾರ್ಯಾತ್ಮಕ ನಳಗಳ ಜೋಡಣೆ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ತಾಲೂಕಿನ ಪ್ರತಿಯೊಂದು ಹಳ್ಳಿಗೂ ಶುದ್ಧ ಕುಡಿಯುವ ನೀರು ಒದಗಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.

ತಾಲೂಕಿನ ಹಲಗಲಿ ಗ್ರಾಮದಲ್ಲಿ 2017ರಲ್ಲಿ ಕಾರ್ಯಾತ್ಮವಾಗಿ ಜೋಡಿಸಿರುವ ನಳಗಳ ಜೋಡಣೆಇಡೀ ದೇಶಕ್ಕೆ ಮಾದರಿಯಾಗಿದೆ. ಆ ಗ್ರಾಮದ ನಳಗಳ ಜೋಡಣೆ ಕಾರ್ಯ ವೀಕ್ಷಣೆಗೆ ದೆಹಲಿಯಿಂದ ವಿಶೇಷ ತಂಡಆಗಮಿಸಿತ್ತು. ಹಲಗಲಿಯ ಗ್ರಾಮದ ಯೋಜನೆಯನ್ನು ಅಧಿಕಾರಿಗಳು ಕೊಂಡಾಡಿದರು.

ಜಲಜೀವನ ಮಿಷನ್‌ ಯೋಜನೆಯಡಿ 2200ಕೋಟಿ ವೆಚ್ಚದಲ್ಲಿ ದೇಶದ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಮುಂದಾಗಿದ್ದಾರೆ ಎಂದು ಹೇಳಿದರು. ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ಗಂಗಪ್ಪ ತಳವಾರ,ಉಪಾಧ್ಯಕ್ಷೆ ವಿಜಯಲಕ್ಷ್ಮೀ ಮೂಲಿಮನಿ, ಜಿಲ್ಲಾ ಪಂಚಾಯಿತಿಸದಸ್ಯ ಭೀಮಗೌಡ ಪಾಟೀಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷಗುರುರಾಜ ಕಟ್ಟಿ, ಲೋಕೋಪಯೋಗಿ ಇಲಾಖೆ ರಸ್ತೆ ಅಭಿವೃದ್ಧಿ ನಿಗಮದ ಸದಸ್ಯ ಕೆ.ಆರ್‌. ಮಾಚಪ್ಪನವರ, ಬಿಜೆಪಿ ಧುರೀಣ ಅರುಣ ಕಾರಜೋಳ, ನಗರಸಭೆ ಅಧ್ಯಕ್ಷ ಸಿದ್ಧನಾಥ ಮಾನೆ, ಶಂಕರ ಮೆಟಗುಡ್ಡ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next