ಸಿಂದಗಿ: ಸಿಂದಗಿ ಪಟ್ಟಣದ ಅಭಿವೃದ್ಧಿ ಮಾಡುವುದು ನನ್ನ ಕೆಲಸವಾಗಿದೆ. ಅದರಂತೆ ಪಟ್ಟಣಕ್ಕೆ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ಪಟ್ಟಣ ಅಭಿವೃದ್ಧಿ ಮಾಡುತ್ತಿದ್ದೇನೆ ಎಂದು ಶಾಸಕ ಎಂ.ಸಿ. ಮನಗೂಳಿ ಮಾತನಾಡಿದರು.
ಶುಕ್ರವಾರ ಪಟ್ಟಣದ ವಿವೇಕಾನಂದ ವೃತ್ತದಲ್ಲಿ ಹಮ್ಮಿಕೊಂಡಿದ್ದ 2019-20ನೇ ಸಾಲಿನ ಲೆಕ್ಕ ಶೀರ್ಷಿಕೆ ಜಿಲ್ಲಾ ಮುಖ್ಯ ರಸ್ತೆ ಯೋಜನೆಯಡಿಯಲ್ಲಿ 4.24 ಕೋಟಿ ರೂ. ವೆಚ್ಚದಲ್ಲಿ ಬಸವೇಶ್ವರ ವೃತ್ತದಿಂದ ಸ್ವಾಮಿ ವಿವೇಕಾನಂದ ವೃತ್ತದವರೆಗೆ ರಸ್ತೆ ಸುಧಾರಣೆಹಾಗೂ ಕನಕದಾಸ ವೃತ್ತದ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಹು ದಿನಗಳ ಪಟ್ಟಣದ ನಾಗರಿಕರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇನೆ. ಪಟ್ಟಣದಲ್ಲಿ ಚಿಕ್ಕಸಿಂದಗಿ ಬೈಪಾಸ್ ದಿಂದ ಕೆಇಬಿವರೆಗೆ ರಸ್ತೆ ಅಭಿವೃದ್ಧಿ ಕಾರ್ಯಮಾಡಲಾಗಿದೆ. ಅಲ್ಲದೇ ವಾರ್ಡ್‌ಗಳಲ್ಲಿ ಸಿಸಿ ರಸ್ತೆಅಭಿವೃದ್ಧಿ ಮಾಡಲಾಗಿದೆ. ತಾಲೂಕಿನ ವಿವಿಧಹಳ್ಳಿಗಳ ಸಂಪರ್ಕ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ ಎಂದು ಹೇಳಿದರು.
ಸಿಂದಗಿ ಪಟ್ಟಣದ ಜನತೆಯ ಶಾಶ್ವತ ಕುಡಿಯುವ ನೀರಿನ ಬವಣೆ ನೀಗಿಸಲು ತಾಲೂಕಿನ ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ನೀರು ಸಂಗ್ರಹಿಸುವ ಕಾಮಗಾರಿ ಮುಗಿಯುವ ಹಂತದಲ್ಲಿದ್ದು ಶೀಘ್ರದಲ್ಲೇ ಲೋಕಾರ್ಪಣೆ ಮಾಡಲಾಗುವುದು ಎಂದರು.
ಪಟ್ಟಣದಲ್ಲಿ ಬಹು ದಿನಗಳಿಂದ ನನೆಗುದಿಗೆ ಬಿದ್ದ ಯುಜಿಡಿ ಕಾಮಗಾರಿಗೆ 90.75 ಕೋಟಿ ರೂ. ಅನುದಾನದಲ್ಲಿ ಸಿಂದಗಿ ಪಟ್ಟಣಕ್ಕೆ ಸಮಗ್ರ ಒಳಚರಂಡಿ ಕಾಮಗಾರಿಯ ಮೊದಲ ಹಂತದ ಕಾಮಗಾರಿ ಕೆಲಸ ಪ್ರಾರಂಭವಾಗಿದ್ದು ಪಟ್ಟಣ ನಿವಾಸಿಗಳ ಬಹು ದಿನಗಳ ಬೇಡಿಕೆ ಈಡೇರುವಂತಾಗಿದೆ. ಚುನಾವಣೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಹಂತ ಹಂತವಾಗಿ ಈಡೇರಿಸುತ್ತಿದ್ದೇನೆ ಎಂದು ಹೇಳಿದರು. ಸಾನ್ನಿಧ್ಯ ವಹಿಸಿದ್ದ ಸ್ಥಳೀಯಸಾರಂಗಮಠ-ಗಚ್ಚಿನಮಠದ ಡಾ| ಪ್ರಭುಸಾರಂಗದೇವ ಶಿವಾಚಾರ್ಯರುಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಹಿರಿಯ ಶಾಸಕ ಎಂ.ಸಿ. ಮನಗೂಳಿ ಅವರಿಗೆ ಹೆಚ್ಚಿಗೆ ಆಯುಷ್ಯ-ಆರೋಗ್ಯ ಭಗವಂತ ಕಲ್ಪಿಸಲಿ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಕಾರ್ಯಮಾಡಲಿ ಎಂದು ಹೇಳಿದರು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ, ಪ್ರಥಮ ದರ್ಜೆ ಗುತ್ತಿಗೆದಾರ ಎನ್.ವಿ.ಕುಲಕರ್ಣಿ, ಚಂದ್ರಶೇಖರ ನಾಗೂರ, ಅಶೋಕ ಮನಗೂಳಿ, ಜಿಪಂ ಮಾಜಿ ಉಪಾಧ್ಯಕ್ಷ ಸಿದ್ದು ಪಾಟೀಲ, ಪುರಸಭೆ ಮಾಜಿ ಸದಸ್ಯ ರಾಜಶೇಖರಕೂಚಬಾಳ, ಸದಸ್ಯರಾದ ಬಸವರಾಜ ಯರನಾಳ,ಹಾಸೀಂ ಆಳಂದ, ರಾಜಣ್ಣ ನಾರಾಯಣಕರ,ಮಹಾಂತಗೌಡ ಬಿರಾದಾರ, ಗುತ್ತಿಗೆದಾರ ಮುತ್ತು ಮುಂಡೆವಾಡಗಿ, ಮುತ್ತು ಸೊನ್ನದ, ಯುವ ಮುಖಂಡ ರಮೇಶ ಹೂಗಾರ, ರಾಹುಲ್‌ಕುಲಕರ್ಣಿ, ರವಿರಾಜ ರೆಬಿನಾಳ, ರಾಘವೇಂದ್ರ ಹೊನ್ನಳ್ಳಿ, ಕೆಂಚಪ್ಪ ಪೂಜಾರಿ, ಪ್ರಸನ್ನ ಜೇರಟಗಿ, ಜಿಲಾನಿ ನಾಟೀಕಾರ, ಬಸೀರ್ ಮರ್ತೂರ, ನೂರಹ್ಮದ್ ಅತ್ತಾರ, ಎಸ್.ಸಿ. ಚೋರಗಸ್ತಿ, ಸುಧಿಧೀರ ದೇವರಮನಿ ಸೇರದಂತೆ ಇತರರು ಇದ್ದರು.