ಸಿಂದಗಿ: ಸಿಂದಗಿ ಪಟ್ಟಣ ಅಭಿವೃದ್ಧಿಮಾಡುವುದು ನನ್ನ ಕೆಲಸ. ಅದರಂತೆ ಸಾಕಷ್ಟು ಅಭಿವೃದ್ಧಿ ಯೋಜನೆ ಅನುಷ್ಠಾನ ಮಾಡುವ ಮೂಲಕ ಅಭಿವೃದ್ಧಿ ಪಡಿಸುತ್ತಿದ್ದೇನೆ ಎಂದು ಶಾಸಕ ಎಂ.ಸಿ. ಮನಗೂಳಿ ಮಾತನಾಡಿದರು. ಪಟ್ಟಣದ ಕನಕದಾಸ ವೃತ್ತದಿಂದ ಮೋರಟಗಿ ನಾಕಾವರೆಗೆ ಡಾಂಬರೀಕರಣ ಮತ್ತು ಸಿಸಿ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಹುದಿನಗಳ ನಾಗರಿಕರ ಬೇಡಿಕೆಈಡೇರಿಸಲು ಕೆಲಸ ಮಾಡುತ್ತಿದ್ದೇನೆ. 52.50 ಕೋಟಿ ರೂ. ಅನುದಾನದಲ್ಲಿ ಕನಕದಾಸ ವೃತ್ತದಿಂದ ಮೋರಟಗಿ ನಾಕಾವರೆಗೆ ಡಾಂಬರೀಕರಣ ಮತ್ತು ಸಿಸಿ ಚರಂಡಿನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಎಲ್ಲರೂ ಕಾಮಗಾರಿಗೆ ಸಹಕರಿಸಬೇಕು ಎಂದರು.
ನನ್ನ ಅಧಿಕಾರವಧಿಯಲ್ಲಿ 1994ರಲ್ಲಿ ಸಚಿವನಿದ್ದ ಸಂದರ್ಭದಲ್ಲಿ ಪಟ್ಟಣದ ಜನತೆಗೆಕುಡಿಯುವ ಪೂರೈಸಲು ಪಟ್ಟಣದಲ್ಲಿ ಕೆರೆ ನಿರ್ಮಿಸಲಾಯಿತು. 8 ಕಿ.ಮೀ. ದೂರದಿಂದ ಪೈಪ್‌ಲೈನ್ ಮಾಡಿ ಕೆರೆಗೆನೀರು ತರಲಾಯಿತು. ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹರಿಸಬೇಕೆಂಬ ಉದ್ದೇಶದಿಂದ ಈಗ 27.10 ಕೋಟಿ ರೂ.ವೆಚ್ಚದಲ್ಲಿ ಪೈಪ್‌ಲೈನ್ ಮಾಡಿ ಬಳಗಾನೂರ ಕೆರೆಯಿಂದ ಸಿಂದಗಿಗೆ ನೀರು ತರಲಾಗುವುದು.ಈಗ ಪೈಪ್‌ಲೈನ್ ಕಾಮಗಾರಿ ಮುಗಿದಿದ್ದು, ಶೀಘ್ರ ಬಳಗಾನೂರು ಕೆರೆ ನೀರು ಸಿಂದಗಿ ಕೆರೆಗೆ ಹರಿಸಲಾಗುವುದು ಎಂದರು.
ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಆಲಮೇಲ ತಾಲೂಕು ಕೇಂದ್ರವನ್ನಾಗಿ ಮಾಡಲಾಗಿದೆ. ಕಡಣಿಬ್ಯಾರೇಜ್ ಕಾಮಗಾರಿ ಮಂಜೂರಾಗಿದೆ. ಪಟ್ಟಣ ಸೇರಿದಂತೆ ಗ್ರಾಮಗಳ ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಪಟ್ಟಣ ಪುರಸಭೆಯನ್ನು ನಗರಸಭೆಯನ್ನಾಗಿಸುವುದು, ಮಂಜೂರಾದ ತೋಟಗಾರಿಕೆ ಕಾಲೇಜು ಸ್ಥಾಪಿಸುವುದು ನನ್ನ ಮುಂದಿನ ಗುರಿ. ಈ ಮೂಲಕ ಮಾದರಿ ಕ್ಷೇತ್ರ ಮಾಡಲು ಪ್ರಯತ್ನಿಸುವೆ ಎಂದರು.
ನನೆಗುದಿಗೆ ಬಿದ್ದ ಯುಜಿಡಿ ಕಾಮಗಾರಿಗೆ 90.75 ಕೋಟಿ ರೂ. ಅನುದಾನದಲ್ಲಿಸಿಂದಗಿ ಪಟ್ಟಣಕ್ಕೆ ಸಮಗ್ರ ಒಳಚರಂಡಿಕಾಮಗಾರಿ ಮೊದಲ ಹಂತದ ಕಾಮಗಾರಿ ಪ್ರಾರಂಭವಾಗಿದೆ. ಚುನಾವಣೆಯಲ್ಲಿ ನೀಡಿದ ಆಶ್ವಾಸನೆ ಹಂತ ಹಂತವಾಗಿ ಈಡೇರಿಸುತ್ತಿದ್ದೇನೆ ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಡಾ| ಶಾಂತವೀರಮನಗೂಳಿ ಮಾತನಾಡಿ, ಶಾಸಕ ಎಂ.ಸಿ.ಮನಗೂಳಿ ಪಟ್ಟಣದ ಅಭಿವೃದ್ಧಿಗೆ ಸಾಕಷ್ಟುಅನುದಾನ ತರುವ ಮೂಲಕ ಪಟ್ಟಣದ ಮುಖ್ಯ ರಸ್ತೆ ಅಭಿವೃದ್ಧಿಪಡಿಸುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸೋಣ ಎಂದರು.
ಸಾರಂಗಮಠ-ಗಚ್ಚಿನಮಠದ ಡಾ| ಪ್ರಭುಸಾರಂಗದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿದರು. ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ, ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ಮಾತನಾಡಿದರು. ಈ ವೇಳೆ ಜಿಪಂ ಮಾಜಿ ಉಪಾಧ್ಯಕ್ಷಸಿದ್ದು ಪಾಟೀಲ, ಉಮೇಶ ಜೋಗುರ, ಪುರಸಭೆ ಉಪಾಧ್ಯಕ್ಷ ಆಸಿಂ ಆಳಂದ, ಸದಸ್ಯರಾದ ಬಸವರಾಜ ಯರನಾಳ, ರಾಜಣ್ಣ ನಾರಾಯಣಕರ, ಶ್ರೀಶೈಲ ಭೀರಗೊಂಡ, ಬಸವರಾಜ ಸಜ್ಜನ, ಅನೀಲ ಕಡಕೋಳ, ಶರಣಯ್ಯ ಮಠ, ಪ್ರಕಾಶ ಹಿರೇಕುರಬರ, ರಮೇಶ ಹೂಗಾರ, ಕೆಂಚಪ್ಪ ಪೂಜಾರಿ, ಪ್ರಸನ್ನ ಜೇರಟಗಿ ಇದ್ದರು.