Advertisement
ರವಿವಾರ ಸಂಜೆ ಕಂದಗನೂರ, ಚಿರ್ಚನಕಲ್ ಗ್ರಾಮಗಳಲ್ಲಿ ಪ್ರವಾಹ ಪೀಡಿತ ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿ 2.7 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರತ್ಯೇಕ ಭೂಮಿಪೂಜೆ ನಡೆಸಿ ನಂತರ ನಡೆದ ಸಾರ್ವಜನಿಕ ಸಭೆಗಳಲ್ಲಿ ಅವರು ಮಾತನಾಡಿದರು.
Related Articles
Advertisement
ಮುಂದಿನ ಮೂರು ವರ್ಷಗಳಲ್ಲಿ ಈ ತಾಲೂಕಿನ ಎಲ್ಲ ಹಳ್ಳಿಗಳ ಜನಕ್ಕೆ ನಳದ ಮೂಲಕ ಶುದ್ಧ ಕುಡಿಯುವ ನೀರು ದೊರಕಲಿದೆ. ಆಲಮಟ್ಟಿ, ನಾರಾಯಣಪುರ ಜಲಾಶಯದ ನೀರನ್ನು ಈ ಯೋಜನೆಗಾಗಿ ಬಳಸಿಕೊಳ್ಳಲಾಗುತ್ತದೆ. ಅಲ್ಲೇ ಶುದ್ಧ ನೀರಿನ ಘಟಕ ನಿರ್ಮಿಸಲಾಗುತ್ತದೆ. ಇದಕ್ಕಾಗಿ ವಿಜಯಪುರ ಜಿಲ್ಲೆಗೆ 2,500 ಕೋಟಿ ರೂ. ಮಂಜೂರಾಗಿದ್ದು ಅದರಲ್ಲಿ ಮುದ್ದೇಬಿಹಾಳ ತಾಲೂಕಿಗೆ 700ಕೋಟಿ ರೂ. ಅಂದಾಜು ಪತ್ರಿಕೆ ತಯಾರಾಗಿದೆ. ಆದಷ್ಟು ಬೇಗ ಟೆಂಡರ್ ಪ್ರಕ್ರಿಯೆ ಮುಗಿದು ಕೆಲಸ ಪ್ರಾರಂಭಗೊಳ್ಳಲಿದೆ ಎಂದರು.
ತಾಲೂಕಿನ ವಿದ್ಯುತ್ ಸಮಸ್ಯೆಗೂ ಶೀಘ್ರ ಮುಕ್ತಿ ದೊರಕಲಿದ್ದು ರೈತಾಪಿ ವರ್ಗದವರು ನೆಮ್ಮದಿಯ ಜೀವನ ನಡೆಸುವುದು ಸಾಧ್ಯವಾಗಲಿದೆ. ವಿದ್ಯುತ್ ಸಮಸ್ಯೆ ಬಗೆಹರಿದಾಗ ರೈತರು ರಾತ್ರಿಯಿಡೀ ಜಮೀನಿನಲ್ಲೇ ಕಾಲ ಕಳೆದು ಬೆಳೆಗೆ ನೀರು ಹರಿಸುವ ಪರಿಸ್ಥಿತಿಗೆ ಮುಕ್ತಿ ದೊರಕಲಿದೆ. ಹಿಂದಿನ 25 ವರ್ಷದಲ್ಲಿ ಆಗದಅಭಿವೃದ್ಧಿ ಈಗ ಕೇವಲ ಒಂದೆರಡು ವರ್ಷಗಳಲ್ಲೇ ಆಗುತ್ತಿರುವುದು ಸಂತಸ ಪಡುವಂಥದ್ದು. ಜನ ಜಾಗೃತರಾದರೆ ಮಾತ್ರ ಜನಪ್ರತಿನಿಧಿಯೂ ಜಾಗೃತನಾಗುತ್ತಾನೆ ಅನ್ನೋದಕ್ಕೆ ಈಗಿನ ಪರಿಸ್ಥಿತಿ ಉತ್ತಮ ಉದಾಹರಣೆಯಾಗಿದೆ ಎಂದರು.
ಇದೇ ವೇಳೆ ಎರಡೂ ಗ್ರಾಮಗಳಲ್ಲಿ ಗ್ರಾಮಸ್ಥರ ಪರವಾಗಿ ಶಾಸಕರನ್ನು ಸನ್ಮಾನಿಸಲಾಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಬಿಜೆಪಿ ಧುರೀಣರಾದ ಶಾಂತಗೌಡ ಪಾಟೀಲ ನಡಹಳ್ಳಿ, ಮಲಕೇಂದ್ರಗೌಡ ಪಾಟೀಲ, ಶರಣಯ್ಯ ಬೂದಿಹಾಳಮಠ, ಸಿದ್ರಾಮಪ್ಪ ಶಿವಣಗಿ, ರಾಜಾಭಕ್ಷ ಮಕಾಶಿ, ಸಾಹೇಬಗೌಡ ಪಾಟೀಲ, ಭೀಮಣ್ಣ ಹೂಗಾರ, ಈರನಗೌಡ ಪಾಟೀಲ, ಶಿವನಗೌಡ ಬಿರಾದಾರ, ಮೈಬೂಬ , ಸಿಪಿಐ ಆನಂದ ವಾಗಮೋಡೆ, ಆಯಾ ಗ್ರಾಮಗಳ ಪ್ರಮುಖರು, ಹಿರಿಯರು, ಗ್ರಾಪಂ ಅಧಿಕಾರಿಗಳು ಸೇರಿ ಹಲವರು ಇದ್ದರು. ಇದಕ್ಕೂ ಮುನ್ನ ಶಾಸಕರು ಗ್ರಾಮದಲ್ಲಿ ಸಂಚರಿಸಿ ಮೂಲಸೌಕರ್ಯಗಳ ಮಾಹಿತಿ ಪಡೆದುಕೊಂಡರು.