Advertisement
ತಾಲೂಕಿನ ತಂಗಡಗಿ ಗ್ರಾಪಂ ಅಡಿ ಬರುವ ತಂಗಡಗಿ, ಕಮಲದಿನ್ನಿ, ಕುಂಚಗನೂರ, ಗಂಗೂರ, ಅಮರಗೋಳ ಗ್ರಾಮಗಳಲ್ಲಿ ಕೆಬಿಜೆಎನ್ನೆಲ್,ಪಂಚಾಯತ್ ರಾಜ್, ಶಾಸಕರ ನಿಧಿ , ಕೆಇಬಿ, ಪಿಡಬ್ಲೂಡಿ ಇಲಾಖೆಗಳ ಅಡಿ ಮಂಜುರಾದ ಅಂದಾಜು 15 ಕೋಟಿ ರೂ.ಗಳ ಮೂಲಸೌಕರ್ಯ ಅಭಿವೃದ್ಧಿ, ವಿದ್ಯುತ್ ಸುಧಾರಣಾ ಕಾಮಗಾರಿಗಳಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಸಾರ್ವಜನಿಕ ಸಭೆಗಳಲ್ಲಿ ಅವರು ಮಾತನಾಡಿದರು. ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಸಂಬಂಧಿ ಸಿದ ಎಲ್ಲ ಕೆಲಸಗಳು ಭರದಿಂದ ಸಾಗಿವೆ. ಈಗಾಗಲೇ 48 ಹಳ್ಳಿಗಳಲ್ಲಿ ವಿದ್ಯುತ್ ಸುಧಾರಣಾ ಕಾಮಗಾರಿ ಮುಗಿದಿವೆ. ಇನ್ನುಳಿದ ಗ್ರಾಮಗಳಲ್ಲಿ ಮುಂದಿನ ಎರಡೂವರೆ ವರ್ಷಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಕೆಲ ಗ್ರಾಮಗಳಲ್ಲಿ ಅತ್ಯಂತ ಹಳೇಯದಾದ ವಿದ್ಯುತ್ ಕಂಬ, ತಂತಿಗಳನ್ನು ಸಂಪೂರ್ಣ ಬದಲಾಯಿಸುವ ಕಾರ್ಯ ನಡೆದಿದೆ ಎಂದರು.
Related Articles
Advertisement
ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಬಿಜೆಪಿ ಧುರೀಣರಾದ ಶಿವಶಂಕರಗೌಡ ಹಿರೇಗೌಡರ, ಮಲಕೇಂದ್ರಗೌಡ ಪಾಟೀಲ, ಭೂನ್ಯಾಯ ಮಂಡಳಿ ಸದಸ್ಯ ಎಸ್.ಬಿ. ಚಲವಾದಿ ಮಾತನಾಡಿದರು. ಚಟ್ಟರಕಿ ಸದ್ಗುರು ಸಾನ್ನಿಧ್ಯವಹಿಸಿದ್ದರು. ಗುತ್ತಿಗೆದಾರ ವೀರಭದ್ರಗೌಡ ಹೊಸಮನಿ, ಪಿಡಿಒ ಉಮೇಶ ರಾಠೊಡ, ಪಿಡಬ್ಲೂಡಿ ಎಇಇ ಆರ್.ಎನ್. ಹುಂಡೇಕಾರ, ಹೆಸ್ಕಾಂ ಶಾಖಾ ಧಿಕಾರಿ ಬಿ.ಎಸ್. ಯಲಗೋಡ, ಸ್ಥಳೀಯ ಧುರೀಣರಾದ ಸಂಗಮೇಶ ಹುಂಡೇಕಾರ, ಸಂಗಣ್ಣ ಅಳ್ಳಗಿ, ಶಿವಾನಂದ ಮಂಕಣಿ, ಮುದಕಪ್ಪಗೌಡ ಪಾಟೀಲ, ಬಸವರಾಜ ಡೊಂಗರಗಾವಿ, ಸಿದ್ರಾಮಪ್ಪ ಡೊಂಗರಗಾವಿ, ಯಮನಪ್ಪ ಶಾಸ್ತ್ರೀ, ಜಗದೀಪ ದೇಸಣಗಿ, ರಾಜು ಚಲವಾದಿ ಇದ್ದರು.
ಅಂದಾಜು 15 ಕೋಟಿ ರೂ.ಗಳ ಕಾಮಗಾರಿ : ತಂಗಡಗಿಯಲ್ಲಿ ಮೂಲಸೌಕರ್ಯ ಕಾಮಗಾರಿಗಳಿಗೆ 2.78 ಕೋಟಿ, ಅಮರಗೋಳ-ಹಡಗಲಿ ರಸ್ತೆಗೆ 2 ಕೋಟಿ, ಅಮರಗೋಳ ಕ್ರಾಸ್‌ನಿಂದ ಏಳಾದೇಶ್ವರ ಹನುಮಪ್ಪನ ಗುಡಿವರೆಗೆ ರಸ್ತೆ ಡಾಂಬರೀಕರಣಕ್ಕೆ 1 ಕೋಟಿ, ತಂಗಡಗಿ-ಗಂಗೂರ ರಸ್ತೆಗೆ 50 ಲಕ್ಷ, ತಂಗಡಗಿಯಲ್ಲಿ ಅಂಬೇಡ್ಕರ್ ಭವನಕ್ಕೆ 50 ಲಕ್ಷ, ಶಾಸಕರ ಅನುದಾನದಲ್ಲಿ 5 ಲಕ್ಷ, ಸರ್ಕಾರಿ ಹೈಸ್ಕೂಲ್ ಕಟ್ಟಡಕ್ಕೆ 31.5 ಲಕ್ಷ, ಗಂಗೂರಲ್ಲಿ ವಿವಿಧ ಕಾಮಗಾರಿಗಳಿಗಾಗಿ 1.50 ಕೋಟಿ ಹೀಗೆ ಒಟ್ಟಾರೆ ತಂಗಡಗಿ ಗ್ರಾಪಂ ವ್ಯಾಪ್ತಿಯಲ್ಲಿ ಅಂದಾಜು 15 ಕೋಟಿ ರೂ. ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಈ ವೇಳೆ ಗ್ರಾಮಸ್ಥರಿಗೆ ತಿಳಿಸಲಾಯಿತು.
ಕಾರ್ಯಕ್ರಮ ಮೊಟಕು : ಶಾಸಕರು ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುತ್ತಿದ್ದಾಗಲೇ ರಾಜ್ಯ ಚುನಾವಣಾ ಆಯೋಗವು ಗ್ರಾಪಂ ಚುನಾವಣೆ ಘೊಷಣೆ ಮಾಡಿತು. ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬರುವುದನ್ನು ತಿಳಿದ ಶಾಸಕರು ತಂಗಡಗಿ ಹೊರತುಪಡಿಸಿ ಉಳಿದ ಗ್ರಾಮಗಳಲ್ಲಿ ನಡೆಸಲುದ್ದೇಶಿಸಿದ್ದ ಕಾರ್ಯಕ್ರಮಗಳ ಬ್ಯಾನರ್ ತೆರವುಗೊಳಿಸಿ ಕಾರ್ಯಕ್ರಮ ಮೊಟಕುಗೊಳಿಸಿದರು.
ಶಾಸಕರು ಸರ್ಕಾರದೊಂದಿಗೆ ಬಡಿದಾಡಿ ಹೆಚ್ಚಿನ ಅನುದಾನ ತಂದಿದ್ದಾರೆ. ಅವರು ಎಷ್ಟು ಕಾಳಜಿಯಿಂದ ಅನುದಾನ ತಂದಿದ್ದಾರೋ ಅಷ್ಟೇ ಕಾಳಜಿಯಿಂದ ಕೆಲಸ ಮಾಡಿಸಿಕೊಳ್ಳಬೇಕು. 25 ವರ್ಷದಲ್ಲಿ ಆಗದ ಅಭಿವೃದ್ಧಿ ಕೆಲಸವನ್ನು 25 ತಿಂಗಳಲ್ಲಿ ಮಾಡಿದ್ದಾರೆ. – ಮಲಕೇಂದ್ರಗೌಡ ಪಾಟೀಲ, ಕರ್ನಾಟಕ ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷ
ಶಾಸಕ ನಡಹಳ್ಳಿಯವರು ಚುನಾವಣೆಯಲ್ಲಿ ನೀಡಿದ ಎಲ್ಲ ಭರವಸೆ ಈಡೇರಿಕೆಗೆ ಬದ್ಧರಾಗಿದ್ದಾರೆ. ಈಗಾಗಲೇ ಶೇ. 65ರಷ್ಟು ಕೆಲಸ ಮಾಡಿದ್ದಾರೆ. ಗ್ರಾಪಂ ಚುನಾವಣೆಯಲ್ಲಿ ಶಾಸಕರ ಕೈ ಬಲಪಡಿಸಬೇಕು. – ಶಿವಶಂಕರಗೌಡ ಹಿರೇಗೌಡರ, ಬಿಜೆಪಿ ಹಿರಿಯ ಧುರೀಣರು