ನೆಲಮಂಗಲ : ಕ್ಷೇತ್ರದ ಮಾಜಿ ಶಾಸಕ ಎಂ.ವಿ.ನಾಗರಾಜ್ ಸುಳ್ಳು ಹೇಳುವುದರಲ್ಲಿ ನಿಸ್ಸೀಮ, ನಮ್ಮ ಅವಧಿಯಲ್ಲಿ 47ಕೋಟಿ ರೂಗಳಲ್ಲಿ ನಿರ್ಮಾಣವಾಗುತ್ತಿರುವ ಪಟ್ಟಣದ ಬಸ್ಸ್ ನಿಲ್ದಾಣವನ್ನು ನಾನೇ ಮಂಜೂರು ಮಾಡಿಸಿದ್ದು ಎಂದು ಹೇಳಿಕೊಂಡು ಓಡಾಡುತಿದ್ದಾರೆ, ಅವರು ಆದೇಶ ಪ್ರತಿಯಲ್ಲಿನ ದಿನಾಂಕಗಳನ್ನು ನೋಡಿ ಮಾತನಾಡಲಿ ಎಂದು ಕ್ಷೇತ್ರದ ಶಾಸಕ ಡಾ.ಕೆ.ಶ್ರೀನಿವಾಸ್‌ಮೂರ್ತಿ ಸವಾಲುಹಾಕಿದರು.
ತಾಲೂಕಿನ ಸೋಲದೇವನಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಅವಲಕುಪ್ಪೆ ಗ್ರಾಮದಲ್ಲಿ ಸುಮಾರು 3ಕೋಟಿ ರೂಗಳಲ್ಲಿ ರಸ್ತೆ ಡಾಂಬರೀಕರಣ ಮತ್ತು ಕಾಂಕ್ರೀಟ್ ಚರಂಡಿ ಕಾಮಗಾರಿಗಳಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಬಹುತೇಕ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳು ಸಮಸ್ಯೆ ಎದುರಾಗದಂತೆ ಅಭಿವೃದ್ದಿಯನ್ನು ಮಾಡಲಾಗಿದೆ, ಸೋಲದೇವನಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯು ಗಡಿಗ್ರಾಮಗಳನ್ನು ಹೆಚ್ಚಾಗಿ ಹೊಂದಿರುವುದರಿಂದ ಹೆಚ್ಚಿನದಾಗಿ ಅಭಿವೃದ್ದಿಗೆ ಒತ್ತು ನೀಡಲಾಗಿದೆ, ಪ್ರಸ್ತುತ ಬೇಸಿಗೆ ಕಾಲ ಎದುರಾಗುತ್ತಿರುವ ಹಿನ್ನಲೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ. ಈಗಾಗಲೆ 50 ಕೊಳವೆಬಾವಿಗಳನ್ನು ಮಂಜೂರುಮಾಡಿಸಿಕೊಳ್ಳಲಾಗಿದ್ದು ಅವಶ್ಯಕತೆಗನುಗುಣವಾಗಿ ನೀರಿನ ಸಮಸ್ಯೆಎದುರಾದಾಗ ಕೊರೆಸಲಾಗುತ್ತದೆ , ತಾಲೂಕಿನಲ್ಲಿ 236 ಕೋಟಿರೂಗಳ ವೆಚ್ಚದಲ್ಲಿ ಈಗಾಗಲೆ ಒಳಚರಂಡಿ ವ್ಯವಸ್ಥೆಗೆ ಮಂಜೂರಾತಿ ದೊರೆತಿದೆ. ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವ ನಿಟ್ಟಿನಲ್ಲಿ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳನ್ನು ಮಾಡಲಾಗಿದೆ, ನಗರಸ`ೆ ವ್ಯಾಪ್ತಿಯ ಅಭಿವೃದ್ದಿಗೆ 150ಕೋಟಿಗಳ ಮಂಜೂರಾತಿಯನ್ನು ಪಡೆಯಲಾಗಿದೆ, ಈಗಾಗಲೆ ಪಟ್ಟಣದಲ್ಲಿ 47ಕೋಟಿಗಳ ಅನುದಾನದಲ್ಲಿ ಬೃಹತ್ ಬಸ್ಸ್ ನಿಲ್ದಾಣವನ್ನು ನಿರ್ಮಾಣಮಾಡಲಾಗುತ್ತಿದ್ದು ಮಾಜಿ ಶಾಸಕ ಎಂ.ವಿ.ನಾಗರಾಜ್ ಅದನ್ನು ತಾವೇ ಮಾಡಿಸುತ್ತಿರುವುದೆಂದು ಹೇಳಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ತಾಲುಕು ಕೇಂದ್ರ ನೆಲಮಂಗಲ ಪುರಸಭೆಯನ್ನು ನಗರಸಭೆಯನ್ನಾಗಿ ಉನ್ನತೀಕರಿಸಿದ್ದು ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ, ಒಳಚರಂಡಿ ವ್ಯವಸ್ಥೆಗೆ ಅನುದಾನವನ್ನು ನೀಡಿದ್ದು ಹೆಚ್‌ಡಿಕೆ ಅವರ ಅಧಿಕಾರಾವಧಿಯಲ್ಲಿ, ಹೆಚ್.ಡಿ.ರೇವಣ್ಣವರು ಸಚಿವರಾದಾಗ ತಾಲೂಕಿನ ಸಾಕಷ್ಟು ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ ಸಹಕರಿಸಿದ್ದಾರೆ ಎಂದರು.
ಸೋಲದೇವನಹಳ್ಳಿ ಗ್ರಾಮಪಂಚಾಯತಿ ಮಾಜಿ ಅಧ್ಯಕ್ಷ ರುದ್ರಪ್ಪ ಮಾತನಾಡಿ ಗಡಿಗ್ರಾಮಗಳ ಅಭಿವೃದ್ದಿಗೆ ಅತಿ ಹೆಚ್ಚಿನ ಆಸಕ್ತಿಹೊಂದುವ ಮೂಲಕ ಸಾಕಷ್ಟು ಅಭಿವೃದ್ದಿಯನ್ನು ಮಾಡಲು ಸಹಕರಿಸುತ್ತಿರುವುದು ಹೆಮ್ಮೆಯ ಸಂಗತಿ, ಶಾಸಕರ ಅಭಿವೃದ್ದಿಪರವಾದ ಚಿಂತನೆಗಳಿಂದಾಗಿ ನಮ್ಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಸಮಗ್ರ ಅಭಿವೃದ್ದಿ ಸಾಕ್ಷಿವಾಗುತ್ತಿದೆ ಎಂದರು.
ಸಂದರ್ಭದಲ್ಲಿ ತಾ.ಪಂ.ಮಾಜಿ ಸದಸ್ಯರಾದ ಸಂಪತ್‌ಬಾಬು, ಎಪಿಎಂಸಿ ನಿರ್ದೇಶಕ ಬೂದಿಹಾಳ್ ಗೋವಿಂದರಾಜು,ತಾಪಂ ಮಾಜಿ ಇಓ ಹನುಮಂತರಾಯಪ್ಪ, ಸೋಲದೇನಹಳ್ಳಿ ಗ್ರಾಪಂ ಅಧ್ಯಕ್ಷೆ ಪುಷ್ಪಕೃಷ್ಣಪ್ಪ, ಉಪಾಧ್ಯಯಕ್ಷೆ ಪುಟ್ಟಮ್ಮ ಮುನಿರಾಜು, ಸದಸ್ಯರಾದ ವೈಆರ್.ಶ್ರೀನಿವಾಸ್, ಸಂದೀಪ್,ಸಂತೋಷ್‌ನಾಯಕ್, ಮಾದಮ್ಮ ಕೃಷ್ಣಪ್ಪ, ರಾಮಕೃಷ್ಣಪ್ಪ,ರೂಪ, ರತ್ನಮ್ಮ, ಶಿವಕುಮಾರ್, ಮುಖಂಡರಾದ ಕೋಡಪ್ಪನಹಳ್ಳಿವೆಂಕಟೇಶ್, ವರದನಾರಾಯಣ್, ಆರ್‌ಬಿಐ ರಾಜಣ್ಣ, ಕಣೇಗೌಡನಹಳ್ಳಿಸುರೇಶ್,ವೀರಮಾರೇಗೌಡ್ರು, ವೆಂಕಟೇಗೌಡ್ರು, ಬಾಲಕೃಷ್ಣ, ಅವಲಕುಪ್ಪೆ ಕಿಟ್ಟಿ ಮತ್ತಿತರರು ಉಪಸ್ಥಿತರಿದ್ದರು.