ಅನುಗೊಂಡನಹಳ್ಳಿ: ಕೋವಿಡ್ ಸಂದರ್ಭದಲ್ಲಿವೊಲ್ವೋ ಸಂಸ್ಥೆ ತಾಲೂಕಿನಾದ್ಯಂತ ಸುಮಾರುಒಂದು ಕೋಟಿ ರೂ.ಯಷ್ಟು ಅನುದಾನ ಜನರನೆರವಿಗೆ ನೀಡಿದೆ. ಇಂತಹ ಬೃಹತ್‌ಕಾರ್ಖಾನೆಗಳು ತಾಲೂಕಿಗೆ ಬಂದರೆ ಉದ್ಯೋಗ ಸೃಷ್ಟಿಯಾಗುವುದರ ಜೊತೆಗೆ ಸಂಸ್ಥೆಯ ಸಿಎಸ್‌ಆರ್ ಅನುದಾನದಿಂದ ಗ್ರಾಮಗಳಿಗೆ ಅವಶ್ಯಕತೆ ಇರುವ ಮೂಲಭೂತ ಸೌಕರ್ಯಗಳು ಸಹ ಸಿಗಲಿವೆ ಎಂದು ಶಾಸಕ ಶರತ್ ಬಚ್ಚೇಗೌಡ ಅಭಿಪ್ರಾಯಪಟ್ಟರು.
ಹೊಸಕೋಟೆ ತಾಲೂಕು ನಂದಗುಡಿ ಹೋಬಳಿ ಯಳಚಹಳ್ಳಿ ಗ್ರಾಮದ ಚನ್ನ ಭೈರೇಗೌಡರ ಕಾಲೋನಿ ಹಾಗೂ ತಾವರೆಕೆರೆ ಗ್ರಾಮದಜೈ ಭೀಮ್ ಕಾಲೋನಿ ಮತ್ತು ಬಸವಣ್ಣ ಬೀದಿಯಲ್ಲಿ ವೊಲ್ವೋಕಂಪನಿಯ ಸಿಎಸ್‌ಆರ್ ಅನುದಾನದಲ್ಲಿ ನಿರ್ಮಿಸುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿ ಶಾಸಕರು ಮಾತನಾಡಿದರು.
ಅಗತ್ಯ ಸಹಕಾರ: ವೊಲ್ವೋ ಕಂಪನಿಯ 20 ಲಕ್ಷರೂ.ಗಳ ಸಿಎಸ್‌ಆರ್ ನಿಧಿಯಲ್ಲಿ ಮೂರು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾರ್ಯಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಗಿದೆ. ಸಂಸದರಾದ ಬಿ.ಎನ್.ಬಚ್ಚೇಗೌಡರ ಕನಸಿನ ಕೂಸಾಗಿದ್ದ ವೊಲ್ವೋ ಸಂಸ್ಥೆ ಸತತ20 ವರ್ಷಗಳಿಂದ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುತ್ತಾ ಬಂದಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ನಮ್ಮೊಂದಿಗೆ ಕೈ ಜೋಡಿಸಬೇಕು. ಈ ಸಂಸ್ಥೆಗೆ ಅಗತ್ಯ ಸಹಕಾರ ನಮ್ಮಿಂದ ದೊರೆಯಲಿದೆ ಎಂದು ತಿಳಿಸಿದರು.
ಸ್ಪಂದನೆ: ಮುಖಂಡ ಟಿ.ಎಸ್.ರಾಜಶೇಖರ್ ಮಾತನಾಡಿ, ಫ್ಲೋರೈಡ್‌ಯುಕ್ತ ಅಶುದ್ಧ ನೀರುಸೇವಿಸುವುದು ಹಲವಾರು ರೋಗರುಜಿನಗಳಿಗೆ ಕಾರಣವಾಗುತ್ತದೆ. ಗ್ರಾಮೀಣ ಭಾಗದ ಜನತೆಯಆರೋಗ್ಯ ಕಾಪಾಡುವ ದೃಷ್ಟಿಯಿಂದ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿಶುದ್ಧೀಕರಿಸಿದ ನೀರು ಒದಗಿಸುವ ಉದ್ದೇಶದಿಂದ ವೋಲ್ವೊ ಸಂಸ್ಥೆ ಮೂರು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಮುಂದಾಗಿದ್ದು, ತಾವರೆಕೆರೆ ಗ್ರಾಮ ಪಂಚಾಯತಿ ಭಾಗದ ಜನತೆಗೆ ಸ್ಪಂದಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ವೊಲ್ವೋ ಕಂಪನಿ ಮುಖ್ಯಸ್ಥ ಮುಕುಂದ್ , ಜಿ.ವಿ.ರಾವ್, ಮುರಳಿ ಕೃಷ್ಣ, ದಿನಕರ್,ಮುಖಂಡರಾದಟಿ.ಎಸ್.ರಾಜಶೇಖರ್,ಎಪಿಎಂಸಿ ಮಾಜಿ ಅಧ್ಯಕ್ಷ ದೇವರಾಜ್, ಗ್ರಾಪಂ ಮಾಜಿ ಅಧ್ಯಕ್ಷೆ ಮಂಜುಳಾ ಶ್ರೀನಿವಾಸ್ ಹಾಗೂ ಗ್ರಾಮದ ಮುಖಂಡರು, ಕಾರ್ಯ ಕರ್ತರು ಹಾಜರಿದ್ದರು