Advertisement
10 ಸೆಂಟ್ಸ್ ಜಾಗದಲ್ಲಿ 1964ರಲ್ಲಿ ಐವರು ಅನಾಥರೊಂದಿಗೆ ಸೇವಾ ಶ್ರಮವನ್ನು ಆರಂಭಿಸಿದ ಸ್ಥಾಪಕ ಧಿರೇಂದ್ರನಾಥ್ ಭಟ್ಟಾಚಾರ್ಯ ಅವರ ಭಾವಚಿತ್ರದ ಮುಂದೆ ದೀಪ ಬೆಳಗಿಸುವ ಮೂಲಕ ಗೌರವ ಸಲ್ಲಿಸಲಾಯಿತು.
Related Articles
Advertisement
ಈ ವೇಳೆ ಈಶ್ವರ ಭಟ್ ಮಾತನಾಡಿ, ಲ್ಯಾಂಡ್‌ಟ್ರೇಡ್ಸ್ ಸಂಸ್ಥೆಯವರು ಹಲವು ವರ್ಷಗಳಿಂದ ಸೇವಾಶ್ರಮಕ್ಕೆ ನೀಡುತ್ತಿರುವ ಸಹಕಾರ ಮತ್ತು ಕೊಡುಗೆಗಳನ್ನು ಸ್ಮರಿಸಿದರು. ಧಿರೇಂದ್ರನಾಥ್ ಅವರು ಸಾವಿರಾರು ಜನರ ಬದುಕನ್ನು ಬದಲಾಯಿಸಿದವರು, ಆರಂಭದ ಐವರು ಅನಾಥರಲ್ಲಿ ಒಬ್ಬರು ಬ್ಯಾಂಕ್ ಮ್ಯಾನೇಜರ್ ಆಗಿ ನಿವೃತ್ತರಾದರೆ ಉಳಿದವರು ಕೂಡ ತಮ್ಮ ಯಶಸ್ವಿ ಜೀವನ ಕಂಡಿದ್ದಾರೆ, ಇದುವರೆಗೆ 13 ಮಂದಿ ಸೈನಿಕರಾಗಿದ್ದಾರೆ, ಇಬ್ಬರು ಸಾಫ್ಟ್ ವೇರ್ ಎಂಜಿನಿಯರ್‌ಗಳಾಗಿ ಯುಎಸ್‌ಎನಲ್ಲಿದ್ದಾರೆ, ಅನೇಕ ಮಹಿಳೆಯರು ಅನಾಥರಾಗಿ ಬಂದವರು ಶಿಕ್ಷಣ ಪಡೆದು ಬದುಕಿನಲ್ಲಿ ಸಾರ್ಥಕತೆ ಕಂಡಿದ್ದಾರೆ ಎಂದು ಹೇಳಿದರು.
ಆಶ್ರಮವಾಸಿಗಳಿಗೆ ಪೂರಕವಾದ ಕಾಣಿಕೆ, ಹೊದಿಕೆ,ಬೆಚ್ಚಗಿನ ಬಟ್ಟೆ, ವೈದ್ಯಕೀಯ ಉಪಕರಣ ಇತ್ಯಾದಿಗಳನ್ನುವಿತರಿಸಲಾಯಿತು. ಪ್ರಸ್ತುತ ಸೇವಾಶ್ರಮದಲ್ಲಿ 130 ಹಿರಿಯ ನಾಗರಿಕರು, 20 ಅನಾಥರು ಆಶ್ರಯ ಪಡೆದಿದ್ದಾರೆ. ಲ್ಯಾಂಡ್‌ಟ್ರೇಡ್ಸ್ ಸಿಇಒ ರಮೀತ್ ಕುಮಾರ್ ಸಿದ್ದಕಟ್ಟೆ ನಿರೂಪಿಸಿದರು. ಎಚ್‌ಆರ್ ಹಾಗೂ ಅಡ್ಮಿನ್ ಪದ್ಮನಾಭ ಶೆಟ್ಟಿ, ಮಾರ್ಕೆಟಿಂಗ್ ಮುಖ್ಯಸ್ಥ ದರ್ಶನ್ ಪಿ.ವಿ. ಸಂಯೋಜಿಸಿದರು. ವಿದ್ಯಾಲಕ್ಷ್ಮಿ ಹಾಗೂ ನಿಯತ ಭಟ್ ಸಹಕಾರವಿತ್ತರು.