Advertisement
ಹೌದು. ಜಿಲ್ಲೆಗೆ 2018ರಲ್ಲೇ 2ನೇ ಹಂತದಲ್ಲಿ ಕೇಂದ್ರ ಸರ್ಕಾರವು ಉಡಾನ್ ಯೋಜನೆಯನ್ನು ಘೋಷಣೆ ಮಾಡಿದೆ. ಆದರೆ 3 ಮತ್ತು 4ನೇ ಹಂತದಲ್ಲಿ ಘೋಷಣೆ ಮಾಡಿದ ಉಡಾನ್ ಯೋಜನೆಯ ವಿಮಾನಯಾನ ಕಾರ್ಯಾರಂಭವಾಗಿದ್ದರೂ ಕೊಪ್ಪಳದಲ್ಲಿ ಮಾತ್ರ ಉಡಾನ್ ಯೋಜನೆಯಡಿ ವಿಮಾನ ಹಾರಾಟ ನಡೆಸುತ್ತಿಲ್ಲ. ಎಂಎಸ್‌ಪಿಎಲ್ ಕಂಪನಿ ಒಪ್ಪದೇ ಇರುವುದು ಇಷ್ಟೆಲ್ಲ ಕಾರಣವಾಗಿದೆ.
Related Articles
Advertisement
ಟಣಕನಕಲ್-ಹಟ್ಟಿ ಕ್ರಾಸ್‌ವರೆಗೂ ಸರ್ವೇ: ತಾಲೂಕಿನ ಟಣಕನಕಲ್ ಮೊರಾರ್ಜಿ ವಸತಿ ಶಾಲೆಯ ಎಡಭಾಗದಿಂದ ಹಟ್ಟಿ ಕ್ರಾಸ್‌ವರೆಗೂ 500 ಎಕರೆ ಪ್ರದೇಶದಲ್ಲಿ ಭೂಮಿ ಗುರುತು ಮಾಡಿ ಸರ್ವೇ ಕಾರ್ಯ ಆರಂಭಿಸಲಾಗಿದೆ. ಇದೇ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ಆರಂಭಿಸುವುದರಿಂದ ಯಲಬುರ್ಗಾ, ಗಂಗಾವತಿ, ಕುಷ್ಟಗಿ, ಕಾರಟಗಿ, ಕನಕಗಿರಿ ತಾಲೂಕಿಗೂ ಹತ್ತಿರವಾಗಲಿದೆ. ಅಲ್ಲದೇ ಟಣಕನಕಲ್ ಸಮೀಪವೇ ದೇಶದ ಅತಿದೊಡ್ಡ ರಾಷ್ಟ್ರೀಯ ಹೆದ್ದಾರಿ ರಸ್ತೆ ಭಾರತ್ ಮಾಲಾ ಯೋಜನೆಯೂ ಇದೇ. ಮಾರ್ಗದಲ್ಲಿ ಹಾದು ಹೋಗುವುದರಿಂದ ಮುಂದಿನ ದಿನಗಳಲ್ಲಿ ಹೆದ್ದಾರಿಗೆ ಸಮೀಪದಲ್ಲೇ ವಿಮಾನ ನಿಲ್ದಾಣಕ್ಕೂ ನೆರವಾಗಲಿದೆ.
ಹುಬ್ಬಳ್ಳಿ-ಗದಗ, ಬಳ್ಳಾರಿ ಭಾಗದಿಂದ ಬರುವ ಗಣ್ಯರಿಗೆ ತುಂಬ ನೆರವಾಗಲಿದೆ ಎನ್ನುವ ಉದ್ದೇಶಿದಿಂದ ಇಲ್ಲಿಯೇ ಸರ್ವೇ ಕಾರ್ಯ ಕೈಗೊಳ್ಳಲಾಗಿದೆ. ಸರ್ಕಾರದ ಯೋಜನೆಗೆ ತಕ್ಕಂತೆ ಭೂಮಿ ಸಿಗದೇ ತೊಂದರೆ ಅನುಭವಿಸುವಂತಾಗಲಿದೆ. ಆದರೆ ಈ ಭಾಗದಲ್ಲಿ ಭೂಮಿಯೂ ದೊರೆಯಲಿದೆ. ಈ ಭಾಗದಲ್ಲಿ ಉದ್ಯಮಕ್ಕೂ ಒತ್ತು ನೀಡಿದಂತಾಗಲಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೂ ಅವಕಾಶ ದೊರೆತಂತಾಗಲಿದೆ ಎಂಬ ಉದ್ದೇಶದಿಂದ ಟಣಕನಕ್ ಭಾಗದಲ್ಲೇ ಸರ್ವೇ ನಡೆಸಲಾಗುತ್ತಿದೆ. ಲೆಕ್ಕಕ್ಕೆ 500 ಎಕರೆ ಎಂದಿದ್ದರೂ ಮುಂದೆ 1 ಸಾವಿರ ಎಕರೆ ಸರ್ವೇಗೂ ಯೋಜನೆ ಮಾಡಲಾಗಿದೆ.
ಸಂಸದ ಸಂಗಣ್ಣ ಕರಡಿ ಅವರು ಸಲ್ಲಿಸಿದ ಪ್ರಸ್ತಾವನೆ ರಾಜ್ಯ ಸರ್ಕಾರದ ಗಮನದಲ್ಲಿದ್ದು, ಸಿಎಂ ಅವರು ಹೊಸ ನಿಲ್ದಾಣಕ್ಕೆ ಸಮ್ಮತಿ ಸೂಚಿಸಿದರೆ ಮಾತ್ರ ಈ ಭಾಗದಲ್ಲಿ ಮುಂದಿನ ವರ್ಷಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಇಲ್ಲದಿದ್ದರೆ ಈ ಭಾಗದ ಜನರ ಗಗನಯಾನದ ಕನಸು ಕನಸಾಗಿಯೇ ಉಳಿಯಲಿದೆ.
-ದತ್ತು ಕಮ್ಮಾರ