ಮಣಿಪಾಲ: ಪ್ರತಿವರ್ಷ ಭಾರೀ ಮಳೆಗೆ ಭೂಕುಸಿತ ಸಂಭವಿಸಿ ಜನರು ಪ್ರಾಣಕಳೆದುಕೊಳ್ಳುತ್ತಿದ್ದಾರೆ: ಇದು ಆಡಳಿತ ವರ್ಗದ ವೈಫಲ್ಯಕ್ಕೆ ಸಾಕ್ಷಿಯಾಗಿದೆಯೇ ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ಶಿವ ಕೆ: ಇಲ್ಲ ಇದು ಜನರ ಅತಿಯಾಸೆ ಗುಡ್ಡಗಳನ್ನು ತನಗಿಷ್ಟಬಂದಂತೆ ಕಡಿದು ಮನೆ ನಿರ್ಮಿಸಿ ಅಲ್ಲಿ ಪರಿಸರ ಭೂಮಿಯನ್ನು ಹಾಳು ಮಾಡಿದ್ದರ ಪರಿಣಾಮ . ಪರಿಸರ ಹಾನಿ ಮಾಡಿದರೆ ಇದೇ ಶಿಕ್ಷೆಯಾಗುವುದು.
ಜೀತೆಂದ್ರ ಜೀತು: ಮನುಷ್ಯನ ಸ್ವಾರ್ಥದಿಂದ ಆನಾಹುತಗಳು ಆಗುತ್ತಿವೆ. ಸರ್ಕಾರದ ನಿಯಮವನು ಸರಿಯಾಗಿ ರೂಪಿಸಿದರು. ಜನರು ಆಧಿಕಾರಿಗಳಿಗೆ ಲಂಚ ನೀಡಿ, ರಾಜಕೀಯ ಕೃಪಪೋಸಿತರ ಬೆಂಬದೊಂದಿಗೆ ಮನೆ ಕಟ್ಟಡಗಳನು ಕಟ್ಟುತ್ತಾರೆ. ಆರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತರೆ. ಕಾನೂನನ್ನು ಮುರಿಯುತ್ತ ಸಾಗುತ್ತ ,ನ್ಯಾಯಾಲಯಕೆ ಸುಳ್ಳನು ಸತ್ಯವೆಂದು ಬೆಂಬಿಸುವುದರಲ್ಲಿ ನಮ್ಮ ದೇಶದ ನಾಗರೀಕರು ಮಾಡುವ ಆಪಮಾನ. ಗುಡ್ಡದ ಬುಡದಲ್ಲಿ ಮನೆ ಕಟ್ಟಲು ನದಿಯ ತೀರ, ಆಭಯಾ ಆರಣ್ಯದ ಪಕ್ಕದಲ್ಲಿ ವಸತಿ ನಿರ್ಮಾಣ ಅಪಾಯಾದ ಸಂಕೇತ. ಗೂತ್ತಿಲ್ಲದ ಮೂರ್ಖರು ನಮ್ಮವರಲ್ಲ. ಆದನು ದೋಚುವ ಹುಚ್ಚು. ಸರ್ಕಾರ ಬಡವರೀಗೆ 5 ಸೇ ಜಾಗ ಸರ್ಕಾರ ನೀಡಿತ್ತು ಹಿಂದಿನ ಸರ್ಕಾರ. ಆದರೆ ಬಡವ ಮಾತ್ರ 5 ಎಕರೆ ಬೇಲಿ ಹಾಕಿದವರು 99 ಶೇಕಡ ಬಡವರೆ. ಬಾಕೀ ಬಡವರ ಕಾಳಜಿ ವಹೀಸದ ಬಡವ. ಭ್ರಷ್ಟಚಾರ ನಮ್ಮ ಬುಡದಲ್ಲಿದೆ.
ಸತೀಶ್ ರಾವ್: ಪ್ರತಿ ವರ್ಷವೂ ಈ ರೀತಿಯ ಗುಡ್ಡ ಕುಸಿತ,ಪ್ರಕೃತಿಯ ಅಂಚಿನಲ್ಲಿ ವಾಸಿಸುತ್ತಿರುವ ಜನರು ತಾವಾಗಿಯೇ ಮಳೆಗಾಲದಲ್ಲಿ ಸುರಕ್ಷಿತ ಸ್ಥಳಕ್ಕೆ ಹೋಗಬೇಕು, ಕಾರಣ ಅವರಿಗೆ ಅಲ್ಲಿಯ ಪರಿಸ್ಥಿತಿ ಚೆನ್ನಾಗಿ ತಿಳಿದಿರುತ್ತದೆ, ಯಾರನ್ನು ದೋರುವುದು ಸರಿಯಲ್ಲ
ಪ್ರಶಾಂತ್ ಶೆಟ್ಟಿ: ಯಾರಿಗಾದರೂ ಕನಸು ಬಿದ್ದಿರುತ್ತದೆಯೇ? ಸರ್ಕಾರ ನಡೆಸುವವರು ದಿವ್ಯದೃಷ್ಟಿಯನ್ನು ಹೊಂದಿದ್ದಾರೆಯೇ? ಅಸಮಂಜಸ ಪ್ರಶ್ನೆ! ಪ್ರಕೃತಿಯ ಆಗುಹೋಗುಗಳಿಗೆ ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ ಘಟಿಸಿದ ಮೇಲೆ ಪರಿಹಾರ ಕಂಡುಕೊಳ್ಳಬಹುದಷ್ಟೆ!