Advertisement

ಕುಲಶೇಖರದಲ್ಲಿ ಹಳಿ ಮೇಲೆ ಭೂಕುಸಿತ ಹಲವು ರೈಲುಗಳು ರದ್ದು

09:37 AM Aug 25, 2019 | Team Udayavani |

ಮಂಗಳೂರು: ಮಂಗಳೂರು ಜಂಕ್ಷನ್‌-ಜೋಕಟ್ಟೆ ರೈಲು ನಿಲ್ದಾಣದ ಮಧ್ಯೆ ಕುಲಶೇಖರದ ಬಳಿ ರೈಲು ಹಳಿ ಬಳಿ ಶುಕ್ರವಾರ ಭೂಕುಸಿತ ಉಂಟಾಗಿದ್ದು, ರೈಲು ಸಂಚಾರ ವ್ಯತ್ಯಯಗೊಂಡಿದೆ. ಹಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

Advertisement

ರದ್ದಾಗಿರುವ ರೈಲುಗಳು
ನಂ. 56641 ಮಡಂಗಾವ್‌-ಮಂಗಳೂರು ಪ್ಯಾಸೆಂಜರ್‌, ನಂ.22635 ಮಡಂಗಾವ್‌-ಮಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್‌, 16346 ತಿರುವನಂತಪುರ-ಲೋಕಮಾನ್ಯ ತಿಲಕ್‌ ನೇತ್ರಾವತಿ ಎಕ್ಸ್‌ಪ್ರೆಸ್‌, ನಂ.16340 ನಾಗರಕೊಯಿಲ್‌-ಸಿಎಸ್‌ಎಂಟಿ ಎಕ್ಸ್‌ಪ್ರೆಸ್‌, ನಂ.56640 ಮಂಗಳೂರು- ಮಡಂಗಾವ್‌ ಪ್ಯಾಸೆಂಜರ್‌, ನಂ.22636 ಮಂಗಳೂರು- ಮಡಂಗಾವ್‌ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌, ನಂ.12201 ಲೋಕಮಾನ್ಯ ತಿಲಕ್‌-ಕೋಚುವೆಲಿ ಗರೀಬಿ ರಥ್‌, ನಂ.16338 ಎರ್ನಾಕುಳಂ- ಓಖಾ ಎಕ್ಸ್‌ಪ್ರೆಸ್‌, ನಂ. 22634 ಹಜರತ್‌ ನಿಜಾಮುದ್ದೀನ್‌ -ತಿರುನಂತಪುರ ಎಕ್ಸ್‌ಪ್ರೆಸ್‌, ನಂ.19578 ಜಾಮ್‌ನಗರ-ತಿರುನಲ್ವೇಲಿ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರವನ್ನು ಶುಕ್ರವಾರ ರದ್ದುಗೊಳಿಸಲಾಯಿತು. ನಂ.12431 ತಿರುವನಂತಪುರಂ-ಹಜರತ್‌ ನಿಜಾಮುದ್ದೀನ್‌ ರಾಜಧಾನಿ ಎಕ್ಸ್‌ಪ್ರೆಸ್‌ ಮತ್ತು ನಂ. 19331 ಕೋಚುವೆಲಿ-ಇಂದೋರ್‌ ಎಕ್ಸ್‌ಪ್ರೆಸ್‌ ಶುಕ್ರವಾರ ಶೋರ್ನೂರು, ಈರೋಡ್‌, ಜೋಲಾರ್‌ಪೇಟೆ, ರಾಣಿಗುಂಟ ಮೂಲಕ ಸಂಚರಿಸಿತು.

ಆ.24ರಂದು ಸಂಚರಿಸುವ ನಂ.22653 ತಿರುವನಂತಪುರ-ಹಜರತ್‌ ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ ಮತ್ತು ನಂ.16337 ಒಕಾ-ಎರ್ನಾಕುಳಂ ಎಕ್ಸ್‌ ಪ್ರಸ್‌ ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next