Advertisement

ಭೂ ಸುಧಾರಣೆ ಅಧ್ಯಾದೇಶ: ಸರಕಾರಕ್ಕೆ ನೋಟಿಸ್‌ ಜಾರಿ

01:41 AM Aug 21, 2020 | mahesh |

ಬೆಂಗಳೂರು: “ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಅಧ್ಯಾ ದೇಶ-2020′ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್‌ ರಾಜ್ಯ ಸರಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ. ಬಾಗಲಕೋಟೆ ಜಿಲ್ಲೆಯ ಇಳಕಲ್‌ ಮೂಲದ ಸಾಮಾಜಿಕ ಹೋರಾಟ ಗಾರ ನಾಗರಾಜ ಶೇಷಪ್ಪ ಹೊಂಗಲ್‌ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾ| ಎ. ಎಸ್‌. ಓಕ್‌ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ನ್ಯಾಯ ಪೀಠ, ಪ್ರತಿವಾದಿಗಳಾದ ಕಂದಾಯ ಇಲಾಖೆ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಗಳಿಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆಯನ್ನು ಸೆ. 18ಕ್ಕೆ ಮುಂದೂಡಿತು.

Advertisement

ಅರ್ಜಿದಾರರ ಮನವಿ
ಭೂ ಒಡೆತನ, ಖರೀದಿ ಹಾಗೂ ವರ್ಗಾವಣೆಗೆ ಸಂಬಂಧಿಸಿದಂತೆ ಕಾಯ್ದೆಯಲ್ಲಿ ಇದ್ದಂತಹ ಮಿತಿ ಹಾಗೂ ನಿಬಂಧನೆಗಳನ್ನು ತೆಗೆದು ಹಾಕಿ ಸರಕಾರ ಅಧ್ಯಾದೇಶ ಹೊರಡಿಸಿದೆ. ಬ್ರಿಟಿಷ್‌ ಕಾಲದ ಜಮೀ ನಾªರಿ ಪದ್ದತಿ ಮತ್ತೆ ಹುಟ್ಟು ಹಾಕಲು ಪೂರಕವಾಗಿರುವ ಅಧ್ಯಾ ದೇಶ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next