Advertisement

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರೈತ ವಿರೋಧಿ

04:24 PM Jun 15, 2020 | Suhan S |

ಗಜೇಂದ್ರಗಡ: ರೈತರ ಪರವಾದ ಕಾಯ್ದೆಗಳನ್ನು ತರುವುದರ ಬದಲು ಬಂಡವಾಳ ಶಾಹಿಗಳ ತಾಳಕ್ಕೆ ತಕ್ಕಂತೆ ರಾಜ್ಯ ಸರ್ಕಾರ ಕುಣಿಯುವ ಮೂಲಕ ರೈತ ವಿರೋಧಿ  ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ತರುತ್ತಿರುವುದು ಖಂಡನೀಯ. ಕೂಡಲೇ ಸರ್ಕಾರ ಕಾಯ್ದೆಯನ್ನು ಕೈ ಬಿಡಬೇಕು ಎಂದು ತಾಪಂ ಸದಸ್ಯ, ರೈತ ಮುಖಂಡ ಶಶಿಧರ ಹೂಗಾರ ಒತ್ತಾಯಿಸಿದರು.

Advertisement

ರಾಜೂರ ಗ್ರಾಮದ ಸುರೇಶಗೌಡ ಪಾಟೀಲ ಅವರ ಜಮೀನಿನಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ನೇತೃತ್ವದ ರಾಜ್ಯ ಸರ್ಕಾರ ರೈತ ಪರವಾದ ಸರ್ಕಾರ ಎಂದು ಹೇಳುತ್ತಾರೆ. ಆದರೆ ಅನ್ನ ನೀಡುವ ರೈತರ ಭೂಮಿಯನ್ನು ಉಳ್ಳವರು ಕಸಿದುಕೊಳ್ಳುವಂತಹ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿದ್ದಾರೆ. ಇದ್ಯಾವ ರೈತರ ಪರವಾದ ಸರ್ಕಾರ ಎಂದು ಪ್ರಶ್ನಿಸಿದರು.

ರೈತ ಮುಖಂಡ ವಿ.ಬಿ. ಹಪ್ಪಳ ಮಾತನಾಡಿ, ಕೃಷಿ ಭೂಮಿಯನ್ನು ಉಳ್ಳವರು, ಕಾರ್ಪೊರೇಟ್‌ ಉದ್ಯಮಿಗಳು ಮತ್ತು ಬಲಾಡ್ಯ ಉದ್ಯಮಿಗಳು ಮನಸೋ ಇಚ್ಛೇ ಖರೀದಿ ಮಾಡಿ, ರೈತರನ್ನು ಬೀದಿಗೆ ತಳ್ಳುವ ಯೋಜನೆಯನ್ನು ರಾಜ್ಯ ಸರ್ಕಾರ ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಪ್ರಗತಿ ಪರ ರೈತ ಮುಖಂಡರಾದ ಸುರೇಶಗೌಡ ಪಾಟೀಲ, ಮುದಿಯಪ್ಪ ಜೋಗಿನ, ಈಶಪ್ಪ ಗೂಳಿ, ಶರಣಪ್ಪ ಹಾದಿಮನಿ, ಹನಮಂತ ಹಿತ್ತಲಮನಿ, ಪ್ರಭು ಹುಡೇದ, ಶೇಖಪ್ಪ ಮಳಗಿ, ಕಳಕಪ್ಪ ಮಾಗಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next