Advertisement

ಜಮೀನು ಉಳಿಸಲು ಪ್ರಥಮ ಆದ್ಯತೆ : ಐವನ್‌ ಡಿ’ಸೋಜಾ

12:19 AM Jun 29, 2019 | Team Udayavani |

ಸಸಿಹಿತ್ಲು: ಅಂತಾರಾಷ್ಟ್ರೀಯವಾಗಿ ಸರ್ಫಿಂಗ್‌ ಮೂಲಕ ಬೆಳಕಿಗೆ ಬಂದಿರುವ ಹಾಗೂ ಕರಾವಳಿಯ ಭಾಗ ದಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ವರದಾನವಾಗಿರುವ ಸಸಿಹಿತ್ಲು ಮುಂಡ ಬೀಚ್‌ನ ಜಮೀನನ್ನು ಉಳಿಸುವುದಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್‌ ಡಿ’ಸೋಜಾ ಹೇಳಿದರು.

Advertisement

ಹಳೆಯಂಗಡಿ ಗ್ರಾ.ಪಂ.ನ ಸಸಿಹಿತ್ಲುವಿನ ಮುಂಡ ಬೀಚ್ಗೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ತಂಡದೊಂದಿಗೆ ಬೀಚ್‌ನ ಸಮೀಕ್ಷೆಯನ್ನು ನಡೆಸಲು ಅವರು ಜೂ. 28ರಂದು ವಿಶೇಷ ಭೇಟಿ ನೀಡಿ ಮಾಧ್ಯಮದೊಂದಿಗೆ ಮಾತನಾಡಿದರು.

ಪಂಚಾಯತ್‌ನ ಕೊಠಡಿ ನದಿ ಪಾಲಾಗಿದೆ. ಬೀಚ್‌ನ ಜಮೀನಿನ ಅರ್ಧ ಭಾಗವೇ ಸಮುದ್ರ ಸೇರಿದೆ ಇದನ್ನು ಉಳಿಸಲು ಪ್ರಥಮವಾಗಿ ಹೇಗೆ ಕಾರ್ಯೋನ್ಮುಖವಾಗಬೇಕು ಎಂಬುದನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು, ಈಗಾಗಲೇ ಪ್ರವಾಸೋದ್ಯಮದಿಂದ 45 ಕೋ.ರೂ.ಗಳ ನೀಲನಕ್ಷೆಯನ್ನು ತಯಾರಿಸಿ, ಸರಕಾರಕ್ಕೆ ಸಲ್ಲಿಸಲಾಗಿದೆ. ಅಳಿವೆ ಪ್ರದೇಶದಲ್ಲಿ ನದಿ ಕೊರೆತಕ್ಕೆ 1.5 ಕೊ.ರೂ. ವನ್ನು ಬಜೆಟ್‌ನಲ್ಲಿ ಮಂಜೂರು ಮಾಡುವಂತೆ ಶಾಶ್ವತ ತಡೆಗೋಡೆಯ ನಿರ್ಮಾಣಕ್ಕೆ ಇಂದೇ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತೇನೆ ಎಂದರು.

ಪಂ. ಅಂಗಡಿಗೆ ಪರಿಹಾರ

ಪಂಚಾಯತ್‌ ಬೀಚ್‌ನ ಅಭಿವೃದ್ಧಿಗೆ ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸಲು ನಿರ್ಮಿಸಿದ ಮೂರು ಅಂಗಡಿ ಕೋಣೆಯಲ್ಲಿ ಒಂದು ನದಿ ಪಾಲಾಗಿದ್ದು ಇದಕ್ಕೂ ಸಹ ಪ್ರಕೃತಿ ವಿಕೋಪದ ನಿಧಿಯಿಂದ ಸಹಾಯ ಧನವನ್ನು ನೀಡಲಾಗುವುದು. ರಾಜ್ಯದ ಪ್ರವಾಸೋದ್ಯಮ ಮತ್ತು ಸಣ್ಣ ನೀರಾವರಿ ಖಾತೆಯ ಸಚಿವರನ್ನು ಸಸಿಹಿತ್ಲುವಿಗೆ ಕರೆತಂದು ಇಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ನಡೆಸಲು ಕ್ರಮಕೈಗೊಳ್ಳುತ್ತೇನೆ ಎಂದರು.

Advertisement

ಹಳೆಯಂಗಡಿ ಗ್ರಾ.ಪಂ.ನ ಬೀಚ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಚ್. ವಸಂತ ಬೆರ್ನಾರ್ಡ್‌ ಅವರು ಗ್ರಾಮ ಪಂಚಾಯತ್‌ ನಿರ್ಮಿಸಿದ ಅಂಗಡಿ ಕೋಣೆ ನದಿಪಾಲಾಗಿರುವುದರ ಸಹಿತ ಬೀಚ್‌ನಲ್ಲಿ ಅಭಿವೃದ್ಧಿ ಸಮಿತಿಯು ಕೈಗೊಂಡಿದ್ದ ಹಲವು ಯೋಜನೆಗಳ ಬಗ್ಗೆ ಐವನ್‌ ಡಿ’ಸೋಜಾ ಅವರಿಗೆ ಮಾಹಿತಿ ನೀಡಿದರು.

ಮೂಲ್ಕಿ ಬ್ಲಾಕ್‌ ಕಾಂಗ್ರೆಸ್‌ನ ಅಧ್ಯಕ್ಷ ಧನಂಜಯ ಮಟ್ಟು, ತಹಶೀಲ್ದಾರ್‌ ಮಾಣಿಕ್ಯ, ಕಂದಾಯ ನಿರೀಕ್ಷಕ ದಿಲೀಪ್‌ ರೋಡ್ಕಕರ್‌ ಗ್ರಾಮ ಕರಣಿಕ ಮೋಹನ್‌, ಸಹಾಯಕ ನವೀನ್‌, ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ರಾದ ಕೃಷ್ಣ ಕುಮಾರ್‌, ರಾಕೇಶ್‌, ಬಂದರು ಇಲಾಖೆಯ ಎಂಜಿನಿಯರ್‌ರಾದ ದಯಾನಂದ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಉದಯ ಶೆಟ್ಟಿ , ಬೀಚ್ ಸ್ವಚ್ಛತಾ ಮುಖ್ಯಸ್ಥೆ ದೇವಕಿ ಮೆಂಡನ್‌, ಪ್ರಧಾನ ಕಾರ್ಯದರ್ಶಿ ಬಿ.ಎಂ. ಆಸೀಫ್‌, ಬೀಚ್ ಸಮಿತಿಯ ಉಪಾಧ್ಯಕ್ಷ ಅನಿಲ್ ಕುಮಾರ್‌, ಹಳೆಯಂಗಡಿ ಗ್ರಾ.ಪಂ.ನ ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಅಬ್ದುಲ್ ಅಝೀಜ್‌, ಚಂದ್ರಕುಮಾರ್‌, ಹಮೀದ್‌ ಸಾಗ್‌, ಅಬ್ದುಲ್ ಖಾದರ್‌, ಬಶೀರ್‌ ಸಾಗ್‌, ಕಿನ್ನಿಗೋಳಿ ಗ್ರಾ.ಪಂ.ನ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಉಪಾಧ್ಯಕ್ಷೆ ಸುಜಾತಾ ಪೂಜಾರಿ, ಸದಸ್ಯರಾದ ಚಂದ್ರಕುಮಾರ್‌, ಎಪಿಎಂಸಿಯ ಜೋಯೆಲ್ ಡಿ’ಸೋಜಾ, ಮೂಲ್ಕಿ ನಗರ ಪಂಚಾಯತ್‌ನ ಸದಸ್ಯರಾದ ಯೋಗೀಶ್‌ ಕೋಟ್ಯಾನ್‌, ಬಾಲಚಂದ್ರ ಕಾಮತ್‌, ಸಮೀರ್‌ ಎ.ಎಚ್., ಅಶೋಕ್‌ ಪೂಜಾರ್‌, ರಿತೇಶ್‌ ಸಾಲ್ಯಾನ್‌, ಪ್ರಕಾಶ್‌ ಆಚಾರ್ಯ ಕಿನ್ನಿಗೋಳಿ, ಸಾಹುಲ್ ಹಮೀದ್‌ ಕದಿಕೆ, ಧನ್‌ರಾಜ್‌ ಕೋಟ್ಯಾನ್‌ ಸಸಿಹಿತ್ಲು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next